ಉಜ್ಜೈನಿ: ನಿವೃತ್ತ ಯೋಧನೊಬ್ಬ ಪೊಲೀಸರ ಕಣ್ಣೆದುರಲ್ಲೇ ಮಧ್ಯಪ್ರದೇಶದ ಬಿಜೆಪಿ ಯುವ ನಾಯಕನ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ. ಪ್ರಕಾಶ್ ಯಾದವ್ ಎಂಬವರು ಗಾಯಗೊಂಡಿದ್ದು, ಎಸ್.ಪಿ.ಭಡೋರಿಯಾ ದಾಳಿ ನಡೆಸಿದ ಆರೋಪಿ. ಶುಕ್ರವಾರ ಮಧ್ಯರಾತ್ರಿ ಹಮುಖೇಡಿ ಎಂಬಲ್ಲಿ ಘಟನೆ ನಡೆದಿದೆ.
ಪ್ರಕಾಶ್ ಯಾದವ್ ಮತ್ತು ಭಡೋರಿಯಾ ನಡುವಿನ ಹಣಕಾಸಿನ ಮನಸ್ತಾಪದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಪೊಲೀಸರು ಯಾದವ್ ಮನೆಗೆ ಬಂದಿದ್ದರು. ಇದಾದ ಕೆಲವೇ ಹೊತ್ತಲ್ಲಿ ಭಡೋರಿಯಾ ತಮ್ಮ ಲೈಸೆನ್ಸ್ ಪಿಸ್ತೂಲ್ನಿಂದ ಪೊಲೀಸರೆದುರೇ ದಾಳಿ ನಡೆಸಿದ್ದಾನೆ.
ಗುಂಡು ಯಾದವ್ ಅವರ ಬಲಭಾಗದ ಎದೆಗೆ ತಗುಲಿದ್ದು ತಕ್ಷಣ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಮಾಹಿತಿ ನೀಡಿದ್ದಾರೆ.
ಭಡೋರಿಯಾ ಸಹೋದರನೂ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದು, ಆತನನ್ನೂ ಬಂಧಿಸಲಾಗಿದೆ. ನಾಪತ್ತೆಯಾಗಿರುವ ಭಡೋರಿಯಾ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಲಾಗಿದೆ ಎಂದು ವರದಿ ತಿಳಿಸಿದೆ. (ಎಎನ್ಐ)
ಇದನ್ನೂ ಓದಿ: ಪಿಸ್ತೂಲ್ನಿಂದ ಹಾರಿದ ಗುಂಡು; ಸಬ್ಇನ್ಸ್ಪೆಕ್ಟರ್ಗೆ ಗಾಯ, ಹೆಡ್ಕಾನ್ಸ್ಟೇಬಲ್ ಮೃತ