ETV Bharat / bharat

ವೈದ್ಯರ 24 ಗಂಟೆಗಳ ಮುಷ್ಕರದಿಂದ ಆಸ್ಪತ್ರೆಗಳು ಬಂದ್​: ಮಹಿಳಾ ಆಯೋಗದ ವರದಿಯಲ್ಲಿವೆ ಆಘಾತಕಾರಿ ಅಂಶಗಳು - kolkata doctor rape murder

author img

By ETV Bharat Karnataka Team

Published : Aug 17, 2024, 1:43 PM IST

ಬಂಗಾಳ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಸಮುದಾಯ ಕರೆ ನೀಡಿರುವ 24 ಗಂಟೆಗಳ ಮುಷ್ಕರ ಆರಂಭವಾಗಿದ್ದು, ಎಲ್ಲ ಆಸ್ಪತ್ರೆಗಳು ಬಂದ್​ ಆಗಿವೆ.

doctor rape case
ವೈದ್ಯರಿಂದ ಪ್ರತಿಭಟನೆ (ANI)

ನವದೆಹಲಿ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿರುವ 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರ ಇಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಿದೆ. ನಾಳೆ (ಭಾನುವಾರ) ಬೆಳಗ್ಗೆ 6 ಗಂಟೆಯವರೆಗೆ ಇದು ಮುಂದುವರೆಯಲಿದೆ. ಇದರಿಂದ ದೇಶದ ಎಲ್ಲ ಆಸ್ಪತ್ರೆಗಳು ಬಂದ್​ ಆಗಿವೆ.

ದೇಶದ ಹಲವು ಆಸ್ಪತ್ರೆಗಳ ಮುಂದೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ತುರ್ತು ಮತ್ತು ಅಪಘಾತ ಚಿಕಿತ್ಸಾ ಸೇವಾ ಘಟಕಗಳು ಮಾತ್ರ ಕಾರ್ಯನಿರ್ವಹಿಸಲಿವೆ. ಇದನ್ನು ಹೊರತಪಡಿಸಿ, ಒಪಿಡಿಗಳು ಮತ್ತು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ ಎಂದು ಐಎಂಎ ಕರೆ ನೀಡಿದೆ.

ಮಹಿಳಾ ಆಯೋಗದ ವರದಿ: ಈ ಮಧ್ಯೆ, ಪ್ರಕರಣದ ತನಿಖೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ರಚಿಸಿದ್ದ ಇಬ್ಬರು ಸದಸ್ಯರ ವಿಚಾರಣಾ ಸಮಿತಿಯು ಆತಂಕಕಾರಿ ವಿಚಾರಗಳನ್ನು ಬಹಿರಂಗಪಡಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಸಮಿತಿಯು ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಆಸ್ಪತ್ರೆಯಲ್ಲಿನ ಕಳಪೆ ಭದ್ರತೆ, ಸೌಲಭ್ಯಗಳು, ಪೊಲೀಸ್​ ತನಿಖೆಯಲ್ಲಿ ಲೋಪ ಹಾಗೂ ಸಿಬ್ಬಂದಿಗೆ ರಕ್ಷಣೆಯ ಕೊರತೆಯನ್ನು ಉಲ್ಲೇಖಿಸಿದೆ.

ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಎನ್‌ಸಿಡಬ್ಲ್ಯೂ, ಆರ್​​.ಜಿ. ಕರ್​ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ಭದ್ರತಾ ಲೋಪದಿಂದ ಅನಾಹುತ ಸಂಭವಿಸಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲವಾಗಿದೆ. ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ನಡೆದ ಸ್ಥಳವಾದ ಸೆಮಿನಾರ್​ ಹಾಲ್ ಅನ್ನು ನವೀಕರಣ ಮಾಡಲು ಮುಂದಾಗಿರುವುದು ಸಾಕ್ಷ್ಯ ನಾಶದ ಉದ್ದೇಶವಾಗಿದೆ. ವಿರೋಧದ ನಂತರ ಪೊಲೀಸರು ಹಾಲ್​ಗೆ ಬೀಗ ಜಡಿದಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಆಸ್ಪತ್ರೆಯ ನಡೆ ಅನುಮಾನಾಸ್ಪದ: ವೈದ್ಯೆ ವಿದ್ಯಾರ್ಥಿನಿ ಹತ್ಯೆಯ ಹಿಂದೆ ಹಲವು ಅನುಮಾನಗಳಿವೆ. ಆಸ್ಪತ್ರೆಯ ವೈದ್ಯರು ವೈದ್ಯೆಯ ಕುಟುಂಬಕ್ಕೆ ಕರೆ ಮಾಡಿ, ನಿಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದೆ. ಆದರೆ, ಇದು ನಿಚ್ಚಳವಾಗಿ ಕೊಲೆ ಘಟನೆ. ಇದು ಆಸ್ಪತ್ರೆಯ ಈ ನಡೆ ಅನುಮಾನ ಎಡೆ ಮಾಡಿಕೊಟ್ಟಿದೆ. ಎನ್‌ಸಿಡಬ್ಲ್ಯೂನ ವಿಚಾರಣಾ ಸಮಿತಿಯು, ಘಟನೆಯ ಸಮಯದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ. ರಾತ್ರಿ ಪಾಳಿಯಲ್ಲಿ ತರಬೇತಿ ವಿದ್ಯಾರ್ಥಿಗಳು, ವೈದ್ಯರು ಮತ್ತು ನರ್ಸ್​ಗಳಿಗೆ ಸಾಕಷ್ಟು ಭದ್ರತೆ ಇರಲಿಲ್ಲ ಎಂದು ಹೇಳಿದೆ.

ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣ ಬಯಲಾದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗವು ಸುಮೊಟೋ ಕೇಸ್​ ದಾಖಲಿಸಿಕೊಂಡು, ಆಗಸ್ಟ್​ 10ರಂದು ಎನ್‌ಸಿಡಬ್ಲ್ಯೂ ಸದಸ್ಯೆ ಡೆಲಿನಾ ಖೋಂಡ್‌ಗುಪ್ ಮತ್ತು ಪಶ್ಚಿಮ ಬಂಗಾಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲೆ ಸೋಮಾ ಚೌಧರಿ ಅವರುಳ್ಳ ದ್ವಿಸದಸ್ಯ ಸಮಿತಿ ರಚಿಸಿತ್ತು. ಸಮಿತಿಯು ಆಗಸ್ಟ್ 12ರಂದು ಕೋಲ್ಕತ್ತಾದಲ್ಲಿನ ಆಸ್ಪತ್ರೆಗೆ ಆಗಮಿಸಿ ತನಿಖೆ ನಡೆಸಿದೆ.

ಇದನ್ನೂ ಓದಿ: ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಕೇಸ್​: ಗ್ಯಾಂಗ್​ರೇಪ್​ ಶಂಕಿಸಿ ಸಿಬಿಐಗೆ ಪೋಷಕರ ದೂರು - Kolkata Doctor Rape murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.