ಲಖನೌ (ಉತ್ತರ ಪ್ರದೇಶ): ಲಖನೌದ ಸಾರಿಗೆ ನಗರ ಪ್ರದೇಶದಲ್ಲಿ ಶನಿವಾರ ಸಂಜೆ ಮೂರಂತಸ್ತಿನ ಕಟ್ಟಡವೊಂದು ಹಠಾತ್ ಕುಸಿದಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಇಂದು (ಭಾನುವಾರ) ತಿಳಿಸಿದ್ದಾರೆ.
ಈ ಕಟ್ಟಡದಲ್ಲಿರುವ ಗೋದಾಮುಗಳು ಮತ್ತು ಮೋಟಾರ್ ವರ್ಕ್‌ಶಾಪ್ ಕುಸಿದ ಪರಿಣಾಮ ಒಟ್ಟು 8 ಜನ ಸಾವನ್ನಪ್ಪಿದ್ದರೆ, 28 ಜನರು ಗಾಯಗೊಂಡಿದ್ದಾರೆ. ಶನಿವಾರ ಐವರ ಮೃತದೇಹಗಳನ್ನು ತೆಗೆಯಲಾಗಿತ್ತು. ಇಂದು ಮತ್ತೆ ಮೂವರು ಶವವಾಗಿ ಪತ್ತೆಯಾಗಿದ್ದು, ಮೃತರನ್ನು ರಾಜ್ ಕಿಶೋರ್ (27), ರುದ್ರ ಯಾದವ್ (24) ಮತ್ತು ಜಗರುಪ್ ಸಿಂಗ್ (35) ಎಂದು ಗುರುತಿಸಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಎಂದು ಪರಿಹಾರ ಆಯುಕ್ತ ಜಿ ಎಸ್ ನವೀನ್ ತಿಳಿಸಿದ್ದಾರೆ.
ಮುಂದುವರಿದ ಕಾರ್ಯಾಚರಣೆ: ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳಡಿ ಬೇರೆ ಯಾರೂ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳುವತ್ತ ಗಮನಹರಿಸಿದ್ದೇವೆ ಎಂದು ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಟ್ಟಡವನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಘಟನೆಯ ಸಮಯದಲ್ಲಿ ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ 4:45 ಕ್ಕೆ ಘಟನೆ ಸಂಭವಿಸಿದಾಗ ಸಂತ್ರಸ್ತರಲ್ಲಿ ಹೆಚ್ಚಿನವರು ನೆಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು. ಗಾಯಾಳುಗಳನ್ನು ಜಿಲ್ಲೆಯ ಲೋಕ ಬಂಧು ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
#WATCH | Lucknow Building collapse | Joint CP Law & Order Amit Verma says, " 8 people have died and the injured have been admitted to the hospital...a rescue operation is underway...a committee will be formed which will investigate the reasons for the collapse of the building..." pic.twitter.com/Avx50oVsSp
— ANI (@ANI) September 8, 2024
ಅಧಿಕಾರಿಗಳ ಪ್ರಕಾರ, ಕಟ್ಟಡವು ಕೆಳ ಮಹಡಿಯಲ್ಲಿ ಮೋಟಾರ್ ವರ್ಕ್‌ಶಾಪ್ ಮತ್ತು ಗೋದಾಮು, ಮೊದಲ ಮಹಡಿಯಲ್ಲಿ ವೈದ್ಯಕೀಯ ಗೋದಾಮು ಮತ್ತು ಎರಡನೇ ಮಹಡಿಯಲ್ಲಿ ಕಟ್ಲೇರಿ ಗೋದಾಮು ಇತ್ತು. ಕಟ್ಟಡದ ಪಿಲ್ಲರ್ ಬಿರುಕು ಬಿಟ್ಟಿದೆ ಎಂದು ವೈದ್ಯಕೀಯ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಗಾಯಗೊಂಡವರಲ್ಲಿ ಒಬ್ಬರಾಗಿರುವ ಆಕಾಶ್ ಸಿಂಗ್ ಹೇಳಿದ್ದಾರೆ. ಮಳೆ ಬಂದಿದ್ದರಿಂದ ಕೆಳಮಹಡಿಗೆ ಬಂದಿದ್ದೆವು. ಕಟ್ಟಡದ ಪಿಲ್ಲರ್‌ನಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದೇವೆ. ಇಡೀ ಕಟ್ಟಡವು ಏಕಾಏಕಿ ನಮ್ಮ ಮೇಲೆ ಕುಸಿದು ಬಿದ್ದಿದೆ ಎಂದು ತಮ್ಮ ಸಂಕಷ್ಟವನ್ನು ವಿವರಿಸಿದರು.
ಇದನ್ನೂ ಓದಿ: ಮೂರು ಅಂತಸ್ತಿನ ಕಟ್ಟಡ ಕುಸಿತ, ಇಬ್ಬರು ಬಾಲಕಿಯರು ಸೇರಿ ಮೂವರ ಸಾವು - Building Collapsed