ETV Bharat / bharat

ಸೂಕ್ತ ವಧು ಹುಡುಕುವಲ್ಲಿ ವಿಫಲಗೊಂಡ ಮ್ಯಾರೇಜ್​ ಬ್ಯೂರೋಗೆ ದಂಡ - MARRIAGE BUREAU FINED

ಯುವಕನಿಂದ 4,900 ರೂ. ನೋಂದಣಿ ಶುಲ್ಕ ಪಡೆದುಕೊಂಡಿದ್ದ ಮ್ಯಾರೇಜ್​ ಬ್ಯೂರೋ ಎರಡು ತಿಂಗಳಲ್ಲಿ ಸೂಕ್ತ ವಧುವನ್ನು ಹುಡುಕಿ ಕೊಡುವುದಾಗಿ ಭರವಸೆ ನೀಡಿತ್ತು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Nov 8, 2024, 3:55 PM IST

ಕಣ್ಣೂರು: ವರ್ಷವಾದರೂ ಸೂಕ್ತ ವಧು ಹುಡುಕಿ ಕೊಡುವಲ್ಲಿ ವಿಫಲವಾಗಿರುವ ಮ್ಯಾರೇಜ್​ ಬ್ಯೂರೋ ಒಂದಕ್ಕೆ ಕಣ್ಣೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿದೆ.

ತಮ್ಮ ಸೇವಾ ಭರವಸೆಯನ್ನು ಈಡೇರಿಸಲು ವಿಫಲವಾದ ಸ್ಥಳೀಯ ಮ್ಯಾರೇಜ್​ ಬ್ಯೂರೋ ವಿರುದ್ಧ ಯುವಕನೊಬ್ಬ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಣ್ಣೂರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದೂರುದಾರ ಯುವಕನಿಗೆ 7,000 ರೂ. ಪರಿಹಾರ ನೀಡುವಂತೆ ಮ್ಯಾರೇಜ್​ ಬ್ಯೂರೋಗೆ ಆದೇಶಿಸಿದೆ.

ಯುವಕ ನೀಡಿರುವ ದೂರಿನ ಪ್ರಕಾರ, ಮ್ಯಾರೇಜ್​ ಬ್ಯೂರೋಗೆ ಯುವಕ 4,900 ರೂ. ನೋಂದಣಿ ಶುಲ್ಕ ಪಾವತಿಸಿದ್ದು, ಶುಲ್ಕ ಪಾವತಿಸಿದ ಎರಡು ತಿಂಗಳೊಳಗೆ ಸೂಕ್ತ ವಧುವನ್ನು ಹುಡುಕಿ ಕೊಡುವುದಾಗಿ ಬ್ಯೂರೋ, ಯುವಕನಿಗೆ ಭರವಸೆ ನೀಡಿತ್ತು. ಆದರೆ ಯುವಕ ನಿರಂತರವಾಗಿ ಫಾಲೋ ಅಪ್​ ಮಾಡಿದ ಹೊರತಾಗಿಯೂ ಬ್ಯೂರೋ ಹೇಳಿದಂತೆ ಸೂಕ್ತ ವಧುವನ್ನು ಹುಡುಕಿ ಕೊಟ್ಟಿಲ್ಲ.

5,000 ರೂ, ಪರಿಹಾರವಾಗಿ ಹಾಗೂ ಹೆಚ್ಚುವರಿ 2,000 ರೂ.ಗಳನ್ನು ನ್ಯಾಯಾಲಯದ ವೆಚ್ಚ ಭರಿಸಲು ಒಟ್ಟು 7,000 ರೂ ನೀಡುವಂತೆ ಬ್ಯೂರೋಗೆ ಗ್ರಾಹಕರ ವೇದಿಕೆ ಆದೇಶಿಸಿದೆ.

ಇದನ್ನೂ ಓದಿ: ಪೊಲೀಸರು ವಶಕ್ಕೆ ಪಡೆದ ಹಣ ಬಿಡುಗಡೆಗೆ ಕೋರಿ ಅರ್ಜಿ: ಆರೋಪಿ ತಂದೆಗೆ 10 ಸಾವಿರ ದಂಡ ವಿಧಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.