ETV Bharat / bharat

ಭೂಕುಸಿತ ಪ್ರದೇಶಕ್ಕೆ ತೆರಳುತ್ತಿದ್ದ ಕೇರಳ ಸಚಿವೆ ವೀಣಾ ಜಾರ್ಜ್ ವಾಹನ ಅಪಘಾತ - Veena George

ರಸ್ತೆ ಅಪಘಾತದಲ್ಲಿ ಸಚಿವೆಗೆ ಯಾವುದೇ ಗಂಭೀರ ಸ್ವರೂಪದ ಗಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೇರಳ ಸಚಿವೆ ವೀಣಾ ಜಾರ್ಜ್
ಕೇರಳ ಸಚಿವೆ ವೀಣಾ ಜಾರ್ಜ್ (ETV Bharat)
author img

By PTI

Published : Jul 31, 2024, 10:48 AM IST

ವಯನಾಡ್‌(ಕೇರಳ): ಭಾರೀ ಭೂ ಕುಸಿತಕ್ಕೊಳಗಾಗಿರುವ ವಯನಾಡ್‌ ಜಿಲ್ಲೆಗೆ ತೆರಳುತ್ತಿದ್ದಾಗ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಅವರಿದ್ದ ವಾಹನ ಅಪಘಾತಕ್ಕೀಡಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಪೊಲೀಸರ ಪ್ರಕಾರ, ಸಚಿವೆ ಇದ್ದ ವಾಹನ ಬೆಳಗ್ಗೆ 7.10ರ ಸುಮಾರಿಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಘಟನೆಯ ಬಳಿಕ ತಕ್ಷಣ ಸಚಿವೆಯನ್ನು ಮಂಜೆರಿಯಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಸಚಿವೆಗೆ ಯಾವುದೇ ರೀತಿ ಗಂಭೀರ ಗಾಯಗಳಾಗಿಲ್ಲ. ದ್ವಿಚಕ್ರ ವಾಹನ ಸವಾರರಿಗೂ ಚಿಕಿತ್ಸೆ ನೀಡಲಾಗಿದೆ.

2ನೇ ದಿನದ ಕಾರ್ಯಾಚರಣೆ: ಇನ್ನು, ಭೂಕುಸಿತ ಸ್ಥಳಗಳಲ್ಲಿ ರಕ್ಷಣಾ ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸೇನೆ, ಎನ್​ಡಿಆರ್​ಎಫ್​ ಮತ್ತು ಇತರೆ ತುರ್ತು ಸೇವಾ ಸಿಬ್ಬಂದಿ ಸಂತ್ರಸ್ತರ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಹಾನಿಗೊಂಡ ಮನೆಗಳು, ಕಟ್ಟಡದ ಅವಶೇಷಗಳಡಿ ಸಿಲುಕಿರುವ ಜನರ ಪತ್ತೆ ಮತ್ತು ಭೂ ಕುಸಿತದಿಂದ ಪ್ರಾಣ ಉಳಿಸಿಕೊಂಡವರ ರಕ್ಷಣಾ ಕಾರ್ಯ ಸಾಗುತ್ತಿದೆ. ಮೆಪ್ಪಾಡಿಯ ಸ್ಥಳೀಯ ಶಾಲೆಯಲ್ಲಿ ಬೀಡುಬಿಟ್ಟಿದ್ದ ಭೂಸೇನೆಯ 122 ಇನ್ಫಂಟ್ರಿ ಬ್ಯಾಟಲಿಯನ್​ ಸೈನಿಕರು ವಿಪತ್ತುಪೀಡಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'​ನಲ್ಲಿ ಪೋಸ್ಟ್​ ಮಾಡಿರುವ ವಕ್ತಾರರು, ಎರಡನೇ ದಿನದ ರಕ್ಷಣಾ ಕಾರ್ಯ. ವಯನಾಡ್ ಭೂ ಕುಸಿತದಲ್ಲಿ ಟೆರಿಟೋರಿಯಲ್​ ಸೇನೆಯ 122 ಇನ್ಫಂಟ್ರಿ ಬ್ಯಾಟಲಿಯನ್​ ತಂಡ ತಾತ್ಕಾಲಿಕ ಆಶ್ರಯದಲ್ಲಿ ಮೆಪ್ಪಡಿಯಲ್ಲಿ ತಂಗಿದ್ದು, ರಕ್ಷಣಾ ಕೆಲಸ ಮುಂದುವರೆಸಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ನಡುವೆ, ಸೇನೆಯ ವಿವಿಧ ತಂಡಗಳು ತಿರುವನಂತಪುರಂ ಮತ್ತು ಬೆಂಗಳೂರಿನಿಂದ ಕ್ಯಾಲಿಕಟ್​ಗೆ ರಸ್ತೆ ಮತ್ತು ವಾಯು ಮಾರ್ಗವಾಗಿ ತೆರಳಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೇನಾ ತಂಡದಲ್ಲಿ ವಿಪತ್ತು ನಿರ್ವಹಣೆ, ವೈದ್ಯಕೀಯ ತಂಡ, ಆಂಬ್ಯುಲೆನ್ಸ್​ ಮತ್ತು ಇತರೆ ಸಾಮಗ್ರಿಗಳಿವೆ. ಅವಶೇಷಗಳಡಿ ಇನ್ನೂ ಹಲವು ಜನರು ಸಿಕ್ಕಿಹಾಕಿಕೊಂಡಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕ ಎದುರಾಗಿದೆ.

ಇದನ್ನೂ ಓದಿ: ವಯನಾಡ್​​ ಭೂಕುಸಿತ: ಮೃತರ ಸಂಖ್ಯೆ 143ಕ್ಕೇರಿಕೆ, ತಾತ್ಕಾಲಿಕ ಸೇತುವೆ ಕಟ್ಟಿ 1 ಸಾವಿರ ಜನರ ರಕ್ಷಿಸಿದ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.