ETV Bharat / bharat

ಈ ಬಾರಿ ಮಾನ್ಸೂನ್​ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; ಐಎಂಡಿ - normal rainfall this monsoon

ದೇಶದಲ್ಲಿ ಈ ಬಾರಿ ಉತ್ತಮ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

author img

By PTI

Published : Apr 15, 2024, 5:01 PM IST

Updated : Apr 15, 2024, 5:59 PM IST

imd-says-india-likely-to-experience-above-normal-rainfall-this-monsoon

ನವದೆಹಲಿ: ಈ ವರ್ಷ ಅಂದರೆ 2024ರ ಮಾನ್ಸೂನ್​ ಋತುವಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದ್ದು, ಲಾ ​ನಿನಾ ಪರಿಣಾಮದಿಂದಾಗಿ ಆಗಸ್ಟ್​- ಸೆಪ್ಟೆಂಬರ್​ನಲ್ಲಿ ಈ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯು ತಾತ್ಕಾಲಿಕ ಅಥವಾ ದೇಶದೆಲ್ಲೆಡೆ ಎಲ್ಲಾ ಪ್ರಾದೇಶಿಕ ಸ್ಥಳದಲ್ಲಿ ಒಂದೇ ರೀತಿಯಲ್ಲಿ ಮಳೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹವಾಮಾನ ಬದಲಾವಣೆಯಿಂದ ಹಲವೆಡೆ ಹಲವು ಪ್ರಮಾಣದ ಮಳೆಯನ್ನು ಕಾಣಬಹುದಾಗಿದೆ.

ಹವಾಮಾನ ತಜ್ಞರು ಹೇಳುವಂತೆ, ಮಳೆಯಾಗುವ ದಿನಗಳು ಇಳಿಕೆಯಾಗಿವೆ. ಅಧಿಕ ಮಳೆ ಅಥವಾ ಕಡಿಮೆ ಮಳೆ ಅವಧಿಯು ಹೆಚ್ಚಿದೆ. ಇದು ಬರ ಮತ್ತು ಪ್ರವಾಹದ ಪರಿಸ್ಥಿತಿಗೆ ಕಾರಣವಾಗಲಿದೆ.

1951 -2023ರ ನಡುವಿನ ದತ್ತಾಂಶದ ಆಧಾರದ ಮೇಲೆ ಭಾರತವು ಎಲ್​ನಿನೊ ಸಂಭವಿಸಿದ ನಂತರದ 9 ಅವಧಿಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಕಂಡಿದೆ ಎಂದು ಐಎಂಡಿಯ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

ನಾಲ್ಕನೇ ತಿಂಗಳಿನ ಮಾನ್ಸೂನ್​ ಋತುವಿನಲ್ಲಿ (ಜೂನ್​ನಿಂದ ಸೆಪ್ಟೆಂಬರ್​​)ನಲ್ಲಿ ಭಾರತವು ವಾಡಿಕೆಗಿಂತ ಹೆಚ್ಚಿನ ಮಳೆ ಅಂದರೆ ಅಂದಾಜು 106ರಷ್ಟು ದೀರ್ಘಾವಧಿ ಮಳೆ ಕಾಣಬಹುದಾಗಿದೆ ಎಂದಿದ್ದಾರೆ.

ಹಿಂದೂ ಮಹಾಸಾಗರದ ಸಕಾರಾತ್ಮಕ ಪರಿಸ್ಥಿತಿ ಮತ್ತು ಉತ್ತರಧೃವ ಗೋಳದಲ್ಲಿನ ಕಡಿಮೆ ಹಿಮ ಆವೃತದ ಮೇಲೆ ಅಂದಾಜಿಸಲಾಗುವುದು. ಈ ಪರಿಸ್ಥಿತಿಗಳು ಭಾರತದ ನೈರುತ್ಯ ಮಾನ್ಸೂನ್​ಗೆ ಪೂರಕವಾದ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ಸುಧಾರಿತ ಎಲ್​ ನಿನೊ ಪರಿಸ್ಥಿತಿಯನ್ನು ಇದೀಗ ಕಾಣಬಹುದಾಗಿದೆ. ಇದು ಮಾನ್ಸೂನ್​ ಋತುಮಾನದ ಸಮಯ ಆಗಮನದಲ್ಲಿ ತಟಸ್ಥವಾಗಲಿದೆ ಎಂದು ಅಂದಾಜಿಸಲಾಗಿದೆ. ಇದಾದ ಬಳಿಕ ಆಗಸ್ಟ್​- ಸೆಪ್ಟೆಂಬರ್​​ನಲ್ಲಿ ಲಾ ನಿನಾ ಪರಿಸ್ಥಿತಿ ರೂಪುಗೊಳ್ಳಲಿದೆ ಎಂದು ವಿವರಿಸಿದರು.

2023ರಲ್ಲಿ ಭಾರತವು ಕಡಿಮೆ ಸರಾಸರಿಗಿಂತ ಸಾಮಾನ್ಯ ಮಳೆಯನ್ನು ಕಂಡಿತು. ಕಳೆದ ನಾಲ್ಕು ವರ್ಷಗಳಿಂದ ಭಾರತ ಸಾಮಾನ್ಯ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಮಾನ್ಸೂನ್​ ಋತುಮಾನದಲ್ಲಿ ಕಂಡಿದೆ. ನೈರುತ್ಯ ಮುಂಗಾರು ಭಾರತದ ಒಟ್ಟಾರೆ ಶೇ 70ರಷ್ಟು ಮಳೆ ತರುತ್ತದೆ. ಇದು ದೇಶದ ಕೃಷಿ ವಲಯಕ್ಕೆ ಹೆಚ್ಚು ನಿರ್ಣಾಯಕವಾಗಿದೆ. ಕೃಷಿಯು ಭಾರತದ ಜಿಡಿಪಿಯಲ್ಲಿ ಶೇ 14ರಷ್ಟು ಕೊಡುಗೆಯನ್ನು ನೀಡುತ್ತಿದೆ.

ಅಲ್ಲದೇ ಈ ಅವಧಿಗಿಂತ ಮುಂಚಿತವಾಗಿಯೇ ಮಾನ್ಸೂನ್​ ಆರಂಭವಾಗಲಿದೆ ಎಂದು ಈ ಹಿಂದೆ ಐಎಂಡಿ ತಿಳಿಸಿತ್ತು.

ಇದನ್ನೂ ಓದಿ: ದೆಹಲಿ ಸೇರಿ ಉತ್ತರ ಭಾರತದಲ್ಲಿ ಗುಡುಗು ಸಹಿತ ಮಳೆ: ದಕ್ಷಿಣ ಭಾರತದಲ್ಲಿ ಮುಂದಿನ 3 ದಿನ

Last Updated : Apr 15, 2024, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.