ETV Bharat / bharat

ಇಂದು ಮಹಾ ಶಿವರಾತ್ರಿ: ದೇಶಾದ್ಯಂತ ಶಿವನಿಗೆ ವಿಶೇಷ ಆರತಿ, ಪೂಜೆ

ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆಯ ಶಿವನ ದೇವಾಲಯಗಳಿಗೆ ಭಕ್ತರ ದಂಡು ಹರಿದು ಬರುತ್ತಿದೆ. ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.

ಮಹಾ ಶಿವರಾತ್ರಿ
ಮಹಾ ಶಿವರಾತ್ರಿ
author img

By ETV Bharat Karnataka Team

Published : Mar 8, 2024, 9:30 AM IST

Updated : Mar 8, 2024, 12:30 PM IST

ದೇಶಾದ್ಯಂತ ಮಹಾ ಶಿವರಾತ್ರಿ ಸಂಭ್ರಮ

ದೆಹಲಿ: ದೇಶದಾದ್ಯಂತ ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಶಿವ ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಿದ್ದಾರೆ. ಎಲ್ಲೆಡೆ ಶಿವ ನಾಮ ಸ್ಮರಣೆ ನಡೆಯುತ್ತಿದೆ. ಆಂಧ್ರಪ್ರದೇಶದ ಶ್ರೀಕಾಳಹಸ್ತಿ, ತಿರುಪತಿ, ವಿಜಯವಾಡದ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಶಿವಘೋಷ ಮೊಳಗುತ್ತಿದೆ.

ಉತ್ತರ ಪ್ರದೇಶದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರು ದೇಗುಲಗಳಿಗೆ ತೆರಳಿ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಬೆಳಗ್ಗೆ ಶಿವನಿಗೆ ಆರತಿ ಬೆಳಗಲಾಯಿತು. ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಇಂದಿನ ಮಂಗಳಾರತಿಯಿಂದ ಮಾರ್ಚ್ 9ರ ಭೋಗ್ ಆರತಿಯ ಸಮಯದವರೆಗೆ ಒಟ್ಟು 36 ಗಂಟೆಗಳ ಪೂಜಾ ವಿಧಿ ವಿಧಾನಗಳನ್ನು ನಿರಂತರವಾಗಿ ನೇರಪ್ರಸಾರ ಮಾಡುತ್ತಿದೆ. ಅಯೋಧ್ಯೆಯ ನಾಗೇಶ್ವರನಾಥ ದೇವಾಲಯಕ್ಕೆ ಅಪಾರ ಭಕ್ತರು ಆಗಮಿಸಿದ್ದಾರೆ. ಇಲ್ಲಿನ ಸಂಗಮದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ಶಿವ ನಾಮ ಸ್ಮರಣೆ ಮಾಡುತ್ತಿದ್ದಾರೆ.

ದೆಹಲಿಯ ಗೌರಿ ಶಂಕರ ದೇವಾಲಯ, ಮಹಿಪಾಲ್‌ಪುರದಲ್ಲಿರುವ ಶಿವಮೂರ್ತಿ, ಉತ್ತರಾಖಂಡದ ಹರಿದ್ವಾರದ ದಕ್ಷೇಶ್ವರ ಮಹಾದೇವ ದೇವಾಲಯ, ಪಂಜಾಬ್​ನ ಶಿವಲಾ ಬಾಗ್ ಭೈಯಾನ್ ದೇವಸ್ಥಾನ, ಮಹಾರಾಷ್ಟ್ರದ ನಾಸಿಕ್‌ನ ತ್ರಯಂಬಕೇಶ್ವರ ದೇವಸ್ಥಾನ, ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಬೆಳಗಿನ ಆರತಿ ನಡೆಯಿತು. ಇದಲ್ಲದೇ ರಾಷ್ಟ್ರಾದ್ಯಂತ ಭಗವಾನ್ ಶಿವನಿಗಾಗಿ ಭಕ್ತರು ಉಪವಾಸದ ಮೂಲಕ ಶಿವಾರಾಧನೆ ಮಾಡುತ್ತಿದ್ದಾರೆ. ಶಿವ ದೇಗುಲಗಳು ಆಕರ್ಷಕ ವಿದ್ಯುತ್​ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಶಿವನ ಮರಳು ಶಿಲ್ಪ: ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪ್ರತೀ ವಿಶೇಷ ದಿನವನ್ನೂ ಮರಳು ಕಲೆಯ ಮೂಲಕ ಅರ್ಥಪೂರ್ಣವಾಗಿ ಪ್ರಸ್ತುತಪಡಿಸುತ್ತಿರುತ್ತಾರೆ. ಈ ಬಾರಿಯ ಮಹಾ ಶಿವರಾತ್ರಿಗೆ ಒಡಿಶಾದ ಪುರಿಯಲ್ಲಿ 500 ಶಿವಲಿಂಗಗಳಿಂದ ಮರಳಿನ ಮೇಲೆ ಶಿವನ ಆಕೃತಿ ಬಿಡಿಸಿದ್ದಾರೆ. ಈ ಕಲಾಕೃತಿ ಸಾಕ್ಷಾತ್​ ಶಿವನೇ ಮರಳಲ್ಲಿ ಮೈದಳೆದಂತಿದೆ.

ಬಿಸ್ಕೆಟ್​ನಲ್ಲಿ ಅರಳಿದ ಕೇದಾರನಾಥ ದೇಗುಲ: ಉತ್ತರ ಪ್ರದೇಶದಲ್ಲಿ ಅಜಯ್ ಗುಪ್ತಾ ಎಂಬ ಮತ್ತೊಬ್ಬ ಅಂತಾರಾಷ್ಟ್ರೀಯ ಮರಳು ಕಲಾವಿದ ಬಿಸ್ಕೆಟ್‌ಗಳನ್ನು ಬಳಸಿ ಕೇದಾರನಾಥ ದೇವಾಲಯದ ಪ್ರತಿಕೃತಿ ತಯಾರಿಸಿದ್ದಾರೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗುಪ್ತಾ, "ನಾವು ಬಿಸ್ಕೆಟ್ ಬಳಸಿ ಕೇದಾರನಾಥ ದೇವಾಲಯದ ಪ್ರತಿಕೃತಿ ಮಾಡಿದ್ದೇವೆ. ಕಳೆದ ವರ್ಷ 1,111 ಬಿಸ್ಕೆಟ್‌ಗಳಿಂದ ಶಿವಲಿಂಗವನ್ನು ತಯಾರಿಸಿದ್ದೆವು. ಅದರ ನಂತರ ದೇವಾಲಯವನ್ನು ನಿರ್ಮಿಸಬೇಕು ಎಂಬ ಆಲೋಚನೆ ಮಾಡಿದ್ದೆವು" ಎಂದು ತಿಳಿಸಿದರು.

ಹಿಂದೂಗಳ ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ, ಮಾಘ ತಿಂಗಳ 14ನೇ ದಿನದಂದು ಮಹಾ ಶಿವರಾತ್ರಿ ಆಚರಿಸಲಾಗುತ್ತದೆ. ಇದು ಶಿವ ಮತ್ತು ಪಾರ್ವತಿ ದೇವಿಯ ವಿವಾಹದ ರಾತ್ರಿಯನ್ನು ಸೂಚಿಸುತ್ತದೆ.

ಇದನ್ನೂ ಓದಿ:ತಮಿಳುನಾಡು: ಮಹಾ ಶಿವರಾತ್ರಿ ಪ್ರಯುಕ್ತ ಜೋಡೆತ್ತಿನ ಗಾಡಿ ಸ್ಪರ್ಧೆ

Last Updated : Mar 8, 2024, 12:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.