ETV Bharat / bharat

ಜಮ್ಮು- ಕಾಶ್ಮೀರ ಚುನಾವಣೆ: 9 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್​ - Congress Announces First List - CONGRESS ANNOUNCES FIRST LIST

ಮುಂದಿನ ತಿಂಗಳು ಆರಂಭವಾಗಲಿರುವ ಮೂರು ಹಂತದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ 9 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ದೂರೂವಿನಿಂದ ಗುಲಾಮ್ ಅಹ್ಮದ್ ಮಿರ್ ಮತ್ತು ಬನಿಹಾಲ್‌ನಿಂದ ವಿಕರ್ ರಸೂಲ್ ವಾನಿ ಅವರನ್ನು ಕಾಂಗ್ರೆಸ್​ ಪಕ್ಷ ಕಣಕ್ಕಿಳಿಸಿದೆ.

J&K Polls: Congress Announces First List Of 9 Candidates
ಜಮ್ಮು -ಕಾಶ್ಮೀರ ಚುನಾವಣೆ: 9 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್​ (ETV Bharat)
author img

By ETV Bharat Karnataka Team

Published : Aug 27, 2024, 9:03 AM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತದ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸೋಮವಾರ ತಡರಾತ್ರಿ ತನ್ನ ಒಂಬತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೂರೂವಿನಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಮತ್ತು ಬನಿಹಾಲ್‌ನಿಂದ ರಾಜ್ಯ ಘಟಕದ ಮಾಜಿ ಮುಖ್ಯಸ್ಥ ವಿಕಾರ್ ರಸೂಲ್ ವಾನಿ ಅವರನ್ನು ಅಖಾಡಕ್ಕಿಳಿಸಿದೆ.

ಮಿತ್ರಪಕ್ಷ ನ್ಯಾಷನಲ್ ಕಾನ್ಫರೆನ್ಸ್ -ಎನ್‌ಸಿ ಜೊತೆ ಕಾಂಗ್ರೆಸ್ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡ ನಂತರ ಈ ಘೋಷಣೆ ಹೊರಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಸಿ ಮತ್ತು ಕಾಂಗ್ರೆಸ್ ಕ್ರಮವಾಗಿ 51 ಮತ್ತು 32 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಂದ ಮಾಡಿಕೊಂಡಿವೆ.

ಸಿಪಿಐ(ಎಂ) ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ -ಜೆಕೆಎನ್‌ಪಿಪಿಗೆ ತಲಾ ಒಂದು ಸ್ಥಾನವನ್ನು ನೀಡಲಾಗಿದೆ. ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಶ್ರೀನಗರದ ನಿವಾಸದಲ್ಲಿ ದಿನವಿಡೀ ನಡೆದ ಮಾತುಕತೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಪಟ್ಟಿಯನ್ನು ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದ ಐದು ಸ್ಥಾನಗಳಲ್ಲಿ ಸೌಹಾರ್ದ ಸ್ಪರ್ಧೆ ನಡೆಯಲಿದೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.

ಸೀಟು ಹಂಚಿಕೆ ಒಪ್ಪಂದದ ಘೋಷಣೆಯಾದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಮೀರ್ ಅನ್ನು ದೂರುವಿನಿಂದ ಮತ್ತು ವಾನಿಯನ್ನು ಬನಿಹಾಲ್‌ನಿಂದ ಕಣಕ್ಕಿಸಲು ಪಕ್ಷ ನಿರ್ಧರಿಸಿದೆ. ಪಕ್ಷವು ಟ್ರಾಲ್‌ನಿಂದ ಸುರೀಂದರ್ ಸಿಂಗ್ ಚನ್ನಿ, ದೇವ್‌ಸರ್‌ನಿಂದ ಅಮಾನುಲ್ಲಾ ಮಂಟೂ, ಅನಂತನಾಗ್‌ನಿಂದ ಪೀರ್ಜಾದಾ ಮೊಹಮ್ಮದ್ ಸೈಯದ್, ಇಂದರ್ವಾಲ್‌ನಿಂದ ಶೇಖ್ ಜಫರುಲ್ಲಾ, ಭದರ್ವಾದಿಂದ ನದೀಮ್ ಷರೀಫ್, ದೋಡಾದಿಂದ ಶೇಖ್ ರಿಯಾಜ್ ಮತ್ತು ದೋಡಾ ಪಶ್ಚಿಮದಿಂದ ಪ್ರದೀಪ್ ಕುಮಾರ್ ಭಗತ್ ಅವರನ್ನು ಕಣಕ್ಕಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ 18 ರಂದು, ಎರಡನೇ ಹಂತದ ಮತದಾನ ಸೆಪ್ಟೆಂಬರ್ 25 ರಂದು ಮತ್ತು ಮೂರನೇ ಹಂತದ ವೋಟಿಂಗ್​ ಅಕ್ಟೋಬರ್ 1 ರಂದು ನಡೆಯಲಿದೆ. ಅಕ್ಟೋಬರ್ 4 ರಂದು ಮತ ಎಣಿಕೆ ನಡೆಯಲಿದೆ.

ಇದನ್ನು ಓದಿ: ಭಾರೀ ಮಳೆಗೆ ಕೊಚ್ಚಿ ಹೋದ ಟ್ರ್ಯಾಕ್ಟರ್​: 10 ಮಂದಿ ರಕ್ಷಣೆ, 7 ಜನರಿಗೆ ಹುಡುಕಾಟ; ನಾಲ್ಕು ರಾಜ್ಯಗಳಿಗೆ ಐಎಂಡಿ ಅಲರ್ಟ್​ - Heavy Rain In gujarat

ETV Bharat Logo

Copyright © 2025 Ushodaya Enterprises Pvt. Ltd., All Rights Reserved.