ETV Bharat / bharat

ಐಸ್​ಕ್ರೀಂ ತಿನ್ನುತ್ತಿದ್ದ ಪೊಲೀಸರ ಮೇಲೆ ಕಾರು ಹರಿಸಿದ ಎಎಸ್​ಐ: ಪಾನಮತ್ತ ಅಧಿಕಾರಿ ಬಂಧನ - Ludhiana Two Policemen Died - LUDHIANA TWO POLICEMEN DIED

Ludhiana Policemen Died: ಐಸ್‌ಕ್ರೀಂ ತಿನ್ನುತ್ತಿದ್ದವರ ಮೇಲೆ ಎಎಸ್​ಐ ಕಾರು ಹರಿದಿದ್ದು, ಓರ್ವ ಪೊಲೀಸ್‌ ಸಿಬ್ಬಂದಿ ಮೃತಪಟ್ಟರೆ, ಮತ್ತೊಬ್ಬ ಪೊಲೀಸ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ.

DRUNKEN ASI  CAR RAN OVER TWO POLICEMEN  PUNJAB POLICE DEPARTMENT
ಅಪಘಾತದ ದೃಶ್ಯ (ETV Bharat)
author img

By ETV Bharat Karnataka Team

Published : Jun 24, 2024, 12:27 PM IST

ಲೂಧಿಯಾನ (ಪಂಜಾಬ್​): ಶನಿವಾರ ರಾತ್ರಿ ಕುಡಿದ ಅಮಲಿನಲ್ಲಿ ಎಎಸ್‌ಐ ಕಾರು ಚಲಾಯಿಸಿ ಅಪಘಾತ ಎಸಗಿರುವ ಆರೋಪ ಕೇಳಿ ಬಂದಿದೆ. ರಸ್ತೆಬದಿಯಲ್ಲಿ ಐಸ್​ಕ್ರೀಂ ತಿನ್ನುತ್ತಿದ್ದ ಪಿಸಿಆರ್‌ನಲ್ಲಿದ್ದ ಇಬ್ಬರು ಪೊಲೀಸರಿಗೆ ಎಎಸ್ಐ ಕಾರು ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ ನಶೆಯಲ್ಲಿದ್ದ ಎಎಸ್​ಐ ಕಾರು ನಿಲ್ಲಿಸದೇ ಇಬ್ಬರನ್ನೂ ಸುಮಾರು 15 ಮೀಟರ್​ವರೆಗೆ ಎಳೆದೊಯ್ದಿದ್ದಾರೆ. ಈ ವೇಳೆ, ಕಾರಿನ ಟೈರ್ ಕೆಳಗೆ ಬಿದ್ದು ಪೊಲೀಸ್ ಹೆಡ್​ ಕಾನ್ಸ್​​ಟೇಬಲ್​​​ ಸಾವನ್ನಪ್ಪಿದರೆ, ಮತ್ತೊಬ್ಬ ಪೊಲೀಸ್​ ಸಿಬ್ಬಂದಿ ಕಾಲು ಮುರಿದುಕೊಂಡಿದ್ದಾರೆ.

ಆರೋಪಿ ಎಎಸ್‌ಐ ಬಂಧನ: ಮೃತನನ್ನು ಹೆಡ್ ಕಾನ್‌ಸ್ಟೆಬಲ್ ಆಕಾಶದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸಹಚರ ಎಎಸ್‌ಐ ಸತ್ನಾಮ್ ಸಿಂಗ್ ಅವರನ್ನು ಡಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ತಕ್ಷಣ ಪೊಲೀಸ್ ತಂಡ ಆರೋಪಿ ಬಲ್ವಿಂದರ್ ಸಿಂಗ್​ನನ್ನು ಬಂಧಿಸಿದೆ.

ಕುಡಿದ ಅಮಲಿನಲ್ಲಿ ಅಪಘಾತ: ಆರೋಪಿ ಎಎಸ್‌ಐ ಬಲ್ವಿಂದರ್ ಸಿಂಗ್ ಪೊಲೀಸ್ ಠಾಣೆ ವಿಭಾಗ ನಂ.2ರಲ್ಲಿ ನಿಯೋಜನೆಗೊಂಡಿದ್ದರು. ಮೃತ ಹೆಡ್ ಕಾನ್ಸ್​ಟೇಬಲ್ ಆಕಾಶದೀಪ್ ಸಿಂಗ್ ಅವರ ಅಂತ್ಯಕ್ರಿಯೆ ನಿನ್ನೆ ನೆರವೇರಿತು. ಈ ಅವಘಡ ಸಂಭವಿಸಿದಾಗ ಆರೋಪಿಯು ಎಎಸ್‌ಐ ಸಿವಿಲ್‌ನಲ್ಲಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದರು ಎಂಬ ಆರೋಪವಿದೆ.

ಮೃತ ಸಿಬ್ಬಂದಿಗೆ ಇಬ್ಬರು ಮಕ್ಕಳು: ಆಕಾಶದೀಪ್ 2009ರಲ್ಲಿ ಪೊಲೀಸ್ ಪಡೆಗೆ ಸೇರಿದ್ದರು. ಮೂಲಗಳ ಪ್ರಕಾರ ಕಾರು ಚಲಾಯಿಸುತ್ತಿದ್ದ ಎಎಸ್‌ಐ ಬಲ್ವಿಂದರ್ ಸಿಂಗ್ ಪಾನಮತ್ತರಾಗಿದ್ದು, ನಶೆಯಲ್ಲಿ ಕಾರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿಯೂ ಹೊರ ಬೀಳುತ್ತಿದೆ. ಆಕಾಶದೀಪ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಬಗ್ಗೆ ಎಸ್‌ಎಚ್‌ಒ ಜೈದೀಪ್ ಜಾಖರ್ ಮಾಹಿತಿ ಹಂಚಿಕೊಂಡಿದ್ದಾರೆ.

ಓದಿ: ಪರಪ್ಪನ ಅಗ್ರಹಾರಕ್ಕೆ ಸೂರಜ್ ರೇವಣ್ಣ ಶಿಫ್ಟ್: ಇಂದು ಸಿಐಡಿ ಕಸ್ಟಡಿ ಸಾಧ್ಯತೆ - Suraj Revanna in Parappan Agrahara

ETV Bharat Logo

Copyright © 2025 Ushodaya Enterprises Pvt. Ltd., All Rights Reserved.