How to Book Confirm Tatkal Ticket : ಸಮಯದ ಉಳಿತಾಯ ಮತ್ತು ಕಡಿಮೆ ವೆಚ್ಚದಂತಹ ಕಾರಣಗಳಿಂದ ಹೆಚ್ಚಿನ ಜನರು ರೈಲು ಪ್ರಯಾಣದಲ್ಲಿ ಆಸಕ್ತಿ ತೋರಿಸುತ್ತಾರೆ. ಆದರೆ.. ದೂರದ ಸ್ಥಳಗಳಿಗೆ ರೈಲು ಪ್ರಯಾಣವನ್ನು ಯೋಜಿಸುವವರು ಮುಂಗಡವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಾರೆ. ಆದರೆ.. ಕೆಲವೊಮ್ಮೆ ಇತರೆ ಕಾರಣಗಳಿಂದ ಪ್ರಯಾಣ ಬೆಳೆಸಬೇಕಾದ ಸ್ಥಿತಿ ಬಂದೊದುಗುತ್ತದೆ. ಆಗ ಟಿಕೆಟ್ ಬುಕ್ಕಿಂಗ್ ಮಾಡಬೇಕಾದ್ರೆ ವೇಟಿಂಗ್ ಲಿಸ್ಟ್ ಗಗನಕ್ಕೇರಿರುತ್ತದೆ. ಹೀಗಾಗಿ ಎಲ್ಲರೂ ತತ್ಕಾಲ್ ಟಿಕೆಟ್ ಕಾಯ್ದಿರಿಸುವಿಕೆ ಕಡೆ ಗಮನ ಹರಿಸುತ್ತಾರೆ.
ತಡವಾಗಿ ಪ್ರಯಾಣ ಬೆಳೆಸುವವರಿಗೆ IRCTC ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವ ಸೌಲಭ್ಯ ಇದೆ. ಆದ್ರೆ ಈ ಸೌಲಭ್ಯ ಪ್ರಯಾಣಕ್ಕೂ ಒಂದು ದಿನ ಮೊದಲು ಮಾತ್ರ ಕಾಯ್ದಿರಿಸಬೇಕು. ಮೇಲಾಗಿ.. ಎಸಿ ಕ್ಲಾಸ್ ಟಿಕೆಟ್ ಬುಕ್ಕಿಂಗ್ ಬೆಳಗ್ಗೆ 10 ಗಂಟೆಗೆ ಆರಂಭವಾದರೆ, ನಾನ್ ಎಸಿ ಕ್ಲಾಸ್ ಟಿಕೆಟ್ ಬುಕ್ಕಿಂಗ್ ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತದೆ.
ತತ್ಕಾಲ್ ಬುಕ್ಕಿಂಗ್ ಅಷ್ಟು ಸುಲಭವಲ್ಲ: ತತ್ಕಾಲ್ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಏಕೆಂದರೆ ಅನೇಕರು ಆ ಸಮಯದಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಮೇಲಾಗಿ.. ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕೆಲವೇ ಕ್ಷಣಗಳವರೆಗೆ ಓಪನ್ ಇರುತ್ತದೆ. ಆ ಸಮಯದಲ್ಲಿ, ಹಲವಾರು ಜನರು ಟಿಕೆಟ್ ಬುಕ್ ಮಾಡಲು ಪ್ರಯತ್ನಿಸುವುದರಿಂದ, ಇಂಟರ್ನೆಟ್ ಸಮಸ್ಯೆ ಉದ್ಭವಿಸುತ್ತದೆ. ಆದ್ದರಿಂದ.. ನೀವು ತತ್ಕಾಲ್ ಬುಕಿಂಗ್ ಸಮಯದಲ್ಲಿ ತ್ವರಿತವಾಗಿ ಮತ್ತು ಪೂರ್ವಭಾವಿಯಾಗಿ ಪ್ರತಿಕ್ರಿಯಿಸಬೇಕು. ಅದೇನೆ ಇರಲಿ.. ಆ ಸಮಯದಲ್ಲಿ ಈ ರೀತಿ ಬುಕ್ ಮಾಡಿದ್ರೆ ತತ್ಕಾಲ್ ಟಿಕೆಟ್ ಅನ್ನು ಸುಲಭವಾಗಿ ಕನ್ಫರ್ಮ್ ಮಾಡಿಕೊಳ್ಳಬಹುದು. ಅದು ಯಾವ ರೀತಿ ಎಂಬುದು ಈ ಕೆಳಗಿನಂತಿವೆ..
ತತ್ಕಾಲ್ ಟಿಕೆಟ್ ಕನ್ಫರ್ಮ್ ಮಾಡುವುದು ಹೇಗೆ?..
- IRCTC ನಲ್ಲಿ ತತ್ಕಾಲ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ನೀವು ಮೊದಲು IRCTC ಖಾತೆಯನ್ನು ಹೊಂದಿರಬೇಕು.
- ಇಲ್ಲದಿದ್ದರೆ ನೀವು IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗೆ ಭೇಟಿ ನೀಡಬೇಕು ಮತ್ತು ಹೊಸ ಖಾತೆಯನ್ನು ತೆರೆಯಬೇಕು.
- ಹೊಸ ಖಾತೆಯ ಮೂಲಕ ನೀವು ಲಾಗಿನ್ ಆಗಿ. ನಂತರ ತೆರೆಯುವ ಪುಟದಲ್ಲಿ 'My Account' ಆಯ್ಕೆಯನ್ನು ಕ್ಲಿಕ್ ಮಾಡಿ.
- ಈಗ ನೀವು ‘ಮೈ ಮಾಸ್ಟರ್ ಲಿಸ್ಟ್’ಗೆ ಎಂಟ್ರಿ ಕೊಡಿ. ಅಲ್ಲಿ ಅಗತ್ಯವಿರುವ ಡೇಟಾವನ್ನು ನಮೂದಿಸಿ.
- ನೀವು ಪ್ರಯಾಣಿಕರಿಗೆ ಮಾಹಿತಿ ನೀಡಿದ ನಂತರ.. ಆ ಮಾಹಿತಿ ಸರಿಯಾಗಿದೆಯೇ? ಅನ್ನುವುದನ್ನು ಮತ್ತೊಮ್ಮೆ ದೃಢೀಕರಿಸಬೇಕು.
- ನಂತರ ನೀವು ತತ್ಕಾಲ್ ಟಿಕೆಟ್ ವಿಂಡೋವನ್ನು ತೆರೆಯಬೇಕು ಮತ್ತು ನಿಮ್ಮ ಪ್ರಯಾಣದ ವಿವರಗಳನ್ನು ನೀಡಬೇಕು.
- ಇದರ ನಂತರ ನೀವು ಮೊದಲು ನಮೂದಿಸಿದ ಮಾಹಿತಿಯು ಮಾಸ್ಟರ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
- ಮೊದಲೇ ಎಲ್ಲ ಮಾಹಿತಿ ಸಿದ್ಧಪಡಿಸಿಕೊಂಡು ಸೇವ್ ಮಾಡಿ.. ಟಿಕೆಟ್ ಬೇಕು ಎಂದಾಗ.. ಮೊದಲಿನಿಂದಲೂ ವಿವರ ನೀಡುವ ಅಗತ್ಯವಿಲ್ಲ. ಅದು ನಿಮ್ಮ ಸಮಯವನ್ನು ಉಳಿಸುತ್ತದೆ.
- ಈಗ ನೀವು ಹಣ ಪಾವತಿಯನ್ನು ಮಾತ್ರ ಮಾಡಬೇಕಾಗುತ್ತದೆ ಅಷ್ಟೇ. ಆಗ ತಕ್ಷಣ ನಿಮ್ಮ ತತ್ಕಾಲ್ ಟ್ರೈನ್ ಟಿಕೆಟ್ ಕನ್ಫರ್ಮ್ ಆಗುತ್ತೆ.