ETV Bharat / bharat

ಗೀತ ರಚನೆಕಾರ ಗುಲ್ಜಾರ್, ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ - ಜ್ಞಾನಪೀಠ ಪ್ರಶಸ್ತಿ

ಉರ್ದು ಕವಿ-ಗೀತರಚನೆಕಾರ ಗುಲ್ಜಾರ್ ಮತ್ತು ಸಂಸ್ಕೃತ ಸಾಹಿತಿ ಜಗದ್ಗುರು ರಾಮಭದ್ರಾಚಾರ್ಯ ಅವರನ್ನು 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Urdu poet lyricist Gulzar  Sanskrit scholar Rambhadracharya  Jnanpith Award  ಜ್ಞಾನಪೀಠ ಪ್ರಶಸ್ತಿ ಘೋಷಣೆ  ಸಾಹಿತಿಗಳಾದ ಗುಲ್ಜಾರ್ ರಾಮಭದ್ರಾಚಾರ್ಯ
ಉರ್ದು ಕವಿ ಗುಲ್ಜಾರ್, ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯರಿಗೆ ಜ್ಞಾನಪೀಠ
author img

By PTI

Published : Feb 17, 2024, 5:15 PM IST

Updated : Feb 17, 2024, 5:45 PM IST

ನವದೆಹಲಿ: 58ನೇ ಜ್ಞಾನಪೀಠ ಪ್ರಶಸ್ತಿಗೆ ಖ್ಯಾತ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರನ್ನು ಹೆಸರಿಸಲಾಗಿದೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ.

ಗುಲ್ಜಾರ್ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಈ ಯುಗದ ಅತ್ಯುತ್ತಮ ಉರ್ದು ಕವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಈ ಹಿಂದೆ 2002 ರಲ್ಲಿ ಉರ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2004 ರಲ್ಲಿ ಪದ್ಮಭೂಷಣ ಮತ್ತು ಅವರ ಕೃತಿಗಳಿಗಾಗಿ ಕನಿಷ್ಠ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಹೆಸರಾಂತ ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ ಮತ್ತು 100ಕ್ಕೂ ಹೆಚ್ಚು ಪುಸ್ತಕಗಳ ಬರಹಗಾರರಾಗಿದ್ದಾರೆ.

ಸಂಸ್ಕೃತ ಸಾಹಿತಿ ಜಗದ್ಗುರು ರಾಮಭದ್ರಾಚಾರ್ಯ ಮತ್ತು ಪ್ರಸಿದ್ಧ ಉರ್ದು ಸಾಹಿತಿ ಶ್ರೀ ಗುಲ್ಜಾರ್ ಅವರು (2023ಕ್ಕೆ) ಪ್ರಶಸ್ತಿಗೆ ಪಾತ್ರ ಆಯ್ಕೆ ಆಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಪ್ರಕಟಿಸಿದೆ. ಗೋವಾದ ಬರಹಗಾರ ದಾಮೋದರ್ ಮೌಜೊ ಅವರು 2022 ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದರು.

ಓದಿ: 89ನೇ ವಯಸ್ಸಿನಲ್ಲಿ ಪಿಎಚ್​ಡಿ ಪಡೆದ ಹಿರಿಯಜ್ಜ: ಯುವಕರಿಗೆ ಮಾದರಿಯಾದ ಅಜ್ಜನ ಸಾಧನೆ

Last Updated : Feb 17, 2024, 5:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.