ETV Bharat / bharat

ಕುವೈತ್ ಅಗ್ನಿ ದುರಂತ: ಕೇರಳದ 24, ತಮಿಳುನಾಡಿನ 5 ಮಂದಿ ಸಾವು, ನೀರಿನ ಟ್ಯಾಂಕ್​ಗೆ​ ಜಿಗಿದು ಬದುಕಿದ ಓರ್ವ! - Kuwait Fire Tragedy - KUWAIT FIRE TRAGEDY

ಕುವೈತ್​ನಲ್ಲಿ ನಡೆದ ಬಹುಮಹಡಿ ಕಟ್ಟಡ ಅಗ್ನಿ ದುರಂತದಲ್ಲಿ ಮೃತಪಟ್ಟ 40 ಭಾರತೀಯರ ಪೈಕಿ ಕೇರಳದ 24 ಹಾಗೂ ತಮಿಳುನಾಡಿನ ಐವರು ಸೇರಿದ್ದಾರೆ.

Keralites killed in Kuwait fire tragedy
ಕುವೈತ್ ಅಗ್ನಿ ದುರಂತ (ETV Bharat)
author img

By ETV Bharat Karnataka Team

Published : Jun 13, 2024, 4:12 PM IST

ಹೈದರಾಬಾದ್: ಕುವೈತ್​ನಲ್ಲಿ ನಡೆದ ಬಹುಮಹಡಿ ಕಟ್ಟಡದ ಅಗ್ನಿ ದುರಂತದಲ್ಲಿ 40 ಜನ ಭಾರತೀಯರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಬಹುತೇಕ ಕೇರಳದವರೇ ಆಗಿದ್ದು, ಉಳಿದಂತೆ ತಮಿಳುನಾಡು ಸೇರಿ ಇತರೆ ಭಾರತೀಯರಿದ್ದಾರೆ ಎಂದು ವರದಿಯಾಗಿದೆ. ಇದೇ ವೇಳೆ, ಕಾಸರಗೋಡಿನ ವ್ಯಕ್ತಿಯೊಬ್ಬರು ಅಚ್ಚರಿ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ದಕ್ಷಿಣ ಕುವೈತ್​ನಲ್ಲಿ ಬುಧವಾರ ಏಳು ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತು. ಕಟ್ಟಡದಲ್ಲಿ ಸುಮಾರು 195 ವಲಸಿಗ ಕಾರ್ಮಿಕರಿದ್ದರು. ಬೆಳಗಿನ ಜಾವ 4 ಗಂಟೆಗೆ ಅಡುಗೆ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಪರಿಣಾಮ 40 ಮಂದಿ ಭಾರತೀಯರು ಸೇರಿ 49 ಜನ ಕಾರ್ಮಿಕರು ಮೃತಪಟ್ಟಿದ್ದಾರೆ. ಅಂದಾಜು 50 ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

24 ಕೇರಳಿಗರು ಸಾವು: ಮೃತಪಟ್ಟ ಭಾರತೀಯರಲ್ಲಿ ಬಹುತೇಕರು ಕೇರದವರು. ಇದುವರೆಗೆ ಈ ರಾಜ್ಯದವರ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇದರಲ್ಲಿ 16 ಜನರ ಗುರುತು ಪತ್ತೆ ಹಚ್ಚಲಾಗಿದೆ.

ಶಮೀರ್ ಉಮರುದ್ದೀನ್ (30 ವಯಸ್ಸು - ಸೂರನಾಡ್, ​ಕೊಲ್ಲಂ), ಕೆ.ರಂಜಿತ್ (34 ವಯಸ್ಸು - ಚೆಂಗಳ, ಕಾಸರಗೋಡು), ಕೇಳು ಪೊನ್ಮಲೇರಿ (58 ವಯಸ್ಸು - ಪಿಲಿಕೋಡು, ಕಾಸರಗೋಡು), ಸ್ಟೆಫಿನ್ ಅಬ್ರಹಾಂ ಸಾಬು (29 ವಯಸ್ಸು, ಪಂಪಾಡಿ, ಕೊಟ್ಟಾಯಂ), ಆಕಾಶ್ ಶಶಿಧರನ್ ನಾಯರ್ (31 ವಯಸ್ಸು, ಪತ್ತನಂತಿಟ್ಟ), ಸಾಜನ್ ಜಾರ್ಜ್ (29 ವಯಸ್ಸು, ಪುನಲೂರು, ಕೊಲ್ಲಂ), ಸಾಜು ವರ್ಗೀಸ್ (56 ವಯಸ್ಸು - ಕೊನ್ನಿ, ಪತ್ತನಂತಿಟ್ಟ), ಪಿ.ವಿ.ಮುರಳೀಧರನ್ (68 ವಯಸ್ಸು, ವಾಜಮುತ್ತಂ, ಪತ್ತನಂತಿಟ್ಟ), ಲೂಕೋಸ್ ಸಾಬು (48 ವಯಸ್ಸು - ವೆಲಿಚಿಕ್ಕಲ, ಕೊಲ್ಲಂ), ಥಾಮಸ್ ಉಮ್ಮನ್ (37 ವಯಸ್ಸು - ತಿರುವಲ್ಲಾ, ಪತ್ತನಂತಿಟ್ಟ), ವಿಶ್ವಾಸ್ ಕೃಷ್ಣನ್ ಧರ್ಮದಂ (ಕಣ್ಣೂರು), ನೂಹ್ (40 ವಯಸ್ಸು, ತಿರೂರ್ - ಮಲಪ್ಪುರಂ), ಎಂ.ಪಿ. ಬಾಹುಲೇಯನ್ (36 ವಯಸ್ಸು - ಪುಲಮಂತೋಳ್, ಮಲಪ್ಪುರಂ), ಶ್ರೀಹರಿ ಪ್ರದೀಪ್ (27 ವಯಸ್ಸು - ಚಂಗನಾಶ್ಶೇರಿ, ಕೊಟ್ಟಾಯಂ), ಮ್ಯಾಥ್ಯೂ ಜಾರ್ಜ್ (54 ವಯಸ್ಸು - ನಿರಣಂ, ಪತ್ತನಂತಿಟ್ಟ), ಸಿಬಿನ್ ಟಿ ಅಬ್ರಹಾಂ (31 ವಯಸ್ಸು - ಕೀಜ್ವೈಪುರ, ಪತ್ತನಂತಿಟ್ಟ) ಮೃತರೆಂದು ಗುರುತಿಸಲಾಗಿದೆ.

5 ಮಂದಿ ತಮಿಳರು ಸಾವು: ಈ ದುರಂತದಲ್ಲಿ ತಮಿಳುನಾಡಿನ ಐವರು ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಗಿಂಗಿ ಕೆ.ಎಸ್.ಮಸ್ತಾನ್ ಖಚಿತಪಡಿಸಿದ್ದಾರೆ. ವಿದೇಶದಲ್ಲಿರುವ ತಮಿಳು ಸಂಘಗಳು ಇದುವರೆಗೆ ಹಂಚಿಕೊಂಡ ಮಾಹಿತಿ ಪ್ರಕಾರ, ಮೃತರು ತಂಜಾವೂರು, ರಾಮನಾಥಪುರಂ ಮತ್ತು ಪೆರವೂರಣಿ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಇವರನ್ನು ರಾಮ ಕರುಪ್ಪನ್, ವೀರಸಾಮಿ ಮರಿಯಪ್ಪನ್, ಚಿನ್ನದುರೈ ಕೃಷ್ಣಮೂರ್ತಿ, ಮೊಹಮ್ಮದ್ ಶೆರಿಫ್ ಮತ್ತು ರಿಚರ್ಡ್ ಎಂದು ಗುರುತಿಸಲಾಗಿದೆ ಎಂದು ಮಸ್ತಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

'ನೀರಿನ ಟ್ಯಾಂಕ್​ಗೆ​ ಜಿಗಿದು ಬದುಕುಳಿದ': ಕೇರಳದ ನಳಿನಾಕ್ಷನ್ ಎಂಬವರು ಅಗ್ನಿ ದುರಂತದಿಂದ ಅಚ್ಚರಿ ರೀತಿಯಲ್ಲಿ ಪಾರಾಗಿದ್ದಾರೆ. ಅವಘಡ ಸಂಭವಿಸಿದಾಗ ಮೂರನೇ ಮಹಡಿಯಲ್ಲಿ ಅವರು ಸಿಲುಕಿಕೊಂಡಿದ್ದರಂತೆ. ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಧೈರ್ಯ ಮಾಡಿ ಹತ್ತಿರದ ನೀರಿನ ಟ್ಯಾಂಕ್​ ಮೇಲೆ ಜಿಗಿದು ಬದುಕುಳಿದಿದ್ದಾರೆ. ಇದರಿಂದಾಗಿ ಪಕ್ಕೆಲುಬುಗಳು ಮುರಿದಿದ್ದು, ಕುವೈತ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರಳದಲ್ಲಿರುವ ಸಂಬಂಧಿ ಬಾಲಕೃಷ್ಣನ್ ಮಾಹಿತಿ ನೀಡಿದ್ದಾರೆ.

"ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಮಗೆ ಆಘಾತಕಾರಿ ಸುದ್ದಿ ಬಂದಿತು. ಗಾಯಗಳ ಕಾರಣದಿಂದಾಗಿ ನಾವು ನಳಿನಾಕ್ಷನ್ ಅವರೊಂದಿಗೆ ಫೋನ್‌ನಲ್ಲಿ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇದು ನಮಗೆ ಸ್ವಲ್ಪ ಸಮಾಧಾನ ತಂದಿದೆ'' ಎಂದು ಬಾಲಕೃಷ್ಣನ್ ಹೇಳಿದರು.

ಅಗ್ನಿ ದುರಂತದಲ್ಲಿ ಸಾವಿಗೀಡಾದವರ ಮೃತದೇಹಗಳನ್ನು ತವರಿಗೆ ರವಾನಿಸಲು ಕೇಂದ್ರ ಸರ್ಕಾರ ವಾಯುಪಡೆಯ ವಿಮಾನವನ್ನು ಸಜ್ಜುಗೊಳಿಸಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಕುವೈತ್‌ಗೆ ತೆರಳಿದ್ದಾರೆ. ಕುವೈತ್‌ನಲ್ಲಿರುವ ಭಾರತದ ರಾಯಭಾರಿ ಆದರ್ಶ ಸ್ವೈಕಾ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಕುವೈತ್​ ಅಗ್ನಿ ದುರಂತ: ಮೃತಪಟ್ಟ ಭಾರತೀಯರ ಮೃತದೇಹಗಳ ಹಸ್ತಾಂತರಕ್ಕೆ ಜೈಶಂಕರ್​​​​​​​​​​​​​​​​​​ ಪ್ರಯತ್ನ ಆರಂಭ, ಪರಿಹಾರ ಘೋಷಿಸಿದ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.