ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಅಭ್ಯರ್ಥಿ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಜಂಗ್ಪುರ್ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿ ಮಾತನಾಡಿದ ಅವರು, ಇಂದು ಜಂಕ್ಪುರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು, ಕಳೆದ 10 ವರ್ಷದಿಂದ ಅರವಿಂದ್ ಕೇಜ್ರಿವಾಲ್ ಅವರ ತಂಡಕ್ಕೆ ನೀಡಿದ ಬೆಂಬಲವನ್ನೇ ಸಾರ್ವಜನಿಕರು ನೀಡುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ನಾನು ಜಂಕ್ಪುರ ಕ್ಷೇತ್ರದಿಂದ ಆರಿಸಿ ಶಾಸಕನಾದರೆ, ನಾನು ಕ್ಷೇತ್ರದ ಜನರ ಸುಖ- ದುಃಖಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ. ನಗರದ ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಪ್ರೋತ್ಸಾಹಿಸುವ ಭವಿಷ್ಯ ನಿರ್ಮಾಣಕ್ಕೆ ಸಹಾಯ ಮಾಡಲಾಗುವುದು ಎಂದರು.
ಕೇಜ್ರಿವಾಲ್ ಸರ್ಕಾರದಲ್ಲಿ ದೆಹಲಿಯ ಜನರ ಜೀವದಲ್ಲಿ ಬದಲಾವಣೆ ಆಗಿದೆ. ನಗರ ಮತ್ತು ನಿವಾಸಿಗಳಿಗಾಗಿ ಕೇಜ್ರಿವಾಲ್ ದೂರದೃಷ್ಟಿಯನ್ನು ಹೊಂದಿದ್ದಾರೆ. ಮಹಿಳಾ ಸಮ್ಮಾನ್ ಯೋಜನೆ, ಸಂಜೀವಿನಿ ಯೋಜನೆ ಮತ್ತು ಪುಜಾರಿ- ಗ್ರಂಥಿ ಸಮ್ಮಾನ್ ಯೋಜನೆಯಂತಹ ಕಲ್ಯಾಣ ಕಾರ್ಯಕ್ರಮದ ಬಗ್ಗೆ ಎಎಪಿ ಭರವಸೆ ನೀಡುತ್ತದೆ.
ಇದೇ ವೇಳೆ ಬಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಭಾರತೀಯ ಜನತಾ ಪಕ್ಷ ಸುಳ್ಳಿನ ಫ್ಯಾಕ್ಟರಿಯಾಗಿದ್ದು, ಆ ಪಕ್ಷ ಮೊದಲು ಸಿಎಂ ಯಾರು ಎಂಬುದು ನಿರ್ಧರಿಸಲಿ ಎಂದು ಕುಟುಕಿದರು.
ನಾಮಪತ್ರ ಸಲ್ಲಿಕೆಗೆ ಮುನ್ನ ಮನೀಶ್ ಸಿಸೋಡಿಯಾ, ಎಎಪಿ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ಶೋ ನಡೆಸಿದರು. ಈ ವೇಳೆ ಅವರು ಕಿಲೊಕರಿಯಲ್ಲಿದ್ದ ಪುರಾತನ ಅಂಗೊರಿ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಸಿಸೋಡಿಯ ತಮ್ಮ ಭದ್ರಕೋಟೆಯಾದ ಪತ್ಪರ್ಗಂಜ್ ಬದಲಾಗಿ ಜಂಗ್ಪುರ್ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಸಿಸೋಡಿಯಾ ವಿರುದ್ಧ ಬಿಜೆಪಿ ಅಭ್ಯರ್ಥಿ ತರ್ವಿಂದರ್ ಸಿಂಗ್ ಮರ್ವಾಹ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಫರ್ಹದ್ ಸುರಿ ಚುನಾವಣೆ ಸ್ಪರ್ಧಿಸುತ್ತಿದ್ದಾರೆ.
ದೆಹಲಿಯ 70 ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆ. 8ರಂದು ಮತ ಏಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ. (ಐಎಎನ್ಎಸ್)
ಇದನ್ನೂ ಓದಿ: ’ಭಾರತದ ರಾಜ್ಯ‘ದ ವಿರುದ್ಧ ಹೋರಾಡುತ್ತಿದ್ದೇವೆ: ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಕೆಂಡ