ಮುಂಬೈ/ಮೀರತ್: ಉತ್ತರ ಪ್ರದೇಶದ ಮೀರತ್‌ನಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಗಿದ ಒಂದೇ ದಿನದಲ್ಲಿ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ 'ರಾಮಾಯಣ' ಧಾರವಾಹಿಯ ನಟ ಅರುಣ್ ಗೋವಿಲ್ ಮುಂಬೈಗೆ ಆಗಮಿಸಿದ್ದಾರೆ. ಏಕಾಏಕಿ ಕ್ಷೇತ್ರ ಬಿಟ್ಟು ಬಂದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಸ್ವತಃ ಅರುಣ್ ಗೋವಿಲ್ ಈ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣಾ ಪ್ರಚಾರಕ್ಕಾಗಿ ಪಕ್ಷದ ಸೂಚನೆಯ ಮೇರೆಗೆ ಮುಂಬೈಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ಮತದಾರರು, ಸಹೋದರಿಯರು, ಸಹೋದರರು ಮತ್ತು ಮೀರತ್‌ನ ಕಾರ್ಯಕರ್ತರೇ, ಮಾರ್ಚ್ 24ರ ಹೋಳಿ ಹಬ್ಬದಂದು ಮಾರ್ಚ್ 24ರಂದು ಭಾರತೀಯ ಜನತಾ ಪಕ್ಷವು ಚುನಾವಣೆಗೆ ನನ್ನ ಹೆಸರನ್ನು ಘೋಷಿಸಿತ್ತು. ಪಕ್ಷದ ಸೂಚನೆಯ ಮೇರೆಗೆ ನಾನು ಮಾರ್ಚ್ 26ರಂದು ನಿಮ್ಮ ಮಧ್ಯೆ ಬಂದಿದ್ದೆ. ಒಂದು ತಿಂಗಳ ಕಾಲ ನಿಮ್ಮೊಂದಿಗೆ ಇದ್ದು, ನಿಮ್ಮ ಬೆಂಬಲದೊಂದಿಗೆ ಚುನಾವಣಾ ಪ್ರಚಾರ ಮಾಡಿದ್ದೇನೆ. ಚುನಾವಣೆ ಪೂರ್ಣಗೊಂಡಿದೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಗೌರವಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಮೀರತ್ ಬಿಜೆಪಿ ಅಭ್ಯರ್ಥಿ ಗೋವಿಲ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗ ಪಕ್ಷದ ಸೂಚನೆ ಮೇರೆಗೆ ನನ್ನ ಜವಾಬ್ದಾರಿಯನ್ನು ನಿಭಾಯಿಸಲು ಮುಂಬೈನಲ್ಲಿದ್ದೇನೆ. ಚುನಾವಣಾ ಪ್ರಚಾರಕ್ಕಾಗಿ ನನ್ನನ್ನು ಬೇರೆ ಪ್ರದೇಶಗಳಿಗೆ ಕಳುಹಿಸಲು ಪಕ್ಷವು ಯೋಜಿಸುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ, ನಾನು ನಿಮ್ಮ ನಡುವೆ ಮತ್ತೆ ಇರುತ್ತೇನೆ. ಮೀರತ್‌ನ ಜನರು ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೊಂದಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಮೀರತ್ಅನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನಗಳನ್ನು ಪ್ರಾರಂಭಿಸುತ್ತೇನೆ ಎಂದು 66 ವರ್ಷದ ನಟ ತಿಳಿಸಿದ್ದಾರೆ.
ದೂರದರ್ಶನದ 'ರಾಮಾಯಣ' ಧಾರಾವಾಹಿಯಲ್ಲಿ ರಾಮನ ಪಾತ್ರವನ್ನು ಗೋವಿಲ್ ನಿಭಾಯಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಮೀರತ್ ಕ್ಷೇತ್ರದಿಂದ ಬಿಜೆಪಿ ಗೋವಿಲ್ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಮತದಾನ ಮುಗಿದ ತಕ್ಷಣವೇ ಕ್ಷೇತ್ರದಿಂದ ಹೊರಬಂದಿದ್ದಾರೆ. ಹೀಗಾಗಿ ಬಿಜೆಪಿ ವಿರುದ್ಧ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಕಿಡಿಕಾರಿದ್ದಾರೆ.
-
पता चल रहा है कि मेरठ से भाजपा प्रत्याशी रहे अरुण गोविल जी चुनाव निपटने के अगले ही दिन मुंबई निकल गए। शायद इन्हें जनता के बीच रहने में दिक्कत थी।
— Ajay Rai🇮🇳 (@kashikirai) April 27, 2024
ये जनाब कल पोलिंग बूथ के अंदर वीडियोग्राफी करा रहे थे। इनके चुनाव प्रचार में एक व्यापारी की जेब से 36000 रुपये उड़ा लिए गए।
इतना ही… pic.twitter.com/ZoEoa3yta4
ಮೀರತ್‌ನ ಬಿಜೆಪಿ ಅಭ್ಯರ್ಥಿಯಾಗಿದ್ದ ಅರುಣ್ ಗೋವಿಲ್ ಚುನಾವಣೆ ಮುಗಿದ ಮರುದಿನವೇ ಮುಂಬೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಬಹುಶಃ ಅವರು ಸಾರ್ವಜನಿಕರ ನಡುವೆ ಉಳಿಯಲು ಕಷ್ಟಪಡುತ್ತಿದ್ದರು. ಅಷ್ಟೇ ಅಲ್ಲ ಚುನಾವಣಾ ಪ್ರಚಾರದ ವೇಳೆ ಪತ್ರಕರ್ತರೊಬ್ಬರು ಮೀರತ್‌ನ ಸಮಸ್ಯೆಗಳ ಬಗ್ಗೆ ಕೇಳಿದಾಗ ಗೋವಿಲ್ ಅವರಿಗೆ ಏನೂ ಗೊತ್ತೇ ಇರಲಿಲ್ಲ. ಹೀಗಾಗಿ ಅವರು, ಮೊದಲು ಚುನಾವಣೆ ಆಗಲಿ. ಬಳಿಕ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದರು. ಇಂತಹ ನಾಯಕರಿಂದ ಸಾರ್ವಜನಿಕರು ಏನನ್ನು ನಿರೀಕ್ಷಿಸಬಹುದು?, ಬಹುತೇಕ ಬಿಜೆಪಿ ನಾಯಕರದ್ದು ಇದೇ ನೀತಿ. ಬಿಜೆಪಿಯವರಿಗೆ ಜನತೆ ಮತ್ತು ಕ್ಷೇತ್ರದ ಬಗ್ಗೆ ಕಾಳಜಿ ಇಲ್ಲ ಎಂದು ಅಜಯ್ ರೈ ಟೀಕಿಸಿದ್ದರು. ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮೀರತ್‌ನಲ್ಲಿ ಮತದಾನ ನಡೆದಿದೆ. ಈ ಕ್ಷೇತ್ರದಲ್ಲಿ ಶೇ.58.94ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ಗುಜರಾತ್ನಲ್ಲಿ ಸಿಡಿದೆದ್ದ ರಜಪೂತರು: ಈ ಬಾರಿ ಬಿಜೆಪಿಗೆ ಪಾಠ ಕಳಿಸುತ್ತಾರೆ ಎಂದ ಕಾಂಗ್ರೆಸ್, ನಾಳೆ ರಾಹುಲ್ ರಾಜ್ಯ ಪ್ರವಾಸ