ETV Bharat / bharat

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ: ಲಾಹೌಲ್ - ಸ್ಪಿಟಿಯಲ್ಲಿ ಹಠಾತ್ ಪ್ರವಾಹದಲ್ಲಿ ಕೊಚ್ಚಿದ ಮಹಿಳೆ, 47 ಮಂದಿ ನಾಪತ್ತೆ - Heavy rain in Himachal Pradesh

author img

By ANI

Published : Aug 3, 2024, 9:53 AM IST

ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಲಾಹೌಲ್-ಸ್ಪಿಟಿಯಲ್ಲಿ ಹಠಾತ್ ಆಗಿ ಸೃಷ್ಟಿಯಾದ ಪ್ರವಾಹದಲ್ಲಿ ಮಹಿಳೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

Heavy rain  Heavy rain in Himachal Pradesh  Himachal Pradesh
ಹಿಮಾಚಲ ಪ್ರದೇಶದಲ್ಲಿ ತುರ್ತು ಕಾರ್ಯಾಚರಣೆ ಕೈಗೊಂಡಿರುವುದು (ANI)

ಲಾಹೌಲ್ ಮತ್ತು ಸ್ಪಿತಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮುಂದುವರೆದಿದೆ. ಕಾಜಾ, ಲಾಹೌಲ್ ಮತ್ತು ಸ್ಪಿತಿಯಲ್ಲಿ ಸಂಗಮ್ ನಲ್ಲೂಹ್ ಬಳಿ ಹಠಾತ್ ಪ್ರವಾಹ ಸೃಷ್ಟಿಯಾಗಿದೆ. ಅಬ್ಬರದ ಪ್ರವಾಹದಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.

ಲಾಹೌಲ್ ಮತ್ತು ಸ್ಪಿತಿಯಲ್ಲಿರುವ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (DEOC), ಹಠಾತ್ ಪ್ರವಾಹದ ನಂತರ ವಾಹನವೊಂದು ಅವಶೇಷಗಳಡಿಯಲ್ಲಿ ಹೂತು ಹೋಗಿದೆ ಎಂದು ಹೇಳಿದೆ. ಹಿಮಾಚಲ ಪ್ರದೇಶ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, "ಸಗ್ನಮ್ ನಲ್ಲುಹ್ ಬಳಿ ಹಠಾತ್ ಪ್ರವಾಹದ ಘಟನೆ ವರದಿಯಾಗಿದೆ. ಉಪ ವಿಭಾಗ ಸ್ಪಿತಿ, ಜಿಲ್ಲಾ ಲಾಹೌಲ್ ಮತ್ತು ಸ್ಪಿತಿ ಘಟನೆಯಲ್ಲಿ ಒಬ್ಬ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾರೆ ಮತ್ತು ಒಂದು ವಾಹನವೂ ಅವಶೇಷಗಳ ಅಡಿಯಲ್ಲಿ ಸಿಲುಕಿದೆ.

ಐಪಿಸಿ 17ನೇ ಕಾರ್ಪ್ಸ್ ಮತ್ತು ಸ್ಥಳೀಯ ಪೊಲೀಸರನ್ನು ಒಳಗೊಂಡ ರಕ್ಷಣಾ ತಂಡವು ರಕ್ಷಣೆಗಾಗಿ ಘಟನೆಯ ಸ್ಥಳದಲ್ಲಿದೆ. ಅಲ್ಲದೇ ಸ್ಥಳದಲ್ಲಿ ಆಂಬ್ಯುಲೆನ್ಸ್ ಮತ್ತು ಜೆಸಿಬಿಯನ್ನು ನಿಯೋಜಿಸಲಾಗಿದೆ. ಹಿಮಾಚಲ ಪ್ರದೇಶದ ಕುಲು, ಮಂಡಿ ಮತ್ತು ಶಿಮ್ಲಾ ಪ್ರದೇಶಗಳಲ್ಲಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದ ನಂತರ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. 47 ಜನರು ನಾಪತ್ತೆಯಾಗಿದ್ದಾರೆ.

55 ಜನರ ಪರಿಹಾರ ಶಿಬಿರಕ್ಕೆ ಸ್ಥಳಾಂತರ: ಮೇಘಸ್ಫೋಟದಿಂದ ಮಂಡಿಯಲ್ಲಿ ಐವರು ಮೃತಪಟ್ಟಿದ್ದಾರೆ. ಕುಲು ಪ್ರದೇಶದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಶಿಮ್ಲಾದಲ್ಲಿ ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಿಮ್ಲಾದಲ್ಲಿ ಇದುವರೆಗೆ ಕಾಣೆಯಾದವರ ಸಂಖ್ಯೆ 33, ಕುಲು 9 ಮತ್ತು ಮಂಡಿಯಲ್ಲಿ 6 ಸೇರಿದಂತೆ ಒಟ್ಟು 55 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಹಿಮಾಚಲ ಪ್ರದೇಶದ ಸಿಎಂರಿಂದ ಪರಿಶೀಲನೆ: ವರದಿಯ ಪ್ರಕಾರ, 61 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾದರೆ, 42 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಕುಲುವಿನಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ದುರಂತ ಘಟನೆಯ ಹಿನ್ನೆಲೆಯಲ್ಲಿ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ರಾಜ್ಯ ಸರ್ಕಾರವು ಈ ಹಿಂದೆ ವ್ಯಾಪಕವಾದ ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳನ್ನು ಮಾಡಿದೆ.

ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ನಡುವೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಸುಖು ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದರು. ನಂತರ, ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸುಖು ಅವರು, 49 ಜನರು ನಾಪತ್ತೆಯಾಗಿದ್ದಾರೆ ಮತ್ತು ನಾಲ್ಕು ಮೃತದೇಹಗಳನ್ನು ಪೀಡಿತ ಪ್ರದೇಶಗಳಿಂದ ವಶಪಡಿಸಿಕೊಳ್ಳಲಾಗಿದೆ. ನಾವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

ರಾಂಪುರದ ಜಕ್ರಿಯ ಸಮೇಜ್ ಖಾಡ್‌ನಲ್ಲಿರುವ ಜಲವಿದ್ಯುತ್ ಯೋಜನೆ ಬಳಿ ಗುರುವಾರ ಮುಂಜಾನೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಮೇಘ ಸ್ಫೋಟದ ಮಾಹಿತಿ ಲಭಿಸಿದೆ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಎನ್‌ಡಿಆರ್‌ಎಫ್ ತಂಡ, ಎಸ್‌ಡಿಆರ್‌ಎಫ್ ತಂಡ, ಪೊಲೀಸರು ಮತ್ತು ರಕ್ಷಣಾ ತಂಡವು ಘಟನಾ ಸ್ಥಳಕ್ಕೆ ತೆರಳಿದೆ ಎಂದು ಜಿಲ್ಲಾಧಿಕಾರಿ ಅನುಪಮ್ ಕಶ್ಯಪ್ ತಿಳಿಸಿದ್ದಾರೆ.

ಇದನ್ನೂ ಓದಿ: ವಯನಾಡ್‌ ಭೀಕರ ಭೂಕುಸಿತ: 3 ದಿನದ ಬಳಿಕ ಸಾವು ಗೆದ್ದು ಬಂದ ಒಂದೇ ಕುಟುಂಬದ ನಾಲ್ವರು! - Wayanad Rescue Operation

ETV Bharat Logo

Copyright © 2024 Ushodaya Enterprises Pvt. Ltd., All Rights Reserved.