ETV Bharat / bharat

ಫಲವಂತಿಕೆ, ನಿಶ್ಶಕ್ತಿ ಬಗ್ಗೆ ಪತಿ-ಪತ್ನಿ ಕಿತ್ತಾಟ: ಗಂಡನ ಸಾಮರ್ಥ್ಯ ಪರೀಕ್ಷೆಗೆ ಸುಪ್ರೀಂ ಕೋರ್ಟ್​ ಅವಕಾಶ - Supreme Court

ತನ್ನ ಸಾಮರ್ಥ್ಯದ ಕುರಿತು ವೈದ್ಯಕೀಯ ಪರೀಕ್ಷೆಗೆ ಒಳಪಡುವ ಕುರಿತು ವ್ಯಕ್ತಿಯೋರ್ವ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟಿದೆ.

ಸುಪ್ರೀಂ ಕೋರ್ಟ್​
Supreme Court
author img

By ETV Bharat Karnataka Team

Published : Apr 6, 2024, 11:06 PM IST

ನವದೆಹಲಿ: ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಸಾಮರ್ಥ್ಯವನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗೆ ಒಳಪಡುವ ಕುರಿತು ವ್ಯಕ್ತಿಯೋರ್ವ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಪತ್ನಿ ತನ್ನ ಪತಿ ದುರ್ಬಲ ಎಂದು ಹೇಳಿಕೊಂಡು ವಿಚ್ಛೇದನವನ್ನು ಕೋರಿದ್ದರು. ಇದರಿಂದ ಪತಿ ಈ ಮನವಿ ಮಾಡಿದ್ದರು.

2013ರಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದ ದಂಪತಿ ಬ್ರಿಟನ್​ಗೆ ತೆರಳಿದರು. ಅಲ್ಲಿ ಏಳೂವರೆ ವರ್ಷಗಳ ಕಾಲ ಸಂತೋಷದಿಂದ ಒಟ್ಟಿಗೆ ಇದ್ದರು. ಆದಾಗ್ಯೂ, ಅವರ ಸಂಬಂಧದಲ್ಲಿ ಬಿರುಕುಗಳು ಮೂಡಿ 2021ರ ಏಪ್ರಿಲ್​ನಲ್ಲಿ ಬೇರ್ಪಟ್ಟರು. ಹೆಂಡತಿಯು ಪತಿಯೊಂದಿಗೆ ಎಲ್ಲ ಸಂವಹನ ಮಾರ್ಗಗಳನ್ನು ಮುರಿದುಕೊಂಡಿದ್ದರು. ಬಳಿಕ ದಂಪತಿಯ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ಪತಿ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಪ್ರಯತ್ನಿಸಿದ್ದರು. ಆದರೆ, ಪತ್ನಿ ತನ್ನ ಪತಿ ದುರ್ಬಲ ಎಂದು ಹೇಳಿಕೊಂಡು ವಿಚ್ಛೇದನಕ್ಕೆ ಮನವಿ ಮಾಡಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ತನ್ನ ಸಾಮರ್ಥ್ಯವನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಕೋರಿ ಪತಿ ಮನವಿ ಮಾಡಿದ್ದರು.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು, 2023ರ ಜೂನ್ 27ರಂದು ವಿಚಾರಣಾ ನ್ಯಾಯಾಲಯವು ನೀಡಿದ ಆದೇಶವನ್ನು ಕಾಪಾಡಿಕೊಳ್ಳಲು ನಾವು ಪ್ರಸ್ತುತ ಮೇಲ್ಮನವಿಗಳಿಗೆ ಭಾಗಶಃ ಅವಕಾಶ ನೀಡುತ್ತೇವೆ. ಏಕೆಂದರೆ, ಅದು ಮೇಲ್ಮನವಿದಾರ/ಪತಿಗೆ ಅವರ ಸಾಮರ್ಥ್ಯವನ್ನು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸುತ್ತದೆ. ಇಂದಿನಿಂದ ನಾಲ್ಕು ವಾರಗಳ ಅವಧಿಯಲ್ಲಿ ವಿಚಾರಣಾ ನ್ಯಾಯಾಲಯ ಸೂಚಿಸಿದ ರೀತಿಯಲ್ಲಿ ಪರೀಕ್ಷೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸಲಿ ಎಂದು ಸೂಚಿಸಿದೆ.

ಯುಕೆಯಿಂದ ಹಿಂದಿರುಗಿದ ನಂತರ ಪತ್ನಿಯ ತಂದೆಗೆ ಸೇರಿದ ವಸತಿಯಲ್ಲಿ ಒಟ್ಟಿಗೆ ಇರುತ್ತಿದ್ದರು. ಆದಾಗ್ಯೂ ವಿವಾದಗಳು ಎದ್ದು, ದಂಪತಿಯ ಸಂಬಂಧವನ್ನು ಮುರಿದಿತ್ತು. 2021ರಲ್ಲಿ ಪತಿ 1955ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ಚೆನ್ನೈನಲ್ಲಿರುವ ಹೆಚ್ಚುವರಿ ಪ್ರಧಾನ ಕುಟುಂಬ ನ್ಯಾಯಾಲಯದ ಮುಂದೆ ದಾಂಪತ್ಯ ಹಕ್ಕುಗಳನ್ನು ಮರುಸ್ಥಾಪಿಸಲು ಅರ್ಜಿ ಸಲ್ಲಿಸಿದ್ದರು. ಆದರೆ, ಗಂಡನ ದುರ್ಬಲತೆಯ ಕಾರಣದಿಂದಾಗಿ ಕಕ್ಷಿದಾರರ ನಡುವಿನ ವಿವಾಹವು ನೆರವೇರಲಿಲ್ಲ ಎಂಬ ಕಾರಣಕ್ಕಾಗಿ ಕಾಯ್ದೆಯ ಸೆಕ್ಷನ್ 13 (1) (ಐಎ) ಅಡಿಯಲ್ಲಿ ವಿಚ್ಛೇದನಕ್ಕೆ ಪತ್ನಿ ಆದ್ಯತೆ ನೀಡಿದ್ದರು.

ಮತ್ತೊಂದೆಡೆ, ಪತಿಯು ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 45ರಡಿ ಸಿವಿಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 151ರ ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದರು. ತನ್ನನ್ನು ಸಾಮರ್ಥ್ಯ ಪರೀಕ್ಷೆಗೆ ಮತ್ತು ಅದೇ ಸಮಯದಲ್ಲಿ ಫಲವಂತಿಕೆ ಪರೀಕ್ಷೆ ಮತ್ತು ಮಾನಸಿಕ ಆರೋಗ್ಯ ಪರೀಕ್ಷೆಗಾಗಿ ಹೆಂಡತಿಯನ್ನು ಒಳಪಡಿಸಲು ಕೋರಿದ್ದರು. ಆಗ ಎರಡೂ ಕಡೆಯವರಿಗೆ ಈ ಪರೀಕ್ಷೆಗಳನ್ನು ನಡೆಸಲು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಡೀನ್ ವೈದ್ಯಕೀಯ ಮಂಡಳಿ ರಚಿಸಬೇಕು ಎಂಬ ಷರತ್ತಿನ ಮೇಲೆ ವಿಚಾರಣಾ ನ್ಯಾಯಾಲಯವು ಮಧ್ಯಂತರ ಅರ್ಜಿಗಳನ್ನು ಅನುಮತಿಸಿತ್ತು.

ವೈದ್ಯಕೀಯ ಮಂಡಳಿಯ ವರದಿಯನ್ನು ಸೀಲ್​ ಮಾಡಿದ ಕವರ್‌ನಲ್ಲಿ ವಕೀಲ ಕಮಿಷನರ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪರೀಕ್ಷೆಯ ಫಲಿತಾಂಶವನ್ನು ಯಾವುದೇ ಮೂರನೇ ವ್ಯಕ್ತಿಗೆ ಬಹಿರಂಗಪಡಿಸದಂತೆ ಮತ್ತು ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನಿರ್ದೇಶನ ನೀಡಿತ್ತು. ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು. ಮತ್ತೊಂದೆಡೆ, ಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಪತಿ ಪರ ವಕೀಲರು, ಸಾಮರ್ಥ್ಯ ಪರೀಕ್ಷೆಗೆ ಒಳಗಾಗಲು ಸಿದ್ಧರಿರುವಾಗ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕೆಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದು ವಾದ ಮಂಡಿಸಿದ್ದರು. ಇದೇ ವೇಳೆ, ಫಲವತ್ತತೆ ಪರೀಕ್ಷೆ ಅಥವಾ ಮಾನಸಿಕ ಆರೋಗ್ಯ ತಪಾಸಣೆಯಾಗಲಿ ಯಾವುದೇ ಪರೀಕ್ಷೆಗೆ ಒಳಗಾಗಲು ಆಕೆ ಇಚ್ಛಿಸದಿದ್ದಲ್ಲಿ ಅಂತಹ ಪರೀಕ್ಷೆಗಳಿಗೆ ಒಳಗಾಗುವಂತೆ ಒತ್ತಾಯಿಸುವಂತಿಲ್ಲ ಎಂದು ಪತ್ನಿ ಪರ ವಕೀಲರು ಪ್ರತಿವಾದಿಸಿದ್ದರು.

ಇದನ್ನೂ ಓದಿ: ಬೇರೆಯವರ ಬದಲಿಗೆ ಕ್ಲರ್ಕ್ ಪರೀಕ್ಷೆಗೆ ಹಾಜರಾಗಿದ್ದ ಆರೋಪ; ಐಎಎಸ್ ಅಧಿಕಾರಿ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.