ETV Bharat / bharat

ಜೆಇಇ ಫಲಿತಾಂಶ ಪ್ರಕಟ: 56 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ.. ಟಾಪರ್ಸ್​​ ಲಿಸ್ಟ್​ನಲ್ಲಿ ಕರ್ನಾಟಕದ ಮೂವರು! - JEE Result - JEE RESULT

ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ-ಮೇನ್‌ನಲ್ಲಿ 56 ಅಭ್ಯರ್ಥಿಗಳು 100 ಅಂಕಗಳನ್ನು ಗಳಿಸಿದ್ದಾರೆ.

JEE results
ಜೆಇಇ ಫಲಿತಾಂಶ
author img

By PTI

Published : Apr 25, 2024, 7:00 AM IST

Updated : Apr 25, 2024, 8:08 AM IST

ನವದೆಹಲಿ: ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ - ಮೇನ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 56 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ರಾತ್ರಿ ಪ್ರಕಟಿಸಿದೆ. 23 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಪ್ರವೇಶಕ್ಕಾಗಿ ಜೆಇಇ (ಅಡ್ವಾನ್ಸ್‌ಡ್) ಪರೀಕ್ಷೆ ನಡೆದಿತ್ತು.

JEE results
ಜೆಇಇ ಫಲಿತಾಂಶ

ಜೆಇಇ (ಮೇನ್‌) ಜನವರಿಯ ಪರೀಕ್ಷೆಯಲ್ಲಿ 23 ಅಭ್ಯರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ. ಏಪ್ರಿಲ್​ನಲ್ಲಿ ನಡೆದ ಪರೀಕ್ಷೆಯಲ್ಲಿ 33 ಅಭ್ಯರ್ಥಿಗಳು ಈ ಸಾಧನೆ ಮಾಡಿದ್ದಾರೆ. ಒಟ್ಟು 56 ಟಾಪರ್‌ಗಳ ಪೈಕಿ ಸಾಮಾನ್ಯ ವರ್ಗದಿಂದ 40, ಒಬಿಸಿ ವರ್ಗದಿಂದ 10 ಮತ್ತು 'gen-EWS' ವರ್ಗದಿಂದ 6 ಮಂದಿ ಇದ್ದಾರೆ. ಎಸ್​ಸಿ ಎಸ್​​ಟಿ ವರ್ಗಗಳ ಯಾವುದೇ ಅಭ್ಯರ್ಥಿ ಈ ವರ್ಷ 100 ಅಂಕ ಪಡೆಯಲು ಸಾಧ್ಯವಾಗಿಲ್ಲ.

ಪರೀಕ್ಷೆ ಸಮಯದಲ್ಲಿ ಮೋಸದ ಮಾರ್ಗ ಬಳಸಿದ್ದಕ್ಕಾಗಿ, 39 ಅಭ್ಯರ್ಥಿಗಳನ್ನು ಮೂರು ವರ್ಷಗಳ ಕಾಲಕ್ಕೆ ಡಿಬಾರ್ ಮಾಡಲಾಗಿದೆ ಎಂದು ಕೂಡ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 15 ಮಂದಿಯ ಟಾಪ್ ಸ್ಕೋರರ್ ಪಟ್ಟಿಯೊಂದಿಗೆ ತೆಲಂಗಾಣ ಸತತ ಮೂರನೇ ಬಾರಿ ಮುನ್ನಡೆಯಲ್ಲಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳು ತಲಾ 7 ಅಭ್ಯರ್ಥಿಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದಿವೆ. ದೆಹಲಿಯು 6 ಅಭ್ಯರ್ಥಿಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಕರ್ನಾಟಕದ ಮೂವರು ಟಾಪರ್ಸ್​ ಲಿಸ್ಟ್​ನಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಸಾನ್ವಿ ಜೈನ್​, ಅಮೋಘ ಅಗರ್​​ವಾಲ್​ ಮತ್ತು ಸಾಯಿ ನವನೀತ್ ಮುಕುಂದ್​ ಎಂಬುವವರು ಟಾಪರ್​​​​​ ಆಗಿ ಹೊರ ಹೊಮ್ಮಿದ್ದಾರೆ.

14.1 ಲಕ್ಷ ಅಭ್ಯರ್ಥಿಗಳಲ್ಲಿ, ಸುಮಾರು ಶೇ.96 ರಷ್ಟು ವಿದ್ಯಾರ್ಥಿಗಳು ಕೇಂದ್ರೀಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್​ಗಳ​ ಪದವಿಪೂರ್ವ ಪ್ರವೇಶಕ್ಕಾಗಿ, ಹಾಗೆಯೇ ಜೆಇಇ(ಅಡ್ವಾನ್ಸ್ಡ್)ಗೆ ಹಾಜರಾಗಲು ಅರ್ಹತೆ ಪಡೆಯಲು ಈ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (NIT) ಸುಮಾರು 24,000 ಸೀಟುಗಳಿವೆ.

ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬೆಂಗಾಲಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು) 571 ಕೇಂದ್ರಗಳಲ್ಲಿ, 319 ನಗರಗಳಲ್ಲಿ ನಡೆಸಲಾಗಿತ್ತು. ಈ ಪೈಕಿ ಭಾರತದ ಹೊರಗಿನ 22 (ಕೇಪ್ ಟೌನ್, ದೋಹಾ, ದುಬೈ, ಮನಾಮ, ಓಸ್ಲೋ, ಸಿಂಗಾಪುರ್, ಕೌಲಾಲಂಪುರ್, ಲಾಗೋಸ್/ಅಬುಜಾ, ಜಕಾರ್ತ, ವಿಯೆನ್ನಾ, ಮಾಸ್ಕೋ, ಮತ್ತು ವಾಷಿಂಗ್ಟನ್ ಡಿಸಿ) ಪ್ರದೇಶಗಳಲ್ಲೂ ನಡೆಸಲಾಗಿದೆ.

ಇದನ್ನೂ ಓದಿ: ವಿಶ್ವದ ಅತಿ ದೊಡ್ಡ 3D ಪ್ರಿಂಟಿಂಗ್​​ ಟೆಕ್ನಾಲಜಿ: ಮನೆಗಳ ಸುಲಭ ಮುದ್ರಣ - ಇದು ಗಿನ್ನಿಸ್ ದಾಖಲೆ! - World Largest 3D Printer

2023ರಲ್ಲಿ, 2,51,673 ಅಭ್ಯರ್ಥಿಗಳು ಜೆಇಇ (ಅಡ್ವಾನ್ಸ್ಡ್)ಗೆ ಹಾಜರಾಗಲು ಅರ್ಹತೆ ಪಡೆದಿದ್ದರು. ಜೆಇಇ (ಅಡ್ವಾನ್ಸ್ಡ್)ಗಾಗಿ ನೋಂದಣಿ ಏಪ್ರಿಲ್ 27 ರಿಂದ ಪ್ರಾರಂಭವಾಗುತ್ತದೆ. ಈ ಆಕಾಂಕ್ಷಿಗಳು IIT ಗಳಾದ್ಯಂತ ಸುಮಾರು 17,385 ಪದವಿಪೂರ್ವ ಸೀಟುಗಳಿಗೆ ಸ್ಪರ್ಧಿಸಲಿದ್ದಾರೆ.

Last Updated : Apr 25, 2024, 8:08 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.