ಹೈದರಾಬಾದ್(ತೆಲಂಗಾಣ): ದೇಶದ ಪ್ರಮುಖ ಚಿಟ್ ಫಂಡ್ ಕಂಪನಿಯಾಗಿರುವ ಮಾರ್ಗದರ್ಶಿ ಚಿಟ್‌ಫಂಡ್ಸ್ ಪ್ರೈವೇಟ್ ಲಿಮಿಟೆಡ್ ಶುಕ್ರವಾರ ಎರಡು ಹೊಸ ಶಾಖೆಗಳನ್ನು ತೆಲಂಗಾಣ ರಾಜ್ಯದ ಜಗಿತ್ಯಾಲ ಮತ್ತು ಸೂರ್ಯಪೇಟ್ ಜಿಲ್ಲಾ ಕೇಂದ್ರಗಳಲ್ಲಿ ಪ್ರಾರಂಭಿಸಿದೆ.
ಜಗಿತ್ಯಾಲದಲ್ಲಿ 112ನೇ ಶಾಖೆ ಆರಂಭ: ಜಗಿತ್ಯಾಲ ಜಿಲ್ಲಾ ಕೇಂದ್ರದ ಬಸ್ ಡಿಪೋ ಎದುರು 112ನೇ ಶಾಖೆಯನ್ನು ಸಂಸ್ಥೆಯ ಎಂಡಿ ಸಿ.ಎಚ್.ಕಿರಣ್, ಸಂಸ್ಥೆಯ ಉಪಾಧ್ಯಕ್ಷರಾದ ಪಿ.ರಾಜಾಜಿ ಉದ್ಘಾಟಿಸಿದರು. ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಎಂಡಿ ಕಿರಣ್, ನೂತನ ಕಚೇರಿ ಸಿಬ್ಬಂದಿಯನ್ನು ಅಭಿನಂದಿಸಿದರು. ಜಗಿತ್ಯಾಲದ ಮಾರ್ಗದರ್ಶಿ ಶಾಖೆಯು ಗ್ರಾಹಕರ ಸೇವೆಯಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿ ಸಾಧಿಸಲಿ ಎಂದು ಆಶಿಸಿದರು.
ಜಗಿತ್ಯಾಲ ಶಾಖೆಯು ತೆಲಂಗಾಣದ 36ನೇ ಶಾಖೆಯಾಗಿದೆ. ಆರು ದಶಕಗಳಲ್ಲಿ ಲಕ್ಷಾಂತರ ಜನರು ಮಾರ್ಗದರ್ಶಿಯನ್ನು ನಂಬಿದ್ದಾರೆ. ಯಾವುದೇ ಅಗತ್ಯಕ್ಕೂ ಮಾರ್ಗಸೂಚಿ ಇರುತ್ತದೆ ಎಂಬ ವಿಶ್ವಾಸ ಗ್ರಾಹಕರಲ್ಲಿದೆ. ಇದು ಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣ. ಆಧುನಿಕ ತಂತ್ರಜ್ಞಾನದೊಂದಿಗೆ ನಾವು ಗ್ರಾಹಕರನ್ನು ತಲುಪುತ್ತಿದ್ದೇವೆ. ಅವರ ಅಗತ್ಯಗಳಿಗೆ ಅನುಗುಣವಾಗಿ ಎಲ್ಲರಿಗೂ ಸೇವೆ ಲಭ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಟ್ ಫಂಡ್ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಗ್ರಾಹಕರು ಭಾಗವಹಿಸಿದ್ದರು.
ಸೂರ್ಯಪೇಟೆಯಲ್ಲಿ 113ನೇ ಶಾಖೆ: ಸೂರ್ಯಪೇಟೆ ಜಿಲ್ಲಾ ಕೇಂದ್ರದಲ್ಲಿ 113ನೇ ಶಾಖೆಯನ್ನು ಸಂಸ್ಥೆಯ ಎಂಡಿ ಶೈಲಜಾ ಕಿರಣ್ ಉದ್ಘಾಟಿಸಿದರು. ಮಾರ್ಗದರ್ಶಿ ತನ್ನ ಅರವತ್ತು ವರ್ಷಗಳ ಅಸ್ತಿತ್ವದಲ್ಲಿ ಲಕ್ಷಾಂತರ ಗ್ರಾಹಕರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದೆ. ಯಾವುದೇ ಅಗತ್ಯಕ್ಕೆ ಮಾರ್ಗದರ್ಶಿ ಇದೆ ಎಂಬ ವಿಶ್ವಾಸವನ್ನು ಗ್ರಾಹಕರು ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಒಂದೇ ದಿನದಲ್ಲಿ ಎರಡು ಶಾಖೆಗಳನ್ನು ತೆರೆಯಲು ತುಂಬಾ ಸಂತೋಷವಾಗಿದೆ. ಮಾರ್ಗದರ್ಶಿಯನ್ನೇ ನಂಬಿ ಲಕ್ಷಾಂತರ ಕುಟುಂಬಗಳು ಬಂಡವಾಳ ಹೂಡಿವೆ. ಅವರ ಆರ್ಥಿಕ ಅಭಿವೃದ್ಧಿಗೆ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಚಿಟ್ ಫಂಡ್ ಉದ್ಯಮದಲ್ಲಿನ ನಿಜವಾದ ಮೌಲ್ಯಗಳು ಮತ್ತು ವಿಶ್ವಾಸಾರ್ಹತೆ ಈ ಕ್ಷೇತ್ರದಲ್ಲಿ ಸ್ಪೂರ್ತಿದಾಯಕವಾಗಿದೆ. ಹೆಚ್ಚಿನ ಸೇವೆಗಳನ್ನು ಒದಗಿಸಲು ನಮ್ಮ ಸಿಬ್ಬಂದಿ ಸದಾ ಸಿದ್ಧರಿರುತ್ತಾರೆ ಎಂದರು.
ಇದನ್ನೂ ಓದಿ: ಹೈದರಾಬಾದ್: ಮಾರ್ಗದರ್ಶಿ ಚಿಟ್ ಫಂಡ್ಸ್ನ 111ನೇ ಶಾಖೆ ಉದ್ಘಾಟನೆ