ETV Bharat / bharat

ಸ್ಪೇನ್​ ಮಹಿಳೆ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಮೂವರು ಸೆರೆ; ಭಾರತಕ್ಕೆ ಸ್ಪ್ಯಾನಿಷ್ ರಾಯಭಾರಿ ಕಚೇರಿ ಧನ್ಯವಾದ

author img

By PTI

Published : Mar 4, 2024, 1:19 PM IST

ಸ್ಪೇನ್​ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಕ್ಕೆ ಭಾರತಕ್ಕೆ ಸ್ಪ್ಯಾನಿಷ್ ರಾಯಭಾರಿ ಕಚೇರಿ ಧನ್ಯವಾದ ಹೇಳಿದೆ.

ಸ್ಪೇನ್​ ಮಹಿಳೆ ರೇಪ್​
ಸ್ಪೇನ್​ ಮಹಿಳೆ ರೇಪ್​

ದುಮ್ಕಾ(ಜಾರ್ಖಂಡ್‌): ಇಲ್ಲಿನ ದುಮ್ಕಾ ಜಿಲ್ಲೆಯಲ್ಲಿ ಸ್ಪೇನ್​ನ ಪ್ರವಾಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳನ್ನು ಬಂಧಿಸಿದ್ದಕ್ಕೆ ಸ್ಪೇನ್​​​ ರಾಯಭಾರಿ ಕಚೇರಿ ಭಾರತಕ್ಕೆ ಧನ್ಯವಾದ ಹೇಳಿದೆ.

ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಯಭಾರಿ ಅಧಿಕಾರಿಗಳು, "ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. ಪ್ರಪಂಚದ ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸುವ ಬದ್ಧತೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾಗಿದೆ" ಎಂದು ಹೇಳಿದ್ದಾರೆ.

ಮಹಿಳಾ ಆಯೋಗ ಖಂಡನೆ: ದುಮ್ಕಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರವನ್ನು ರಾಷ್ಟ್ರೀಯ ಮಹಿಳಾ ಆಯೋಗವು ಖಂಡಿಸಿದೆ. ಈ ವಿಷಯದ ತನಿಖೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆದಿದೆ.

ಸ್ಪ್ಯಾನಿಷ್ ಪ್ರವಾಸಿ ಮಹಿಳೆಯ ಮೇಲೆ ನಡೆದ ಕ್ರೂರ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಲಾಗುತ್ತದೆ. 8-10 ಜನ ಆರೋಪಿಗಳು ಮಹಿಳೆಯ ಮೇಲೆ ಕ್ರೌರ್ಯ ಮೆರೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಕೇವಲ 3 ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯನ್ನು ತ್ವರಿತಗೊಳಿಸಬೇಕು. ಐಪಿಸಿ 376 ಡಿ ಅಡಿಯಲ್ಲಿ ಅತ್ಯಾಚಾರದ ಆರೋಪಗಳನ್ನು ದಾಖಲಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಡಿಜಿಪಿಗೆ ಪತ್ರ ಬರೆದಿದ್ದಾರೆ.

ದುಮ್ಕಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪಿತಾಂಬರ್ ಸಿಂಗ್ ಖೇರ್ವಾರ್ ಮಾತನಾಡಿ, "ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಪ್ಯಾನಿಷ್ ದಂಪತಿ ದುಮ್ಕಾಗೆ ಭೇಟಿ ನೀಡಿದ ಅಥವಾ ಅವರು ಅಲ್ಲಿ ಟೆಂಟ್​ನಲ್ಲಿ ವಾಸಿಸುವ ಬಗ್ಗೆ ಮಾಹಿತಿ ಇರಲಿಲ್ಲ. ಪ್ರಕರಣದ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗುವುದು" ಎಂದು ತಿಳಿಸಿದ್ದಾರೆ.

"ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂಬುದು ಇನ್ನೂ ದೃಢಪಟ್ಟಿಲ್ಲ. ದೇಹದ ಮೇಲೆ ಸಣ್ಣಪುಟ್ಟ ಗಾಯಗಳಾಗಿವೆ. ಇತರ ವಿಷಯಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಹೇಳಿದರು.

ಘಟನೆಯ ಹಿನ್ನೆಲೆ: ರಾಂಚಿಯಿಂದ 300 ಕಿ.ಮೀ ದೂರವಿರುವ ಹಂಸಡೀಡಾ ಠಾಣೆ ವ್ಯಾಪ್ತಿಯ ಕೂರ್ಮಾಹಾಟ್​ ಪ್ರದೇಶದಲ್ಲಿ ಫೆಬ್ರವರಿ 1ರ ರಾತ್ರಿ ಈ ಘಟನೆ ನಡೆದಿತ್ತು. 28 ವರ್ಷ ವಯಸ್ಸಿನ ಮಹಿಳೆ ಮತ್ತು ಆಕೆಯ 64 ವರ್ಷದ ಪತಿ ಎರಡು ಮೋಟಾರ್ ಸೈಕಲ್‌ಗಳಲ್ಲಿ ಬಾಂಗ್ಲಾದೇಶದಿಂದ ದುಮ್ಕಾ ತಲುಪಿ ಬಿಹಾರದ ಮೂಲಕ ನೇಪಾಳಕ್ಕೆ ತೆರಳುವವರಿದ್ದರು. ದುಮ್ಕಾದಲ್ಲಿ ರಾತ್ರಿ ಟೆಂಟ್​ ಹಾಕಿಕೊಂಡು ಮಲಗಿದ್ದಾಗ, ಅಲ್ಲಿಗೆ ಬಂದ 8-10 ದುಷ್ಕರ್ಮಿಗಳು ಪತಿಯ ಮೇಲೆ ಹಲ್ಲೆ ಮಾಡಿ, ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದರು.

ಇದನ್ನೂ ಓದಿ: ಪ್ರವಾಸಕ್ಕೆ ಬಂದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.