ETV Bharat / bharat

ರಾಮಮಂದಿರ ಉದ್ಘಾಟನೆ: ಹರಿಯಾಣದಲ್ಲಿ ಶಾಲೆಗಳಿಗೆ ಅರ್ಧದಿನ ರಜೆ, 7 ಜಿಲ್ಲೆಗಳಲ್ಲಿ ಹೈಅಲರ್ಟ್​ - ಪ್ರಾಣ ಪ್ರತಿಷ್ಠಾಪನೆ

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳು ಜನವರಿ 22 ರಂದು ರಜೆ ಘೋಷಿಸಿವೆ. ಅದರಂತೆ ಹರಿಯಾಣದಲ್ಲಿ ಶಾಲೆಗಳಿಗೆ ಅರ್ಧದಿನ ರಜೆ ನೀಡಲಾಗಿದೆ.

ಹರಿಯಾಣದಲ್ಲಿ ಶಾಲೆಗಳಿಗೆ ಅರ್ಧದಿನ ರಜೆ
ಹರಿಯಾಣದಲ್ಲಿ ಶಾಲೆಗಳಿಗೆ ಅರ್ಧದಿನ ರಜೆ
author img

By ETV Bharat Karnataka Team

Published : Jan 21, 2024, 5:00 PM IST

ಚಂಡೀಗಢ: ಅಯೋಧ್ಯೆಯಲ್ಲಿ ನಾಳೆ (ಜನವರಿ 22 ರಂದು) ಭವ್ಯ ರಾಮಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇಡೀ ದೇಶವೇ ದಿವ್ಯ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಹರಿಯಾಣದಲ್ಲಿ ಶಾಲೆಗಳಿಗೆ ಅರ್ಧದಿನ ರಜೆ ಘೋಷಿಸಲಾಗಿದೆ. ಜೊತೆಗೆ ಅಂದು ಶೂನ್ಯ ದಿನ ಇರಲಿದೆ ಎಂದು ಈಗಾಗಲೇ ಸರ್ಕಾರ ಹೇಳಿದೆ.

ಶಿಕ್ಷಣ ಇಲಾಖೆಯು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದು ರಾಜ್ಯದ ಶಾಲೆಗಳಿಗೆ ಅರ್ಧ ದಿನದ ರಜೆ ಘೋಷಿಸಿ, ಹೊಸ ಆದೇಶವನ್ನು ಹೊರಡಿಸಿದೆ. ಇದರ ಪ್ರಕಾರ, ಸರ್ಕಾರಿ ಶಾಲೆಗಳು ಮಧ್ಯಾಹ್ನ 2:30 ರ ವರೆಗೆ ಮುಚ್ಚಿರುತ್ತವೆ. ಆದರೆ, ಶಾಲಾ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಶಾಲೆಯಲ್ಲೇ ಇರಬೇಕು. ಮಕ್ಕಳು ಬಳಿಕ ಶಾಲೆಗೆ ಬರಬೇಕು ಎಂಬ ಆದೇಶದ ಪ್ರತಿಯನ್ನು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳಿಗೆ ರವಾನಿಸಲಾಗಿದೆ.

7 ಜಿಲ್ಲೆಗಳಲ್ಲಿ ತೀವ್ರ ನಿಗಾ: ನುಹ್​ನಲ್ಲಿ ಕಳೆದ ವರ್ಷ ಕೋಮುಗಲಭೆ ನಡೆದ ಹಿನ್ನೆಲೆಯಲ್ಲಿ ಜನವರಿ 22 ರ ಕಾರ್ಯಕ್ರಮಕ್ಕೆ ರಾಜ್ಯದ 7 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನುಹ್, ಗುರುಗ್ರಾಮ್, ಫರಿದಾಬಾದ್, ಪಲ್ವಾಲ್, ಝಜ್ಜರ್, ಯಮುನಾನಗರ ಮತ್ತು ಜಿಂದ್ ಪ್ರದೇಶಗಳು ಸೂಕ್ಷ್ಮ ವಲಯಗಳೆಂದು ಪೊಲೀಸರು ಗುರುತಿಸಿದ್ದಾರೆ. ವಿಶೇಷವಾಗಿ ದೇವಸ್ಥಾನ, ಮಸೀದಿ ಮತ್ತು ಇತರ ಧಾರ್ಮಿಕ ಸ್ಥಳಗಳ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರ: 500 ವರ್ಷಗಳ ಕಾಯುವಿಕೆಯು ನಾಳೆ ಸಾಕಾರಗೊಳ್ಳಲಿದ್ದು, ಈ ಐತಿಹಾಸಿಕ ದಿನವನ್ನು ಸ್ಮರಣೀಯವಾಗಿಸಲು ರಾಜ್ಯ ಸರ್ಕಾರ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​), ವಿಶ್ವ ಹಿಂದೂ ಪರಿಷತ್ (ವಿಹೆಚ್​ಪಿ), ಇತರ ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿವೆ. ರಾಜ್ಯದಲ್ಲಿರುವ 15 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನ ನೇರಪ್ರಸಾರ ಮಾಡಲಾಗುತ್ತಿದೆ.

ಶಾಲೆಗಳಲ್ಲಿ ಸ್ವಚ್ಛತೆ, ರಾಮನ ಜೀವನಚರಿತ್ರೆಯ ಬಗ್ಗೆ ಅರಿವು: ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಸೂಚಿಸಲಾಗಿದೆ. ಶಾಲಾ ಆವರಣ, ತರಗತಿಯ ಕೊಠಡಿಗಳು ಮತ್ತು ಮೇಲ್ಛಾವಣಿಗಳನ್ನು ಸ್ವಚ್ಛಗೊಳಿಸುವ ಜೊತೆಗೆ, ಶಾಲೆ ಆರಂಭವಾದಾಗ ನಡೆಸುವ ಪ್ರಾರ್ಥನಾ ಸಭೆಯಲ್ಲಿ ಶ್ರೀರಾಮನ ಜೀವನದ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲೂ ಸರ್ಕಾರ ಸೂಚಿಸಿದೆ. ಇದೆಲ್ಲವನ್ನೂ ವಿಡಿಯೋ ಮಾಡುವಂತೆಯೂ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಶ್ರೀರಾಮನ ನೇತ್ರಗಳು ಕಾಣಿಸುವ ವಿಗ್ರಹದ ಚಿತ್ರವು ನಿಜವಾದುದ್ದಲ್ಲ: ಅಯೋಧ್ಯೆ ಪ್ರಧಾನ ಅರ್ಚಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.