ETV Bharat / bharat

ಮಂಡ್ಯದ ಜನ ದುಡ್ಡಿಗೆ ಮರಳಾಗಲ್ಲ, ಕಾಂಗ್ರೆಸ್​​ಗೆ ಈಗ ನಾನೇ ಟಾರ್ಗೆಟ್: ಹೆಚ್ ​ಡಿ ಕುಮಾರಸ್ವಾಮಿ - Kumarswamy DK Shivakumar talk war - KUMARSWAMY DK SHIVAKUMAR TALK WAR

ಮಂಡ್ಯ ಜಿಲ್ಲೆಯ ಜನರು ಯಾವತ್ತೂ ದುಡ್ಡಿಗೆ ಮರಳು ಆಗುವುದಿಲ್ಲ, ಸ್ವಾಭಿಮಾನದ ಜನ. ಹಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ಅವರ ಧೋರಣೆ ನಡೆಯುವುದಿಲ್ಲ ಎಂದು ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಹೇಳಿದರು.

HD Kumarswamy says Congresss is Targeting me

author img

By ETV Bharat Karnataka Team

Published : Apr 17, 2024, 1:40 PM IST

Updated : Apr 17, 2024, 5:56 PM IST

ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ

ಮೈಸೂರು: ನನ್ನ ಸೋಲು- ಗೆಲುವು ಜನರು ತೀರ್ಮಾನಿಸುತ್ತಾರೆ. ಮಂಡ್ಯ ಜನತೆ ದುಡ್ಡಿಗೆ ಮರಳಾಗುವುದಿಲ್ಲ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ​​ ದುಡ್ಡು ಕೆಲಸ ಮಾಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಉಪಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನರು ಯಾವತ್ತೂ ದುಡ್ಡಿಗೆ ಮರಳಾಗುವುದಿಲ್ಲ. ಸ್ವಾಭಿಮಾನದ ಜನ. ಹಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬ ಅವರ ಧೋರಣೆ ನಡೆಯುವುದಿಲ್ಲ. ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ. ತಾವು ಅವರ ರಕ್ಷಣೆಗೆ ನಿಲ್ಲುವುದಾಗಿ ಶಿವಕುಮಾರ್​​ ಹೇಳುತ್ತಾರೆ. ಹಾಗಾದ್ರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ಅರ್ಥ. ಈ ಬಾರಿ ಒಕ್ಕಲಿಗರ ಒಲವು ಬಹುತೇಕ ಮೈತ್ರಿಯ ಪರ ಇದೆ ಎಂದರು.

ಹೆಚ್​ಡಿಕೆ ಟಾರ್ಗೆಟ್​​: ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಪರ ಅಲೆಯನ್ನು ಕಂಡು ಕಳೆದೊಂದು ವಾರದಿಂದ ಶಿವಕುಮಾರ್​ ಭಾಷೆ ಬದಲಾಯಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್​ನ 20-21 ಸೀಟುಗಳ ಗೆಲ್ಲುವ ಕನಸಿಗೆ ಬಿಜೆಪಿ- ಜೆಡಿಎಸ್​ ಮೈತ್ರಿ ಅಡ್ಡಿಯಾಗುತ್ತಿದೆ ಎಂದು ಅರಿತು ಅವರೀಗ ಕುಮಾರಸ್ವಾಮಿಯನ್ನು ಟಾರ್ಗೆಟ್​ ಮಾಡುತ್ತಿದ್ದಾರೆ.

ಸಿದ್ದರಾಮಯ್ಯನವರು ಎಂದಿಗೂ ಬೇರೆ ಸಮಾಜದ ನಾಯಕರ ಏಳಿಗೆ ಸಹಿಸುವುದಿಲ್ಲ. ಸಿಎಂ ಆಗಲು ಪರಮೇಶ್ವರ್ ಅಡ್ಡಿ ಆಗುತ್ತಾರೆ ಎಂದು ಅವರನ್ನೇ ಸೋಲಿಸಿದ್ದರು. ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಕರ್ನಾಟಕದಿಂದ ಖಾಲಿ ಮಾಡಿಸಿದರು. ಬಿಜೆಪಿಗೆ ಹೋಗುತ್ತೇನೆ ಎಂದು ಕಾಂಗ್ರೆಸ್ ಹೈಕಮಾಂಡ್​​ಗೆ ಬೆದರಿಸಿ ಚುನಾವಣೆಯ ಬಳಿಕ ಮುಖ್ಯಮಂತ್ರಿಯಾದರು ಎಂದು ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಸ್ವಾಮೀಜಿಯವರ ಫೋನ್ ಟ್ಯಾಪಿಂಗ್​ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಏಕೆ ಟ್ಯಾಪ್ ಮಾಡಿಸಲಿ? ನಾವು ಯಾವುದೇ ಫೋನ್ ಟ್ಯಾಪ್ ಮಾಡಿಸಿಲ್ಲ, ಅದು ನಮ್ಮ ಕೆಲಸ ಅಲ್ಲ. ಮೈತ್ರಿ ಸರ್ಕಾರ ಆರಂಭದಲ್ಲೇ ರಮೇಶ್​ ಜಾರಕಿಹೊಳಿ ಮತ್ತು ಶಿವಕುಮಾರ್​​ ನಡುವೆ ಕಲಹ ಯಾಕೆ ಆರಂಭ ಆಯಿತು ಎಂದು ಹೇಳಲಿ ಎಂದು ಸವಾಲು ಹಾಕಿದರು.

1996 ರಲ್ಲಿ ಚುನಾವಣೆಗೆ ನಿಂತಾಗ ಪಿಜಿಆರ್​​​ ಸಿಂಧ್ಯಾ ಅವರಿಗೆ ನಾನು ಕಪಾಳಮೋಕ್ಷ ಮಾಡಿದ್ದೆ ಎಂದು ಸುಳ್ಳುಸುದ್ದಿ ಹಬ್ಬಿಸಿದರು. ಇತರೆ ರಾಜಕಾರಣ ಡಿಕೆ ಶಿವಕುಮಾರ್​ಗೆ ರಕ್ತಗತವಾಗಿ ಬಂದಿದೆ. ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಮೊನ್ನೆ ಹೆಚ್​ಡಿಕೆ ನನ್ನ ಒಳ್ಳೆಯ ಸ್ನೇಹಿತ ಎಂದು ಹೇಳಿದ್ದರು. ಅವರಿಗೆ ಧನ್ಯವಾದಗಳು. ಇನ್ನೂ ಸ್ವಲ್ಪ ದಿನ ನೋಡಿ ಇವೆಲ್ಲಾ ಮುಗಿದು ತಣ್ಣಗೆ ಆಗುತ್ತದೆ ಎಂದರು.

ಇದನ್ನೂ ಓದಿ: ಕುಮಾರಸ್ವಾಮಿ ಎಂಪಿ ಆಗೋದು ಅನುಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

Last Updated : Apr 17, 2024, 5:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.