ಅಲಿಗಢ(ಉತ್ತರ ಪ್ರದೇಶ): ಹತ್ರಾಸ್ ಸತ್ಸಂಗ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ 123 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಅಲಿಗಢದ ಪಿಲ್ಖಾನಾ ಗ್ರಾಮಕ್ಕೆ ಆಗಮಿಸಿ, ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
#WATCH | Hathras, UP: Congress MP and LoP in Lok Sabha, Rahul Gandhi speaks to the victims of the stampede that took place in Hathras on July 2 claiming the lives of 121 people. pic.twitter.com/pyk0TXBk0H
— ANI (@ANI) July 5, 2024
ಪಿಲ್ಖಾನಾ ಎಂಬಲ್ಲಿನ ಛೋಟಾಲಾಲ್ ಅವರ ಪತ್ನಿ ಮಂಜು, ಪುತ್ರ ಪಂಕಜ್, ಗ್ರಾಮದ ಪ್ರೇಮಾವತಿ, ಶಾಂತಿದೇವಿ ಎಂಬವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇವರ ಕುಟುಂಬ ಸದಸ್ಯರು ರಾಹುಲ್ ಗಾಂಧಿ ಜೊತೆ ತಮ್ಮ ಅಳಲು ತೋಡಿಕೊಂಡರು.
#WATCH | Hathras, UP: After meeting the victims of the stampede, Congress MP and LoP in Lok Sabha, Rahul Gandhi says " it is a sad incident. several people have died. i don't want to say this from a political prism but there have been deficiencies on the part of the administration… pic.twitter.com/n2CXvZztJx
— ANI (@ANI) July 5, 2024
ಇಲ್ಲಿಂದ ಹತ್ರಾಸ್ನ ನವಿಪುರ ಖುರ್ದ್ ವೈಭವ್ ನಗರದಲ್ಲಿರುವ ಗ್ರೀನ್ ಪಾರ್ಕ್‌ಗೆ ರಾಹುಲ್ ಗಾಂಧಿ ತೆರಳಲಿದರು. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮುನ್ನಿದೇವಿ ಮತ್ತು ಆಶಾದೇವಿ ಎಂಬ ಮಹಿಳೆಯರ ಕುಟುಂಬಗಳನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರು ನೆಲದ ಮೇಲೆ ಕುಳಿತಿದ್ದರು. ರಾಹುಲ್ ಗಾಂಧಿ ಅವರಿಗೆ ಕುಳಿತುಕೊಳ್ಳಲು ಸ್ಟೂಲ್ ಇಡಲಾಗಿತ್ತು. ಆದರೆ, ಸ್ಟೂಲ್ ತೆಗೆದು ಪಕ್ಕಕ್ಕಿಟ್ಟ ರಾಹುಲ್, ಕುಟುಂಬ ಸದಸ್ಯರೊಂದಿಗೆ ನೆಲದ ಮೇಲೆಯೇ ಕುಳಿತುಕೊಂಡು ಸಂತ್ರಸ್ತರ ನೋವಿಗೆ ಕಿವಿಯಾದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ: ಮೃತರ ಸಂಖ್ಯೆ 123ಕ್ಕೇರಿಕೆ, 6 ಸಂಘಟಕರ ಸೆರೆ; ರಾಹುಲ್ ಭೇಟಿ ಸಾಧ್ಯತೆ - Hathras Stampede