ETV Bharat / bharat

ವಿಶ್ವಾಸಮತ ಗೆದ್ದ ಸಿಎಂ ಚಂಪೈ ಸೊರೇನ್​: ಜಾರ್ಖಂಡ್​ ರಾಜಕೀಯ ಹೈಡ್ರಾಮಾಕ್ಕೆ ತೆರೆ

ಜಾರ್ಖಂಡ್​ನಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾ ಇಂದು ಕೊನೆಗೊಂಡಿದೆ. ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಸಿಎಂ ಚಂಪೈ ಸೊರೇನ್​ ನೇತೃತ್ವದ ಸರ್ಕಾರ ಬಹುಮತ ಸಾಬೀತು ಮಾಡಿತು.

ವಿಶ್ವಾಸಮತ ಗೆದ್ದ ಸಿಎಂ ಚಂಪೈ ಸೊರೆನ್
ವಿಶ್ವಾಸಮತ ಗೆದ್ದ ಸಿಎಂ ಚಂಪೈ ಸೊರೆನ್
author img

By PTI

Published : Feb 5, 2024, 3:12 PM IST

Updated : Feb 5, 2024, 3:37 PM IST

ರಾಂಚಿ(ಜಾರ್ಖಂಡ್​​): ಜಾರ್ಖಂಡ್‌ ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ಕಾಂಗ್ರೆಸ್​- ಜಾರ್ಖಂಡ್​ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ನೂತನ ಸರ್ಕಾರ ಬಹುಮತ ಸಾಬೀತುಪಡಿಸುವಲ್ಲಿ ಸಫಲವಾಗಿದೆ. ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಸಮ್ಮಿಶ್ರ ಸರ್ಕಾರವು 47:29 ಬಹುಮತದೊಂದಿಗೆ ಗೆಲುವು ಸಾಧಿಸಿತು.

ವಿಧಾನಸಭೆಯ ಸ್ಪೀಕರ್ ರವೀಂದ್ರನಾಥ್ ಮಹತೋ ವಿಶ್ವಾಸಮತ ನಿರ್ಣಯ ಮಂಡಿಸಿದರು. ಪರ ಮತ್ತು ವಿರೋಧ ಸದಸ್ಯರನ್ನು ತಮ್ಮ ಸ್ಥಾನಗಳಲ್ಲಿ ಒಬ್ಬೊಬ್ಬರಾಗಿ ನಿಲ್ಲುವಂತೆ ಕೇಳಿಕೊಂಡರು. ಈ ವೇಳೆ 47 ಮತಗಳು ನಿರ್ಣಯದ ಪರವಾಗಿ ಬಂದರೆ, ವಿರುದ್ಧವಾಗಿ 29 ಮತಗಳು ಬಂದವು. ಬಹುಮತಕ್ಕೆ ಬೇಕಾಗಿದ್ದ 41 ಸ್ಥಾನಕ್ಕಿಂತಲೂ ಹೆಚ್ಚಿನ ಬೆಂಬಲವನ್ನು ಸರ್ಕಾರ ಪಡೆದುಕೊಂಡಿದೆ. ಸದನವು ವಿಶ್ವಾಸ ಮತವನ್ನು ಅಂಗೀಕರಿಸುತ್ತದೆ ಎಂದು ಸ್ಪೀಕರ್ ಘೋಷಿಸಿದರು. ಬಳಿಕ ಸದನವನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.

ಬಂಡಾಯ ಗೆದ್ದ ಸಿಎಂ ಚಂಪೈ: ಜೆಎಂಎಂನ ಇಬ್ಬರು ಶಾಸಕರು ಸಿಎಂ ಚಂಪೈ ಸೊರೇನ್​ ವಿರುದ್ಧ ಬಂಡಾಯ ಎದ್ದಿದ್ದರು. ಬಿಜೆಪಿ ಆಪರೇಷನ್​ ಕಮಲ ನಡೆಸುವ ಭೀತಿಯೂ ಉಂಟಾಗಿತ್ತು. ಈ ಎಲ್ಲ ಸವಾಲುಗಳ ನಡುವೆಯೂ ಸಿಎಂ ಚಂಪೈ ಸೊರೇನ್​ ಬಹುಮತ ಸಾಬೀತುಪಡಿಸಿದ್ದಾರೆ. ಸದನದಲ್ಲಿ ಮತದಾನದ ವೇಳೆ 77 ಶಾಸಕರು ಹಾಜರಿದ್ದರು. ಇದರಲ್ಲಿ ಜೆಎಂಎಂನ 29, ಕಾಂಗ್ರೆಸ್​ನ 17 ಶಾಸಕರು ಸರ್ಕಾರದ ಪರವಾಗಿ ಮತ ಹಾಕಿದರು. ಸ್ವತಂತ್ರ ಶಾಸಕ ಸರಯು ರಾಯ್ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಒಂದು ಸ್ಥಾನ ಖಾಲಿ ಇದ್ದು, ಚುನಾವಣೆ ನಡೆಯಬೇಕಿದೆ.

ರಾಜಕೀಯ ಹೈಡ್ರಾಮಾ: ಮಾಜಿ ಸಿಎಂ ಹೇಮಂತ್​ ಸೊರೇನ್​ ಭೂ ಅಕ್ರಮ ಆರೋಪದಲ್ಲಿ ಸಿಲುಕಿ ರಾಜೀನಾಮೆ ನೀಡಿದ ಬಳಿಕ ಚಂಪೈ ಸೊರೇನ್​ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಫೆಬ್ರವರಿ 5ರಂದು ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರು ಸೂಚಿಸಿದ್ದರು. ಇಬ್ಬರು ಜೆಎಂಎಂ ಶಾಸಕರು ಬಂಡೆದ್ದ ಕಾರಣ, ಶಾಸಕರನ್ನು ಫೆಬ್ರವರಿ 1ರಂದು ತೆಲಂಗಾಣದ ಹೈದರಾಬಾದ್​ನ ರೆಸಾರ್ಟ್‌ನಲ್ಲಿ ಕರೆತರಲಾಗಿತ್ತು.

ಫೆಬ್ರವರಿ 4ರಂದು ಸಂಜೆ ಎಲ್ಲ ಶಾಸಕರನ್ನು ಮರಳಿ ರಾಂಚಿಗೆ ಕರೆತಂದು, ಇಂದಿನ ವಿಶ್ವಾಸಮತದಲ್ಲಿ ಹಾಜರು ಮಾಡಲಾಗಿತ್ತು. ಆಪಾದಿತ ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಮಾಜಿ ಸಿಎಂ ಹೇಮಂತ್ ಸೊರೇನ್ ಕೂಡ ವಿಶ್ವಾಸಮತ ಪರೀಕ್ಷೆಯಲ್ಲಿ ಹಾಜರಾಗಿದ್ದರು. ರಾಂಚಿಯ ವಿಶೇಷ ನ್ಯಾಯಾಲಯವು ಸೊರೇನ್‌ಗೆ ವಿಶ್ವಾಸಮತದಲ್ಲಿ ಭಾಗವಹಿಸಲು ಅನುಮತಿ ನೀಡಿತ್ತು.

ವಿಶ್ವಾಸಮತ ಯಾಚನೆಯ ಅಂಕಿಅಂಶಗಳು:

  • ಸದನದ ಒಟ್ಟು ಸದಸ್ಯ ಬಲ: 81
  • ಮ್ಯಾಜಿಕ್​ ನಂಬರ್(ಬಹುಮತ): 41
  • ಜೆಎಂಎಂ ಶಾಸಕರು-29
  • ಕಾಂಗ್ರೆಸ್​- 17
  • ವಿಪಕ್ಷಗಳು-29
  • ಪಕ್ಷೇತರ- 1
  • ಬಹುಮತ ನಿರ್ಣಯ ಪರ ಮತ- 47
  • ಬಹುಮತ ನಿರ್ಣಯ ವಿರುದ್ಧ- 29

ಇದನ್ನೂ ಓದಿ: ಹೈದರಾಬಾದ್‌ನಿಂದ ರಾಂಚಿಗೆ ಮರಳಿದ ಜೆಎಂಎಂ ನೇತೃತ್ವದ ಮೈತ್ರಿಕೂಟದ ಶಾಸಕರು: ವಿಶ್ವಾಸ ಮತ ಗೆಲ್ಲುವ ವಿಶ್ವಾಸ

Last Updated : Feb 5, 2024, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.