ETV Bharat / bharat

ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ ರಾಹುಲ್​ ಗಾಂಧಿ: 20 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಣೆ - Rahul Gandhi Declares Assets - RAHUL GANDHI DECLARES ASSETS

ರಾಹುಲ್​ ಗಾಂಧಿ ವಯನಾಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ಅವರು ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡಿದ್ದಾರೆ.

Lok Sabha Election 2024: Rahul Gandhi Declares Assets Worth Over Rs 20 Crore
ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸಿದ ರಾಹುಲ್​ ಗಾಂಧಿ: 20 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಣೆ
author img

By ETV Bharat Karnataka Team

Published : Apr 5, 2024, 9:18 AM IST

ವಯನಾಡು (ಕೇರಳ): ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಇದೇ ವೇಳೆ ಅವರು ಚುನಾವಣಾ ಆಯೋಗಕ್ಕೆ ಅವರು ತಮ್ಮ ಆಸ್ತಿ ವಿವರವನ್ನೂ ಸಲ್ಲಿಕೆ ಮಾಡಿದ್ದಾರೆ. 20 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ರಾಹುಲ್​ ಗಾಂಧಿ ಘೋಷಿಸಿಕೊಂಡಿದ್ದಾರೆ.

ಚುನಾವಣಾಧಿಕಾರಿಗೆ ಸಲ್ಲಿಸಿದ ಆಸ್ತಿ ವಿವರದ ಅಫಿಡವಿಟ್ ಪ್ರಕಾರ, ರಾಹುಲ್​ ಗಾಂಧಿ 9 ಕೋಟಿ ರೂ.ಗೂ ಹೆಚ್ಚು ಚರಾಸ್ತಿ ( 9,24,59,264 ರೂ.) ಮತ್ತು 11 ಕೋಟಿ ರೂ.ಗೂ ಹೆಚ್ಚು ( 11,15,02,598 ರೂ) ಸ್ಥಿರಾಸ್ತಿ ಹೊಂದಿದ್ದೇನೆ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಬಳಿ 20 ಕೋಟಿ ಆಸ್ತಿ ಇದೆ ಎಂದು ಹೇಳಿದ್ದಾರೆ.

ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಸಹ ಮಾಲೀಕತ್ವದಲ್ಲಿ ಭೂಮಿ ಹೊಂದಿದ್ದೇನೆ ಎಂದು ಆಸ್ತಿ ವಿವರದಲ್ಲಿ ಘೋಷಿಸಿದ್ದಾರೆ. ಅಫಿಡವಿಟ್ ಪ್ರಕಾರ ಅವರ ಆದಾಯದ ಮೂಲವು ಸಂಸದರ ಸಂಬಳ, ರಾಯಧನ, ಬಾಡಿಗೆ, ಬಡ್ಡಿ, ಬಾಂಡ್‌ಗಳು, ಡಿವಿಡೆಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳು ಹಾಗೂ ಇತರ ಆದಾಯಗಳಿಂದ ಬರುವ ಬಂಡವಾಳದ ಲಾಭವಾಗಿದೆ ಎಂದು ಹೇಳಿಕೊಂಡಿದ್ದಾರೆ.

2022 - 23ನೇ ಸಾಲಿನಲ್ಲಿ ಒಟ್ಟು ಆದಾಯ 1,02,78,680 ರೂಗಳೆಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. 1994 ರಲ್ಲಿ ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು 1995 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್ (ಅಭಿವೃದ್ಧಿ ಅಧ್ಯಯನ) ಪೂರ್ಣಗೊಳಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಮಾಹಿತಿ ನೀಡಿದ್ದಾರೆ.

ಭರ್ಜರಿ ರ್‍ಯಾಲಿ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದರು. ಇದಕ್ಕೂ ಮುನ್ನ ಯುಡಿಎಫ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರು ಕಲ್ಪೆಟ್ಟಾದಲ್ಲಿ ರಾಹುಲ್ ಅವರನ್ನು ಸ್ವಾಗತಿಸಿದರು. ಸಹೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ರಾಹುಲ್ ಕಲ್ಪೆಟ್ಟಾದಿಂದ ಸಿವಿಲ್ ಸ್ಟೇಷನ್ ವರೆಗೆ ರೋಡ್ ಶೋ ನಡೆಸಿದರು. ವಯನಾಡಿನ ಸಮಸ್ಯೆಗಳನ್ನು ರಾಷ್ಟ್ರ ಮತ್ತು ಪ್ರಪಂಚದ ಗಮನಕ್ಕೆ ತರಲು ನಾನು ಯಾವಾಗಲೂ ಸಿದ್ಧ ಎಂದು ಇದೇ ವೇಳೆ ರಾಹುಲ್​ ಗಾಂಧಿ ಘೋಷಿಸಿದರು.

ಸಿಪಿಐ ರಾಷ್ಟ್ರೀಯ ನಾಯಕಿ ಹಾಗೂ ಎಡ ಪ್ರಜಾಸತ್ತಾತ್ಮಕ ರಂಗದ ಎಲ್‌ಡಿಎಫ್ ಅಭ್ಯರ್ಥಿ ಅನ್ನಿ ರಾಜಾ ಕೂಡ ಇದೇ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಎರಡು ಪಕ್ಷಗಳು ಕೇರಳದಲ್ಲಿ ತೀವ್ರ ಸ್ಪರ್ಧಿಗಳಾಗಿವೆ. ಆದರೆ, ರಾಷ್ಟ್ರಮಟ್ಟದಲ್ಲಿ ಎಡಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಕೇರಳದಲ್ಲಿ ಮಾತ್ರ ಈ ಪಕ್ಷಗಳು ಪರಸ್ಪರ ಹೋರಾಟಕ್ಕಿಳಿದಿವೆ.

ಇನ್ನು ವಯನಾಡು ಕ್ಷೇತ್ರದಲ್ಲಿ ಈ ಬಾರಿ ಗೆಲ್ಲಲೇಬೇಕು ಎಂಬ ಹಠದೊಂದಿಗೆ ಬಿಜೆಪಿ ಕಣಕ್ಕಿಳಿದಿದೆ. ರಾಜ್ಯ ಅಧ್ಯಕ್ಷ ಕೆ ಸುರೇಂದ್ರನ್ ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕೇರಳದ ಎಲ್ಲ 20 ಸ್ಥಾನಗಳಿಗೆ ಏಪ್ರಿಲ್​​ 26ರ ರಂದು ಮತದಾನ ನಡೆಯಲಿದೆ.

ಇದನ್ನು ಓದಿ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಬಿಜೆಪಿ ಸೇರ್ಪಡೆ - Sumalatha Ambareesh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.