ಹೈದರಾಬಾದ್: ಆಂಧ್ರಪ್ರದೇಶ ರಾಜಧಾನಿ ಅಮರಾವತಿಯಲ್ಲಿ ವಿಧಾನಸಭ, ಹೈಕೋರ್ಟ್, ಸೆಕ್ರಟಿರಿಯೇಟ್ ಮತ್ತು ಪ್ರಮುಖ ಇಲಾಖೆಗಳ ಕಚೇರಿಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನಗರದಲ್ಲಿ ಆಡಳಿತಾತ್ಮಕ ಯೋಜನೆ ಜೊತೆಗೆ ಕೆಲವು ವಿಶೇಷ ಕಟ್ಟಡ ನಿರ್ಮಾಣವೂ ಒಳಗೊಳ್ಳಲಿದೆ. 2018ರಲ್ಲಿಯೇ ಲಂಡನ್ ಮೂಲದ ನಾರ್ಮನ್ ಫೋಸ್ಟರ್ ಮತ್ತು ಪಾರ್ಟನರ್ ನಗರ ವಿನ್ಯಾಸ ಸಿದ್ದಪಡಿಸಿದ್ದು, ಇದೀಗ ಈ ರಾಜಧಾನಿ ನಿರ್ಮಾಣಕ್ಕೆ ವೇಗ ನೀಡಲು ಸರ್ಕಾರ ನಿರ್ಧರಿಸಿದೆ. ರಾಜಧಾನಿಯಲ್ಲಿ ಕೆಲವು ಐಕಾನಿಕ್ ಕಟ್ಟಡ ನಿರ್ಮಾಣ ಕುರಿತು ಉನ್ನತ ಮಟ್ಟದ ಚರ್ಚೆಗಳು ಕೂಡ ಸಾಗಿದೆ.
ಆರು ವರ್ಷಗಳಿಂದ ಹಿಂದೆ ಸಿದ್ಧವಾಗಿದ್ದ ರೂಪುರೇಷೆ: ಆರು ವರ್ಷದ ಹಿಂದೆ ರೂಪಿಸಲಾಗಿದ್ದ ಯೋಜನೆಯನ್ನೇ ಅಳವಡಿಸುವುದಾ ಅಥವಾ ಅದರಲ್ಲಿ ಯಾವುದಾದರೂ ಕೆಲವು ಬದಲಾವಣೆ ನಡೆಸುವುದಾ ಎಂಬ ನಿಟ್ಟಿನಲ್ಲಿ ಕುರಿತು ಚರ್ಚೆ ನಡೆಸಲಾಗಿದೆ. ಈ ವೇಳೆ ಹೊರಗಿನ ಆಕಾರದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆದರೆ, ಒಳಗೆ ಅಗತ್ಯವಿದ್ದಲ್ಲಿ ಕೆಲವು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.
ಹೊರಗಿನ ವಿನ್ಯಾಸದಲ್ಲಿ ಬದಲಾವಣೆ ಮಾಡಿದಲ್ಲಿ, ಮತ್ತೆ ಒಂದು ವರ್ಷ ನಷ್ಟವಾಗಲಿದೆ ಎಂದು ಸರ್ಕಾರ ಚಿಂತಿಸಿದೆ. ಇದಕ್ಕಿಂತ ಹೆಚ್ಚಾಗಿ, ಹೈಕೋರ್ಟ್ ಮತ್ತು ಸೆಕ್ರೆಟಿರಿಯೇಟ್ ಟವರ್ಗಳ ಅಡಿಪಾಯದ ನಿರ್ಮಾಣ ಈಗಾಗಲೇ ಮುಗಿದಿದೆ. ಇದೀಗ ಇದರ ಬದಲಾವಣೆ ಮಾಡಿದಲ್ಲಿ ಅದರ ಆಕಾರ ಸರಿಯಾಗುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.
ಹೈಕೋರ್ಟ್ ಕಟ್ಟಡದ ಬಗ್ಗೆ ಚರ್ಚಿಸಲು ನ್ಯಾಯಮೂರ್ತಿಗಳ ಭೇಟಿ: ಸಿಆರ್ಡಿಎ ಅಧಿಕಾರಿಗಳು ಇತ್ತೀಚಿಗೆ ಹೈಕೋರ್ಟ್ ಕಟ್ಟಡದ ನಿರ್ಮಾಣ ಸಂಬಂಧ ನ್ಯಾಯಮೂರ್ತಿಗಳನ್ನು ಭೇಟಿಯಾಗಿದ್ದು, ಅವರ ದೃಷ್ಟಿಕೋನದ ಕುರಿತು ಮಾಹಿತಿ ಪಡೆದಿದ್ದಾರೆ. ಮತ್ತೊಂದೆಡೆ ಸಿಆರ್ಡಿಎ ಉಳಿದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಂಬಂಧ ಟೆಂಡರ್ ಕರೆಯಲಾಗಿದೆ.
ಲಂಡನ್ ಘಟಕದ ನಾರ್ಮನ್ ಪೋಸ್ಟರ್ ಪ್ರತಿನಿಧಿಗಳು ಕೂಡ ಈ ಬಿಡ್ನಲ್ಲಿ ಭಾಗಿಯಾಗಲಿದ್ದಾರೆ. ಸಿಆರ್ಡಿಎ ಅಧಿಕಾರಿಗಳು ಕೂಡ ಈ ಬಿಡ್ನಲ್ಲಿ ಭಾಗಿಯಾಗಲಿದ್ದಾರೆ. ಈ ಬಿಡ್ ತೆರೆಯಲಿದ್ದು, ಮುಂದಿನ ಮೂರರಿಂದ ನಾಲ್ಕು ದಿನದಲ್ಲಿ ಇದರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸಿಆರ್ಡಿಎ ಹೈಕೋರ್ಟ್ ಮತ್ತು ಸೆಕ್ರೆಟಿರಿಯೇಟ್ ಕಟ್ಟಡ ನಿರ್ಮಾಣ ಮಾಡಲು ಟೆಂಡರ್ಗೆ ಚೆನ್ನೈ ಐಐಟಿ ಪ್ರಮಾಣಿತ ತಜ್ಫರಿಗೆ ಕರೆ ನೀಡಲಾಗಿದೆ.
ಹಿಂದಿನ ಕಿರುಕುಳ ಮರೆತು ನಗರ ನಿರ್ಮಾಣಕ್ಕೆ ಮುಂದಾದ ನಾರ್ಮನ್ ಪೋಸ್ಟರ್: ಈ ಮೊದಲು ಯಾವುದೇ ಪ್ರತಿಷ್ಟಿತ ಕಂಪನಿಗಳು ಅಮರಾವತಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರಲಿಲ್ಲ. ಇದೀಗ ನಾರ್ಮನ್ ಫೋಸ್ಟರ್ ಮತ್ತು ಸಹಭಾಗಿಗಳು ಮತ್ತೆ ಅಮರಾವತಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಲು ಆಸಕ್ತಿ ತೋರಿದ್ದಾರೆ. ಜಗನ್ ಸರ್ಕಾರದಲ್ಲಿ ವಿದೇಶಿ ಕಂಪನಿಗಳು ಕೊಂಚ ಕಹಿ ಘಟನೆಯ್ನು ಅನುಭವಿಸಿದವು. ಜಗನ್ ಸರ್ಕಾರದಲ್ಲಿ ನಾರ್ಮನ್ ಫೋಸ್ಟರ್ ಕಂಪನಿ ಕಿರುಕುಳ ಅನುಭವಿಸಿದರೂ ಇದೀಗ ಮತ್ತೆ ನಗರ ನಿರ್ಮಾಣಕ್ಕೆ ಸಕಾರಾತ್ಮಕ ಧೋರಣೆಯಿಂದ ಆಗಮಿಸಿದೆ. ಇತ್ತೀಚಿಗೆ ನಡೆದ ಪೂರ್ವ ಬಿಡ್ ಸಭೆಯಲ್ಲಿ ಇದು ಬಹಿರಂಗವಾಗಿತ್ತು. ಸಿಆರ್ಡಿಎ ಅಧಿಕಾರಿಗಳ ಪ್ರಕಾರ, ಕಂಪನಿ ಬಿಡ್ ಮಾಡಿ ಟೆಂಡರ್ ಅಂತಿಮವಾಗಲು ಸ್ವಲ್ಪ ಸಮಯಬೇಕಾಗಿದೆ.