ETV Bharat / bharat

ಕಡಲ್ಗಳ್ಳರಿಂದ ಅಪಹರಿಸಿದ್ದ ಇರಾನ್ ಹಡಗು, 23 ಪಾಕಿಸ್ತಾನಿ ಸಿಬ್ಬಂದಿ ರಕ್ಷಿಸಿದ ಭಾರತೀಯ ನೌಕಾಪಡೆ - Indian Navy - INDIAN NAVY

Hijacked Iranian ship rescued: ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಪಡೆ ಮತ್ತೊಮ್ಮೆ ತನ್ನ ಶೌರ್ಯವನ್ನು ಪ್ರದರ್ಶಿಸಿದೆ. ಕಡಲ್ಗಳ್ಳರಿಂದ ಅಪಹರಿಸಲಾಗಿದ್ದ ಇರಾನ್ ಹಡಗು ಹಾಗೂ ಅದರಲ್ಲಿದ್ದ 23 ಪಾಕಿಸ್ತಾನಿ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ.

Iranian fishing vessel  Indian Navy rescues operation  Pakistani crew members  Hijacked Iranian ship rescued
ಕಡಲ್ಗಳ್ಳರಿಂದ ಅಪಹರಿಸಿದ್ದ ಇರಾನ್ ಹಡಗು, 23 ಪಾಕಿಸ್ತಾನಿ ಸಿಬ್ಬಂದಿ ರಕ್ಷಿಸಿದ ಭಾರತೀಯ ನೌಕಾಪಡೆ
author img

By PTI

Published : Mar 30, 2024, 9:05 AM IST

ನವದೆಹಲಿ: ಭಾರತೀಯ ನೌಕಾಪಡೆಯ ಯೋಧರು ತಮ್ಮ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಭಾರತೀಯ ನೌಕಾಪಡೆಯು ಇರಾನ್ ಹಡಗನ್ನು ಹೈಜಾಕ್ ಮಾಡಿದ್ದ ಕಡಲ್ಗಳ್ಳರ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದೆ ಎಂದು ಭಾರತೀಯ ನೌಕಾಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾರ್ಚ್ 28ರಂದು ಕಡಲ್ಗಳ್ಳರು ಇರಾನಿನ ಅಲ್-ಕಂಬಾರ್ 786 ಹಡಗನ್ನು ಹೈಜಾಕ್​ ಮಾಡಿದ್ದರು. ಈ ಬಗ್ಗೆ ಮಾಹಿತಿ ದೊರೆತ ತಕ್ಷಣ ಭಾರತೀಯ ನೌಕಾಪಡೆ ಕೂಡ ಅಲರ್ಟ್​ ಆಗಿತ್ತು. ಇರಾನ್ ಹಡಗಿಗೆ ಸಹಾಯ ಮಾಡಲು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾದ ಭಾರತೀಯ ನೌಕಾಪಡೆಯ ಹಡಗುಗಳನ್ನು ಕಳುಹಿಸಲಾಗಿತ್ತು. ಇರಾನ್ ಹಡಗನ್ನು ಹಾಗೂ ಈ ಹಡಗಿನಲ್ಲಿದ್ದ 23 ಪಾಕಿಸ್ತಾನಿಗಳನ್ನು ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ನೌಕೆಯ ಮೂಲಕ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ಹಡಗನ್ನು ಏರದಿದ್ದ ಕಡಲ್ಗಳ್ಳರು: ಶುಕ್ರವಾರ ಮಾಹಿತಿ ನೀಡಿದ ಭಾರತೀಯ ನೌಕಾಪಡೆ, ''ವಶಪಡಿಸಿಕೊಂಡಿರುವ ಇರಾನ್ ಮೀನುಗಾರಿಕಾ ಹಡಗು ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

9 ಶಸ್ತ್ರಸಜ್ಜಿತ ಕಡಲ್ಗಳ್ಳರು ಈ ಇರಾನಿನ ಹಡಗನ್ನು ಹತ್ತಿದ್ದಾರೆ ಎಂದು ವರದಿಯಾಗಿತ್ತು. ನೌಕಾಪಡೆಯ ವಕ್ತಾರರು ಹಂಚಿಕೊಂಡ ಅಧಿಕೃತ ಹೇಳಿಕೆಯ ಪ್ರಕಾರ, ಇರಾನ್ ಮೀನುಗಾರಿಕಾ ನೌಕೆ ಅಲ್ ಕಾನ್ಬರ್ 786 ಮೇಲೆ ಕಡಲ್ಗಳ್ಳರ ದಾಳಿ ಕುರಿತು ಗುರುವಾರ ಸಂಜೆ ಮಾಹಿತಿ ಲಭಿಸಿತ್ತು. ಇದರಿಂದ ಎರಡು ಭಾರತೀಯ ನೌಕಾ ಹಡಗುಗಳನ್ನು ಕಡಲ ಭದ್ರತಾ ಕಾರ್ಯಾಚರಣೆಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿತ್ತು.

ನೌಕಾಪಡೆಯಿಂದ ಸಹಾಯಹಸ್ತ: ಈ ಘಟನೆಯ ಸಮಯದಲ್ಲಿ ಇರಾನಿನ ಮೀನುಗಾರಿಕಾ ಹಡಗು ಸೊಕೊಟ್ರಾದ ನೈಋತ್ಯಕ್ಕೆ ಸುಮಾರು 90 ನಾಟಿಕಲ್ ಮೈಲಿಗಳಷ್ಟು (NM) ಇತ್ತು ಎಂದು ವರದಿಯಾಗಿದೆ. ಇದರೊಂದಿಗೆ ಒಂಬತ್ತು ಶಸ್ತ್ರಸಜ್ಜಿತ ಕಡಲ್ಗಳ್ಳರು ಅದರಲ್ಲಿದ್ದರು. ಅಪಹರಣಕ್ಕೊಳಗಾದ ಇರಾನ್ ಹಡಗು ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಷ್ಟ್ರೀಯತೆಯನ್ನು ಲೆಕ್ಕಿಸದೆ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

''ಕಡಲ ಭದ್ರತಾ ಕಾರ್ಯಾಚರಣೆಗಳ ಭಾಗವಾಗಿ, ನೌಕಾಪಡೆಯು ಕಡಲ್ಗಳ್ಳತನ-ವಿರೋಧಿ, ಕ್ಷಿಪಣಿ-ವಿರೋಧಿ ಮತ್ತು ಡ್ರೋನ್-ವಿರೋಧಿ ಕಾರ್ಯಾಚರಣೆಗಳನ್ನು ಕೈಗೊಂಡಿದೆ. 100 ದಿನಗಳ ಅವಧಿಯಲ್ಲಿ 'ಆಪ್ ಸಂಕಲ್ಪ್' ಅಭಿಯಾನದಲ್ಲಿ 110 ಜನರನ್ನು ರಕ್ಷಿಸಲಾಗಿದೆ. 45 ಭಾರತೀಯರು ಮತ್ತು 65 ವಿದೇಶಿ ಪ್ರಜೆಗಳ ಪ್ರಾಣ ಉಳಿಸಲಾಗಿದೆ'' ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ಇತ್ತೀಚೆಗೆ ತಿಳಿಸಿದ್ದರು.

ಇದನ್ನೂ ಓದಿ: ಪಾರ್ಟ್​ ಟೈಂ ಕೆಲಸದ ಹೆಸರಲ್ಲಿ ಅಮಾಯಕರಿಗೆ ಗಾಳ, ವಂಚನೆ ; 32 ಕೋಟಿ ಜಪ್ತಿ ಮಾಡಿದ ಇಡಿ - fraud case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.