ETV Bharat / bharat

ಮರಾಠಾ ಮೀಸಲಾತಿ ವಿವಾದ: ಉಪವಾಸ ಸತ್ಯಾಗ್ರಹ ಹಿಂಪಡೆದ ಮನೋಜ್​ ಜರಾಂಗೆ ಪಾಟೀಲ್ - Maratha Reservation Row

ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ತಾವು ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಿದ್ದಾರೆ.

author img

By PTI

Published : Jul 24, 2024, 1:26 PM IST

ಮನೋಜ್​ ಜರಾಂಗೆ ಪಾಟೀಲ್
ಮನೋಜ್​ ಜರಾಂಗೆ ಪಾಟೀಲ್ (IANS)

ಜಲ್ನಾ (ಮಹಾರಾಷ್ಟ್ರ): ಮರಾಠಾ ಮೀಸಲಾತಿ ವಿವಾದಕ್ಕೆ ಸಂಬಂಧಿಸಿದಂತೆ ಐದು ದಿನಗಳ ಹಿಂದೆ ಆರಂಭಿಸಿದ್ದ ಅನಿರ್ದಿಷ್ಟಾವಧಿ ಉಪವಾಸವನ್ನು ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಬುಧವಾರ ಹಿಂಪಡೆದಿದ್ದಾರೆ. ಮೀಸಲಾತಿ ಹೋರಾಟವನ್ನು ಮುಂದುವರಿಸಲು ತಾವು ಜೀವಂತವಾಗಿರುವುದು ಅಗತ್ಯವಾಗಿದೆ ಎಂದು ಸಮುದಾಯದ ಜನತೆ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸುತ್ತಿರುವುದಾಗಿ ಅವರು ಹೇಳಿದರು. ಜಲ್ನಾ ಜಿಲ್ಲೆಯ ತಮ್ಮ ಹುಟ್ಟೂರಾದ ಅಂತರ್ವಾಲಿ ಸರಾಟಿ ಗ್ರಾಮದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಈ ನಿರ್ಧಾರ ಪ್ರಕಟಿಸಿದರು.

ಕುಣಬಿ ಸಮುದಾಯದವರನ್ನು ಮರಾಠಾ ಸಮುದಾಯದ ಸದಸ್ಯರ 'ಋಷಿ ಸೋಯಾರೆ' (ರಕ್ತ ಸಂಬಂಧಿಗಳು) ಎಂದು ಗುರುತಿಸುವ ಕರಡು ಅಧಿಸೂಚನೆಯನ್ನು ಜಾರಿಗೆ ತರುವುದು ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಕುಣಬಿಗಳಿಗೆ ಮೀಸಲಾತಿ ನೀಡುವುದು ಸೇರಿದಂತೆ ತಮ್ಮ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜರಾಂಗೆ ಪಾಟೀಲ್ ಜುಲೈ 20 ರಂದು ತಮ್ಮ ಇತ್ತೀಚಿನ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಗ್ಲೂಕೋಸ್​ ಸಲೈನ್​ ನಿರಾಕರಿಸಿದ್ದ ಅವರು ಮಂಗಳವಾರ ರಾತ್ರಿಯಿಂದ ಸಲೈನ್​ ಹಾಕಿಸಲು ಒಪ್ಪಿದ್ದಾರೆ.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಜೀವಂತವಾಗಿರಬೇಕೆಂದು ನನ್ನ ಸಮುದಾಯ ಬಯಸುತ್ತದೆ. ಈ ಬಗ್ಗೆ ಜನರಿಂದ ತೀವ್ರ ಒತ್ತಡವಿದೆ. ನಾನು ಸತ್ತರೆ, ಅದು ಸಮುದಾಯದೊಳಗೆ ವಿಭಜನೆಗೆ ಕಾರಣವಾಗುತ್ತದೆ. ಆದ್ದರಿಂದ ನಾನು ನನ್ನ ಉಪವಾಸವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದೇನೆ." ಎಂದು ಹೇಳಿದರು.

ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ಬಿಜೆಪಿ ಎಂಎಲ್​ಸಿ ಪ್ರವೀಣ್ ದಾರೇಕರ್ ಮತ್ತು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ವಿರೋಧಿಸುತ್ತಿದ್ದಾರೆ ಎಂದು ಜರಾಂಗೆ ಟೀಕಿಸಿದರು.

ಮೀಸಲಾತಿಗೆ ವಿರೋಧಿಸುವುದರಿಂದ ಮರಾಠಾ ಸಮುದಾಯವು ಆಡಳಿತಾರೂಢ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ದೂರ ಸರಿಯಲು ನಿರ್ಧರಿಸಬಹುದು ಎಂದು ಹೇಳಿದ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂಭಾವ್ಯ ಪರಿಣಾಮಗಳ ಬಗ್ಗೆ ಸುಳಿವು ನೀಡಿದರು. ಬಿಜೆಪಿಯನ್ನು ಸೋಲಿಸುವಂತೆ ಅವರು ಮರಾಠಾ ಸಮುದಾಯದ ಸದಸ್ಯರಿಗೆ ಇದೇ ಸಂದರ್ಭದಲ್ಲಿ ನೇರವಾಗಿ ಮನವಿ ಮಾಡಿದರು.

ರಾಜ್ಯ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಜರಾಂಗೆ ಆರೋಪಿಸಿದರು. 2013 ರ ವಂಚನೆ ಪ್ರಕರಣದಲ್ಲಿ ಪುಣೆ ನ್ಯಾಯಾಲಯವು ಹೊಸ ಜಾಮೀನು ರಹಿತ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಅವರು ಈ ಆರೋಪ ಮಾಡಿದ್ದಾರೆ.

ಮರಾಠಿ ನಾಟಕ 'ಶಂಭುರಾಜೆ' (ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದೆ) ನಿರ್ಮಾಪಕ-ನಿರ್ದೇಶಕ ಧನಂಜಯ್ ಘೋರ್ಪಡೆ ಅವರು ಜಲ್ನಾದಲ್ಲಿ ನಾಟಕದ ಆರು ಪ್ರದರ್ಶನಗಳನ್ನು ಆಯೋಜಿಸಿದ್ದರು. ಆದರೆ ಜರಾಂಗೆ ಪಾಟೀಲ್ ಮತ್ತು ಅವರ ಸಹಚರರು ಘೋರ್ಪಡೆ ಅವರಿಗೆ 13.21 ಲಕ್ಷ ರೂ.ಗಳನ್ನು ಪಾವತಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ನೀಟ್​ ಪ್ರಶ್ನೆಪತ್ರಿಕೆ ಅಕ್ರಮ ವ್ಯವಸ್ಥಿತ ಪಿತೂರಿಯಲ್ಲ, ಪರೀಕ್ಷೆ ರದ್ದು ಪಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​ - Supreme Court on NEET exam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.