ನವದೆಹಲಿ: ದೇಶದ ಹಲವೆಡೆ ಬಿಸಿಲಿನ ಝಳಕ್ಕೆ ತುತ್ತಾಗಿರುವ ಈ ಸಂದರ್ಭದಲ್ಲಿ ಹವಾಮಾನ ತಜ್ಞರು ಸಮಾಧಾನದ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಮಾತನಾಡಿ, ''ಈ ವರ್ಷ ನೈಋತ್ಯ ಮಾನ್ಸೂನ್ ಎಲ್ ನಿನೊ (El Nino) ಪರಿಸ್ಥಿತಿಗಳ ಇಳಿಕೆ ಮತ್ತು ಯುರೇಷಿಯಾದಲ್ಲಿ ಹಿಮದ ಹೊದಿಕೆ ಕಡಿಮೆಯಾದ ಕಾರಣ ಪರಿಸ್ಥಿತಿ ಧನಾತ್ಮಕವಾಗಿರುತ್ತದೆ ಎಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ಎಲ್ ನಿನೋ ಕ್ಷೀಣಿಸುತ್ತಿರುವುದು ಒಳ್ಳೆಯ ಸುದ್ದಿ. ಜೂನ್ ಆರಂಭದ ವೇಳೆಗೆ ಎಲ್ ನಿನೊ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾದರೆ ನೈರುತ್ಯ ಮುಂಗಾರು ಚುರುಕಾಗಲಿದೆ'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
''ಜುಲೈ- ಸೆಪ್ಟೆಂಬರ್ ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ನಮ್ಮ ದೇಶದಲ್ಲಿ ಲಾ ನಿನಾ (La Nina) ಪರಿಸ್ಥಿತಿಗಳು ಸಾಕ್ಷಿಯಾಗಬಹುದು. ಇದು ಮಧ್ಯ ಪೆಸಿಫಿಕ್ ಮಹಾಸಾಗರದ ತಂಪಾಗುವಿಕೆಗೆ ಕಾರಣವಾಗುತ್ತದೆ. ಭಾರತದ ಮಾನ್ಸೂನ್‌ಗೆ ಲಾ ನಿನಾ ಒಳ್ಳೆಯದು ಮತ್ತು ತಟಸ್ಥ ಪರಿಸ್ಥಿತಿಗಳು ಉತ್ತಮವಾಗಿವೆ. ಆದರೆ, 60 ಪ್ರತಿಶತ ವರ್ಷಗಳಲ್ಲಿ, ಎಲ್ ನಿನೊ ಭಾರತದ ಮಾನ್ಸೂನ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಕಳೆದ ವರ್ಷ ಅದು ನಕಾರಾತ್ಮಕ ಪರಿಣಾಮ ಬೀರಲಿಲ್ಲ. 2023 ರಲ್ಲಿ ನಮ್ಮ ದೇಶವು ಮಾನ್ಸೂನ್ ಋತುವಿನಲ್ಲಿ ಸರಾಸರಿ 820 ಮಿಮೀ ಮಳೆಯನ್ನು ದಾಖಲಿಸಿದೆ'' ಎಂದು ಮೊಹಾಪಾತ್ರ ಹೇಳಿದರು.
''ದೇಶದಾದ್ಯಂತ ಸರಾಸರಿ ವಾರ್ಷಿಕ 868.6 ಮಿಮೀ ಮಳೆಗೆ ಹೋಲಿಸಿದರೆ, ಇದು ತುಂಬಾ ಕಡಿಮೆ. ‘ಎಲ್ ನಿನೊ’ ಪ್ರಭಾವದಿಂದ ಕಳೆದ ವರ್ಷದ ಮಳೆ ಕಡಿಮೆಯಾಗಿದೆ. ಉತ್ತರ ಹಿಮಾಲಯ ಮತ್ತು ಯುರೇಷಿಯನ್ ಭೂಪ್ರದೇಶದ ಮೇಲೆ ಹಿಮದ ಹೊದಿಕೆಯು ದೇಶದಲ್ಲಿ ಮಾನ್ಸೂನ್ ಮೇಲೆ ಪರಿಣಾಮ ಬೀರುತ್ತದೆ. ‘ಎಲ್ ನಿನೊ’ದ ಪರಿಣಾಮವೂ ಅಧಿಕವಾಗಲಿದೆ'' ಎಂದು ಐಎಂಡಿ ನಿರ್ದೇಶಕರು ವಿವರಿಸಿದ್ದಾರೆ.
ಇನ್ನೂ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ತಿಂಗಳ ಕೊನೆಯಲ್ಲಿ ನೈರುತ್ಯ ಮುಂಗಾರು ಮುನ್ಸೂಚನೆಯನ್ನು ಬಿಡುಗಡೆ ಮಾಡಲಿದೆ. ನೈಋತ್ಯ ಮಾನ್ಸೂನ್ ಮಾರುತಗಳು ನಮ್ಮ ದೇಶದ ಕೃಷಿ ಕ್ಷೇತ್ರದ ಜೀವನಾಡಿ ಇದ್ದಂತೆ. ಇವುಗಳು ಭಾರತದ ವಾರ್ಷಿಕ ಮಳೆಯ ಶೇ 70 ಪ್ರತಿಶತವನ್ನು ಒದಗಿಸುತ್ತವೆ. ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಸುಮಾರು 14 ಪ್ರತಿಶತವು ನೈಋತ್ಯ ಮಾನ್ಸೂನ್‌ಗಳಿಂದ ಪ್ರಭಾವಿತವಾಗಿರುತ್ತದೆ. ಇದರಲ್ಲಿ ಹೆಚ್ಚಿನವು ಕೃಷಿ ಮತ್ತು ಅದರ ಸಂಬಂಧಿತ ವಲಯಗಳಿಂದ ಉತ್ಪತ್ತಿಯಾಗುತ್ತದೆ. ದೇಶದ 140 ಕೋಟಿ ಜನಸಂಖ್ಯೆಯ ಅರ್ಧದಷ್ಟು ಜನರ ಜೀವನ ಮಟ್ಟ ಮತ್ತು ತಲಾ ವೆಚ್ಚವನ್ನು ನೈಋತ್ಯ ಮಾನ್ಸೂನ್‌ನ ಮೂಲಕ ನಿರ್ಧರಿಸಲಾಗುತ್ತದೆ. ನೈಋತ್ಯ ಮಾನ್ಸೂನ್ ಪ್ರಭಾವದಿಂದಾಗಿ, ಅನೇಕ ರಾಜ್ಯಗಳಲ್ಲಿ ಸಮೃದ್ಧವಾಗಿ ಮಳೆಯಾಗುತ್ತದೆ. ಈ ಮಳೆಯ ಆಧಾರದ ಮೇಲೆ ಆಯಾ ಪ್ರದೇಶದ ಬೆಳೆಗಳ ಕೃಷಿ ಮಟ್ಟವನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ನಂದ್ಯಾಲ ಏಷ್ಯಾದ ನಾಲ್ಕನೇ ಅತ್ಯಂತ ಬಿಸಿಯಾದ ನಗರ: ಭುವನೇಶ್ವರ, ಕಲಬುರಗಿಯಲ್ಲೂ ನಿಗಿ ನಿಗಿ ಕೆಂಡ - heat wave sweeps