ETV Bharat / bharat

1991.. ಅಂದಿನ ಕೇಂದ್ರ ಬಜೆಟ್​​​ ಮನಮೋಹನ್​ ಸಿಂಗ್​ ಸಮರ್ಥಿಸಿಕೊಂಡಿದ್ದು ಹೇಗೆ ಗೊತ್ತಾ? - HOW MANMOHAN DEFENDED 1991 BUDGET

ಜುಲೈ 25, 1991 ಮನಮೋಹನ್ ಸಿಂಗ್ ಅವರು ಕ್ರಾಂತಿಕಾರಿ ಬಜೆಟ್​ ಮಂಡನೆ ಮಾಡಿ, ದೇಶದ ಆರ್ಥಿಕ ದಿಕ್ಕನ್ನು ಭದ್ರಪಡಿಸಿದ ದಿನ. ಅಂದು ಅವರು ಎದುರಿಸಿದ ಸವಾಲುಗಳು ಅನೇಕ.

how-manmohan-defended-the-landmark-1991-union-budget
1991.. ಅಂದಿನ ಕೇಂದ್ರ ಬಜೆಟ್​​​ ಮನಮೋಹನ್​ ಸಿಂಗ್​ ಸಮರ್ಥಿಸಿಕೊಂಡಿದ್ದು ಹೇಗೆ ಗೊತ್ತಾ? (IANS)
author img

By PTI

Published : Dec 27, 2024, 7:14 AM IST

ನವದೆಹಲಿ: ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ ಅವರು 1991ರ ಕೇಂದ್ರ ಬಜೆಟ್​​ಗೆ ಅಂಗೀಕಾರ ಪಡೆಯಲು ಭಾರಿ ಕಸರತ್ತನ್ನೇ ಮಾಡಬೇಕಾಯಿತು. ಅವರು ಅಂದು ತೆಗೆದುಕೊಂಡ ಹಾಗೂ ಎದುರಿಸಿದ ಸವಾಲುಗಳು ನೂರಾರು. ಅಕ್ಷರಶಃ ಪ್ರಯೋಗ ಮಾಡಿ, ಟೀಕೆಗಳ ಸರಮಾಲೆಯನ್ನು ಎದುರಿಸಿ ಗೆದ್ದು ಬೀಗಿದರು. ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದರು.

ಪಿ ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಮನಮೋಹನ್​ ಸಿಂಗ್​ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. ಆಗ ಅವರು ತಮ್ಮ ಚೊಚ್ಚಲ ಬಜೆಟ್​ ಮಂಡಿಸಿದ್ದರು. ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಎದುರಿಸಿ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದ್ದರು. ಸುಧಾರಣೆಯ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು.

1991 ರಲ್ಲಿ ಸಿಂಗ್ ಅವರ ಐತಿಹಾಸಿಕ ಸುಧಾರಣೆಗಳು ಭಾರತವನ್ನು ದಿವಾಳಿತನದಿಂದ ರಕ್ಷಿಸಿದವು ಮಾತ್ರವಲ್ಲದೇ , ದೇಶದ ಆರ್ಥಿಕ ಅಭಿವೃದ್ಧಿಯ ಪಥವನ್ನು ಏರುತ್ತಿರುವ ಜಾಗತಿಕ ಶಕ್ತಿಯಾಗಿ ಮರು ವ್ಯಾಖ್ಯಾನಿಸುವಂತೆ ಮಾಡಿದವು.

ಜುಲೈ 25, 1991 ರಂದು ಕೇಂದ್ರ ಬಜೆಟ್ ಮಂಡನೆಯಾದ ಒಂದು ದಿನದ ನಂತರ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದರು. ತಮ್ಮ ಬಜೆಟ್‌ನ ಸಂದೇಶವನ್ನು ಸಮರ್ಥವಾಗಿ ಪತ್ರಕರ್ತರೆದರು ಮಂಡಿಸಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 'ಟು ದಿ ಬ್ರಿಂಕ್ ಅಂಡ್ ಬ್ಯಾಕ್: ಇಂಡಿಯಾಸ್ 1991 ಸ್ಟೋರಿ' ಎಂಬ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ. ನರಸಿಂಹ ರಾವ್​ ಅವರು ಪ್ರಧಾನಿಯಾದ ನಂತರ ನಡೆದ ವೇಗದ ಬದಲಾವಣೆಗಳನ್ನು ತಮ್ಮ ಪುಸ್ತಕದಲ್ಲಿ ವಿವರವಾಗಿ ಬರೆದಿದ್ದಾರೆ.

ಪತ್ರಕರ್ತರ ಬೆಂಕಿ ಉಂಡೆಯಂತಹ ಪ್ರಶ್ನೆಗಳಿಗೆ ಸಿಂಗ್ ಉತ್ತರ: ಬಜೆಟ್​ ಮಂಡನೆಯ ಒಂದು ದಿನದ ನಂತರ ಪತ್ರಕರ್ತರನ್ನು ಎದುರಿಸಿದ ಮನಮೋಹನ್​ ಸಿಂಗ್​, ತಮ್ಮ ಬಜೆಟ್ ಬಗ್ಗೆ ಎಳೆ ಎಳೆಯಾಗಿ ದೇಶದ ಮುಂದಿಟ್ಟರು, ತಮ್ಮ ನೀತಿ - ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಇದೊಂದು 'ಮಾನವೀಯ ಮುಖವುಳ್ಳ ಬಜೆಟ್' ಎಂದು ಬಣ್ಣಿಸಿದರು. ಅವರು ರಸಗೊಬ್ಬರ, ಪೆಟ್ರೋಲ್ ಮತ್ತು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಿಸುವ ಪ್ರಸ್ತಾವನೆಗಳನ್ನು ಜೋಪಾನವಾಗಿ ಸಮರ್ಥಿಸಿಕೊಂಡರು ಎಂದು ಜೈರಾಂ ರಮೇಶ್ 2015 ರಲ್ಲಿ ಪ್ರಕಟವಾದ ತಮ್ಮ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.

ಅಂದಿನ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ನಡೆದಿದ್ದೇನು?: ಕಾಂಗ್ರೆಸ್ ಶ್ರೇಯಾಂಕಗಳಲ್ಲಿನ ಅಸಮಾಧಾನ ಗ್ರಹಿಸಿದ ಅಂದಿನ ಪ್ರಧಾನಿ ನರಸಿಂಹ ರಾವ್ ಅವರು ಆಗಸ್ಟ್ 1, 1991 ರಂದು ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಸಭೆ ಕರೆದಿದ್ದರು. ಪಕ್ಷದ ಸಂಸದರು "ತಮ್ಮ ಮನದಾಳ, ಅಸಮಾಧಾನಗಳನ್ನು ಹೊರ ಹಾಕಲು ಮುಕ್ತ ಅವಕಾಶ ನೀಡಲು ನಿರ್ಧರಿಸಿದರು.

ಪ್ರಧಾನಿ ನರಸಿಂಹ ರಾವ್​, ಮನಮೋಹನ್ ಸಿಂಗ್ ಅವರಿಗೆ ಉತ್ತರ ನೀಡಲು, ವಿರೋಧವನ್ನು ಎದುರಿಸಲು ಅವಕಾಶ ಮಾಡಿಕೊಟ್ಟರು ಅಂತಾರೆ ತಮ್ಮ ಪುಸ್ತಕದಲ್ಲಿ ಜೈರಾಂ ರಮೇಶ್. ಆಗಸ್ಟ್ 2 ಮತ್ತು 3 ರಂದು ಮತ್ತೆ ಎರಡು ಸಭೆಗಳು ನಡೆದವು. ಆಗಲೂ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದ ಮನಮೋಹನ್​ ಸಿಂಗ್​ ಅವರೇ, ರಾವ್​ ಎಲ್ಲವನ್ನು ಮೌನದಿಂದಲೇ ನೋಡುತ್ತಿದ್ದರು.

ಸಿಂಗ್​ ಬೆಂಬಲಕ್ಕೆ ನಿಂತಿದ್ದು ಅಯ್ಯರ್​​: ಸಿಪಿಪಿ ಸಭೆಗಳಲ್ಲಿ ಹಣಕಾಸು ಸಚಿವರು ಒಬ್ಬಂಟಿಯಾಗಿದ್ದರು ಮತ್ತು ಅವರ ಸಂಕಷ್ಟವನ್ನು ನಿವಾರಿಸಲು ಪ್ರಧಾನಿ ಏನನ್ನೂ ಮಾಡಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಜೈರಾಂ ರಮೇಶ್. ಅಂದು ಸಭೆಯಲ್ಲಿ ಮನಮೋಹನ್ ಸಿಂಗ್​ ಅವರ ನೆರವಿಗೆ ಬಂದಿದ್ದು, ಕೇವಲ ಇಬ್ಬರು ಸಂಸದರು ಒಬ್ಬರು ಮಣಿಶಂಕರ್ ಅಯ್ಯರ್ ಮತ್ತೊಬ್ಬರು ನಾಥುರಾಮ್ ಮಿರ್ಧಾ. ಈ ಇಬ್ಬರು ಸಂಸದರು ಮನಮೋಹನ್ ಸಿಂಗ್ ಅವರ ಬಜೆಟ್ ಅನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದರು.

ಅಯ್ಯರ್ ಮನಮೋಹನ್​ ಸಿಂಗ್​ ಅವರ ಬಜೆಟ್ ಅನ್ನು ಬೆಂಬಲಿಸಿದರು, ಇದು ಹಣಕಾಸಿನ ಬಿಕ್ಕಟ್ಟನ್ನು ತಡೆಯಲು ಏನು ಮಾಡಬೇಕೆಂಬುದರ ಬಗ್ಗೆ ರಾಜೀವ್ ಗಾಂಧಿಯವರ ನಂಬಿಕೆಗಳಿಗೆ ಅನುಗುಣವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಪಕ್ಷದ ಒತ್ತಡಕ್ಕೆ ಮಣಿದ ಸಿಂಗ್, ರಸಗೊಬ್ಬರ ಬೆಲೆಯಲ್ಲಿನ ಶೇಕಡಾ 40 ರಷ್ಟು ಹೆಚ್ಚಳವನ್ನು ಶೇಕಡಾ 30 ಕ್ಕೆ ಇಳಿಸಲು ಒಪ್ಪಿಕೊಂಡರು, ಆದರೆ ಎಲ್ಪಿಜಿ ಮತ್ತು ಪೆಟ್ರೋಲ್ ಬೆಲೆಗಳ ಏರಿಕೆಯನ್ನು ಅವರು ಕಡಿಮೆ ಮಾಡುವ ಗೋಜಿಗೆ ಹೋಗಲೇ ಇಲ್ಲ.

ಆಗಸ್ಟ್ 6 ರಂದು ಲೋಕಸಭೆಯಲ್ಲಿ ಸಿಂಗ್ ನೀಡಲಿರುವ ಹೇಳಿಕೆಯನ್ನು ನಿರ್ಧರಿಸಲು ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಆಗಸ್ಟ್ 4 ಮತ್ತು 5, 1991 ರಂದು ಎರಡು ಬಾರಿ ಸಭೆ ಸೇರಿ ಚರ್ಚಿಸಿತು. ಕಳೆದ ಕೆಲವು ದಿನಗಳಿಂದ ಇದ್ದ ರೋಲ್-ಬ್ಯಾಕ್ ಕಲ್ಪನೆಯ ಬೇಡಿಕೆಯನ್ನು ಕೈಬಿಟ್ಟಿತು, ಆದರೆ ಈಗ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಿತ್ತು ಎಂದು ಜೈರಾಂ ರಮೇಶ್​ ಬರೆದ ತಮ್ಮ ಪುಸ್ತಕ ಹೇಳಿದ್ದಾರೆ.

ಇದನ್ನು ಓದಿ:ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್​ ಸಿಂಗ್ ಇನ್ನಿಲ್ಲ; ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರಿಂದ ಕಂಬನಿ

ಆರ್ಥಿಕ ತಜ್ಞ ಮನಮೋಹನ್ ಸಿಂಗ್ ನಿಧನ: ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸುತ್ತಿರುವ ಟೀ ಇಂಡಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.