ETV Bharat / bharat

ಶಿರೂರು ಭೂಕುಸಿತ: ಕೇರಳದ ಅರ್ಜುನ್‌ಗಾಗಿ ಹುಡುಕಾಟ ಪುನಾರಂಭ: ನಿಧಾನ ಕಾರ್ಯಾಚರಣೆಗೆ ಅಸಮಾಧಾನ - Shiruru Hill Landslide

ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಲಾರಿ ಸಮೇತ ಮಣ್ಣಿನಡಿಯಲ್ಲಿ ಹೂತು ಹೋಗಿರುವ ಕೋಯಿಕ್ಕೋಡ್ ಮೂಲದ ಅರ್ಜುನ್​ಗಾಗಿ ಬೆಳಗ್ಗೆ 7 ಗಂಟೆಯಿಂದ ಶೋಧ ಕಾರ್ಯ ಮತ್ತೆ ಆರಂಭವಾಗಿದೆ. ರಾಡಾರ್ ಸಾಧನವನ್ನು ತಲುಪಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಈ ಮಧ್ಯೆ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಅರ್ಜುನ್​ ಕುಟುಂಬಸ್ಥರು ಆರೋಪಿಸಿದ್ದಾರೆ.

MISSING LORRY DRIVER  FAMILY CLAIMS  DELAY IN RESCUE OPERATION  MALAYALEE LORRY DRIVER ARJUN
ಶಿರೂರು ಭೂಕುಸಿತ: ಕೇರಳದ ಅರ್ಜುನ್‌ಗಾಗಿ ಹುಡುಕಾಟ ಪುನರಾರಂಭ (ETV Bharat)
author img

By PTI

Published : Jul 20, 2024, 3:03 PM IST

Updated : Jul 20, 2024, 3:14 PM IST

ಕೋಯಿಕ್ಕೋಡ್ (ಕೇರಳ): ಉತ್ತರಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರ ಶೋಧ ಕಾರ್ಯ ಪುನರಾರಂಭಗೊಂಡಿದೆ. ಲಾರಿ ಸಮೇತ ನೆಲದಡಿಯಲ್ಲಿ ಹೂತು ಹೋಗಿದ್ದ ಕೋಯಿಕ್ಕೋಡ್ ನಿವಾಸಿ ಅರ್ಜುನ್​ಗಾಗಿ ಶೋಧ ಕಾರ್ಯ ಬೆಳಗ್ಗೆ 7 ಗಂಟೆ ಸುಮಾರಿಗೆ ಪುನರಾರಂಭವಾಯಿತು. ಬೆಂಗಳೂರಿನಿಂದ ರಾಡಾರ್ ಸಾಧನವನ್ನು ತಲುಪಿಸುವ ಪ್ರಕ್ರಿಯೆ ಆರಂಭವಾಗಿದೆ.

ಅಪಘಾತದ ಸ್ಥಳಕ್ಕೆ ರಾಡಾರ್ ತನ್ನಿ, ಅದು ತುಂಬಾ ಆಳವಾದ ವಸ್ತುಗಳನ್ನು ಸಹ ಪತ್ತೆ ಮಾಡುತ್ತದೆ. ಬೆಳಗ್ಗೆ ರಾಡಾರ್ ಉಪಕರಣಗಳನ್ನು ತಲುಪಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ರಾಡಾರ್ ಮೂಲಕ ಲಾರಿ ಇರುವ ಸ್ಥಳ ಪತ್ತೆಯಾದರೆ ಆ ದಿಕ್ಕಿನಲ್ಲಿ ಮಣ್ಣು ಅಗೆಯಲಾಗುತ್ತದೆ. ರಕ್ಷಣಾ ಕಾರ್ಯಾಚರಣೆಯನ್ನು ನೌಕಾಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ನಡೆಸುತ್ತಿವೆ. ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಮತ್ತಷ್ಟು ಭೂಕುಸಿತದ ಸಾಧ್ಯತೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಕಾರ್ಯಾಚರಣೆ ವಿಳಂಬ: ಭೂಕುಸಿತದಲ್ಲಿ ಜುಲೈ 16 ರಿಂದ ನಾಪತ್ತೆಯಾಗಿದ್ದ ಮಲಯಾಳಿ ಲಾರಿ ಚಾಲಕ ಅರ್ಜುನ್ ಅವರ ಕುಟುಂಬ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಆರೋಪಿಸಿದೆ. ಜುಲೈ 16 ರಂದು ನಮ್ಮ ಸಹೋದರ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕರ್ನಾಟಕ ಪೊಲೀಸರಿಗೆ ತಿಳಿಸಲಾಯಿತು. ಆದರೆ ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಾರ್ಯಾಚರಣೆ ಇಷ್ಟು ವಿಳಂಬವಾದರೆ ನಾವು ಯಾವ ಭರವಸೆ ಇಟ್ಟುಕೊಳ್ಳಬೇಕು. ಅಲ್ಲಿ ಅವರಿಗೆ ಅಗತ್ಯವಿರುವ ಸೌಲಭ್ಯಗಳಿಲ್ಲದಿದ್ದರೆ ಎಲ್ಲಿ ಲಭ್ಯವಿದೆಯೋ ಅಲ್ಲಿಂದ ತರಬೇಕಿತ್ತು ಎಂದು ಅವರ ಸಹೋದರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೇರಳ ಸರ್ಕಾರ ಮತ್ತು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಪರಿಣಾಮಕಾರಿ ಮಧ್ಯಪ್ರವೇಶದ ನಂತರ ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸಲಾಗಿದೆ ಎಂದು ಬೆಳಗ್ಗೆ ಕುಟುಂಬವನ್ನು ಭೇಟಿ ಮಾಡಿದ ಕೇರಳ ಅರಣ್ಯ ಸಚಿವ ಎಕೆ ಸಸೀಂದ್ರನ್ ಸುದ್ದಿಗಾರರಿಗೆ ತಿಳಿಸಿದರು.

ಕೇರಳದ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳ ತಂಡವಲ್ಲದೇ, ರಾಜ್ಯದ ಪೊಲೀಸ್ ತಂಡವೂ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಉಪಸ್ಥಿತರಿದ್ದು, ರಕ್ಷಣಾ ಕಾರ್ಯಗಳ ಸ್ಥಿತಿಯ ಬಗ್ಗೆ ನಿಯಮಿತವಾಗಿ ವರದಿಗಳನ್ನು ನೀಡುತ್ತಿದೆ. ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಲು ನೆಲಕ್ಕೆ ನುಗ್ಗುವ ರಾಡಾರ್ ಮತ್ತು ಲೋಹ ಶೋಧಕಗಳಂತಹ ಉಪಕರಣಗಳು ಸ್ಥಳಕ್ಕೆ ತಲುಪಿವೆ ಎಂದು ಕೇರಳ ಅರಣ್ಯ ಸಚಿವ ಹೇಳಿದರು.

ಭೂಕುಸಿತ ಸ್ಥಳದಲ್ಲಿ ಉಪಸ್ಥಿತರಿರುವ ಎಂವಿಡಿ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದ ಅಧಿಕಾರಿಗಳು ಮಧ್ಯಾಹ್ನದ ವೇಳೆಗೆ ಟ್ರಕ್ ಕಂಡುಹಿಡಿಯುವ ಭರವಸೆಯಲ್ಲಿದ್ದಾರೆ. ಶುಕ್ರವಾರ ಬೆಳಗಿನ ಜಾವವೂ ಆತನ ಮೊಬೈಲ್ ರಿಂಗ್​ ಆಗಿದೆ. ಆತನ ಟ್ರಕ್‌ನಲ್ಲಿರುವ ಜಿಪಿಎಸ್ ಟ್ರ್ಯಾಕರ್ ಸಿಗ್ನಲ್ ಸಿಗುತ್ತಿದೆ. ವಾಹನವನ್ನು ಮಣ್ಣು ಮತ್ತು ಬಂಡೆಗಳ ಅವಶೇಷಗಳ ಕೆಳಗೆ ಎಲ್ಲೋ ಸಿಲುಕಿದೆ ಎಂದು ಹೇಳಿದರು.

ಇನ್ನು ಶುಕ್ರವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರನ್ನು ಈ ವಿಚಾರವಾಗಿ ಸಂಪರ್ಕಿಸಿದ್ದಾರೆ. ಕುಟುಂಬದ ಪ್ರಕಾರ, ಅವರು ಸೋಮವಾರ ಅರ್ಜುನ್‌ ಜೊತೆ ಕೊನೆಯದಾಗಿ ಮಾತನಾಡಿದ್ದಾರೆ, ನಂತರ ಅರ್ಜುನಿಂದ ಯಾವುದೇ ಸಂಪರ್ಕವಿಲ್ಲ ಎಂದು ತಿಳಿಸಿದ್ದಾರೆ. ಜುಲೈ 16 ರಂದು ಸಂಭವಿಸಿದ ಭೂಕುಸಿತ ಘಟನೆಯ ನಂತರ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭೂಕುಸಿತದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಓದಿ: ಶಿರೂರು ಗುಡ್ಡ ಕುಸಿತ ಸ್ಥಳದಲ್ಲೇ ಲಾರಿ ಚಾಲಕನ ಮೊಬೈಲ್ ಲೊಕೇಶನ್ ಪತ್ತೆ: ಮಂದಗತಿಯ ಕಾರ್ಯಾಚರಣೆಗೆ ಕಿಡಿ - Shirur Hill Collapse

Last Updated : Jul 20, 2024, 3:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.