ETV Bharat / bharat

ಸಿರಿಯಾದಲ್ಲಿನ ಭಾರತೀಯರ ರಕ್ಷಣೆ; 75 ಜನರ ಸ್ಥಳಾಂತರ - INDIA EVACUATES 75 NATIONALS

ಸಿರಿಯಾ ದೇಶದಲ್ಲಿನ ಇತ್ತೀಚಿನ ಬೆಳವಣಿಗೆ ಹಿನ್ನೆಲೆ ಭಾರತ ಸರ್ಕಾರವು ಇಂದು 75 ಭಾರತೀಯರ ಸ್ಥಳಾಂತರ ಮಾಡಿದೆ.

India evacuates 75 nationals from Syria after rebel forces overthrow Assad regime
ಸಿರಿಯಾದಲ್ಲಿನ ಭಾರತೀಯರ ರಕ್ಷಣೆ (ANI)
author img

By ETV Bharat Karnataka Team

Published : Dec 11, 2024, 11:18 AM IST

ನವದೆಹಲಿ: ಸಿರಿಯಾದಲ್ಲಿ ಉಂಟಾದ ಬಿಕ್ಕಟ್ಟು ಇತರ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಅಲ್ಲಿನ ಅಧ್ಯಕ್ಷ ಬಶರ್ ಅಸ್ಸಾದ್ ಸರ್ಕಾರವನ್ನು ಬಂಡುಕೋರರು ಪತನಗೊಳಿಸಿದ್ದು, ಹೊಸ ಸರ್ಕಾರ ರಚನೆಗೆ ಸಿದ್ಧತೆ ನಡೆದಿದೆ. ಸದ್ಯ ದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಸಿರಿಯಾದಲ್ಲಿ ಭಾರತೀಯ ಪ್ರಜೆಗಳ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮಂಗಳವಾರ ಸಿರಿಯಾದಿಂದ 75 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ. ಡಮಾಸ್ಕಸ್​​ ಮತ್ತು ಬೈರುತ್​ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಈ ಸ್ಥಳಾಂತರಕ್ಕೆ ಮುಂದಾಗಿದೆ. ಅಲ್ಲಿನ ಭದ್ರತೆಯ ಹಿತದೃಷ್ಟಿಯ ಮೌಲ್ಯಮಾಪನದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಸಂಬಂಧ ತಡರಾತ್ರಿ ಹೇಳಿಕೆ ಹೊರಡಿಸಿರುವ ಸಚಿವಾಲಯ, ಸಿರಿಯಾ ದೇಶದಲ್ಲಿನ ಇತ್ತೀಚಿನ ಬೆಳವಣಿಗೆ ಹಿನ್ನೆಲೆ ಭಾರತ ಸರ್ಕಾರವು ಇಂದು 75 ಭಾರತೀಯರ ಸ್ಥಳಾಂತರ ಮಾಡಿದೆ. ಅದರಲ್ಲಿ ಸೈದಾ ಜೈನಬ್​ನಲ್ಲಿ ಸಿಲುಕಿದ್ದ 44 ಮಂದಿ ಜಮ್ಮು ಮತ್ತು ಕಾಶ್ಮೀರದ ಜೈರೀನ್​ಗಳು ಇದ್ದಾರೆ. ಎಲ್ಲಾ ಭಾರತೀಯರು ಸುರಕ್ಷಿತವಾಗಿ ಲೆಬನಾನ್​ ಗಡಿ ದಾಟಿದ್ದು, ಲಭ್ಯವಿರುವ ವಾಣಿಜ್ಯ ವಿಮಾನದಲ್ಲಿ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಿದೆ.

ವಿದೇಶದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯು ಭಾರತ ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆ ಸಿರಿಯಾದಲ್ಲಿ ಸಿಲುಕಿರುವ ಭಾರತೀಯರು ಡಮಾಸ್ಕ್​ಸ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಸಿರಿಯಾದಲ್ಲಿನ ಪರಿಸ್ಥಿತಿ ಕುರಿತು ಭಾರತ ಕುರಿತು ಸೂಕ್ಷ್ಮ ಮೇಲ್ವಿಚಾರಣೆ ನಡೆಸಲಿದೆ ಎಂದಿದೆ.

ಸಿರಿಯಾದಲ್ಲಿ ಸಿಲುಕಿರುವ ಭಾರತೀಯರು ಡಮಾಸ್ಕಸ್​ನಲ್ಲಿರುವ ತುರ್ತು ಸಹಾಯವಾಣಿ +963 993385973ಗೆ ವಾಟ್ಸಾಪ್​ ಮತ್ತು hoc.damascus@mea.gov.in ಇಮೇಲ್​ ಮೂಲಕ ಸಂಪರ್ಕಿಸುವಂತೆ ಸಲಹೆ ನೀಡಿದೆ.

ಸಿರಿಯಾ ಬಂಡುಕೋರರು ಭಾನುವಾರ ಅಲ್ಲಿನ ರಾಜಧಾನಿ ಡಮಾಸ್ಕಸ್​ ಸೇರಿದಂತೆ ಹಲವು ಪ್ರಮುಖ ನಗರವನ್ನು ವಶಕ್ಕೆ ಪಡೆಯುವ ಮೂಲಕ ಸರ್ವಾಧಿಕಾರ ಸರ್ಕಾರವನ್ನು ಕೆಳಗಿಳಿಸಿದರು. ಹಯಾತ್ ತಹ್ರೀರ್ ಅಲ್-ಶಾಮ್ ಡಮಾಸ್ಕಸ್ ಅನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಸ್ಸಾದ್ ದೇಶ ತೊರೆದು ಓಡಿ ಹೋಗಿದ್ದಾನೆ. ಅಸ್ಸಾದ್​ನ 50 ವರ್ಷದ ಕುಟುಂಬ ಆಳ್ವಿಕೆಯನ್ನು ಕೊನೆಗೊಳಿಸಲಾಗಿದೆ. ಪಲಾಯನ ಮಾಡಿರುವ ಅಸ್ಸಾದ್​ಗೆ ಮಾಸ್ಕೋದಲ್ಲಿದ್ದು ಅವರಿಗೆ ಆಶ್ರಯ ನೀಡಲಾಗುವುದು ಎಂದು ರಷ್ಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: ಸಿರಿಯಾದಲ್ಲಿ ಸರ್ಕಾರ ರಚನೆಗೆ ತಹ್ರಿರ್ ಅಲ್-ಶಾಮ್ ಸಿದ್ಧತೆ: ಅಲ್-ಬಶೀರ್ ಪ್ರಧಾನಿಯಾಗುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.