ಚೆನ್ನೈ (ತಮಿಳುನಾಡು): ಇಲ್ಲಿನ ಕಲೈನರ್ ಸೆಂಟನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಮೇಲೆ ವ್ಯಕ್ತಿಯೊಬ್ಬ ಏಳು ಬಾರಿ ಚಾಕುವಿನಿಂದ ಇರಿದಿರುವ ಭೀಕರ ಘಟನೆ ನಡೆದಿದೆ.
ಕ್ಯಾನ್ಸರ್ ಪೀಡಿತ ತಾಯಿಯ ಚಿಕಿತ್ಸೆಯ ಕುರಿತು ವ್ಯಕ್ತಿ ಮತ್ತು ವೈದ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ರೋಗಿಯ ಮಗ ವೈದ್ಯರೊಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣಕ್ಕೆ ಅಲ್ಲಿನ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಇರಿತದಿಂದ ವೈದ್ಯರ ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಸದ್ಯ ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
VERY IMPORTANT:
— Dr Jaison Philip. M.S., MCh (@Jasonphilip8) November 13, 2024
😡😡😡😡😡😡😡😡😡
*Doctors and paramedical attention please!!!
A medical oncologist at Kalaignar Centenary Superspeciality hospital, Guindy was brutally stabbed at neck today Nov 13 at 10.30am. His condition is very critical. Pray for him, please!
ಈ ಘಟನೆಯನ್ನು ಸರ್ಕಾರಿ ವೈದ್ಯರು ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನೆಗೆ ಮುಂದಾದರು. ಬಳಿಕ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಈ ಕುರಿತು ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ವಿಘ್ನೇಶ್ ದಾಳಿ ಮಾಡಿದ ಆರೋಪಿ. ಈತನ ತಾಯಿ ಕ್ಯಾನ್ಸರ್ ಪೀಡಿತರಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ವೈದ್ಯರನ್ನು ಬಾಲಾಜಿ ಎಂದು ಗುರುತಿಸಲಾಗಿದ್ದು, ಇವರು ಸರ್ಕಾರಿ ಆಸ್ಪತ್ರೆಯಲ್ಲಿ ಆಂಕಾಲಾಜಿಸ್ಟ್ ಮತ್ತು ಮೆಡಿಕಲ್ ಆಂಕಾಲಾಜಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಒಪಿಡಿ ಬಂದ್ ಮಾಡಿ ಹಲ್ಲೆ: ವೈದ್ಯರ ಜೊತೆಗೆ ತಾಯಿ ಆರೋಗ್ಯದ ಕುರಿತು ಮಾತನಾಡುವುದಾಗಿ ಹೊರ ರೋಗಿ ವಿಭಾಗದ ಕೋಣೆಗೆ ಬಂದ ವಿಘ್ನೇಶ್ ಬಾಗಿಲು ಬಂದ್ ಮಾಡಿ, ವೈದ್ಯರ ಕುತ್ತಿಗೆ, ಕಿವಿ, ಎದೆ, ಹಣೆ ಮತ್ತು ಬೆನ್ನು, ತಲೆ ಹಾಗೂ ಹೊಟ್ಟೆ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ. ಇದರಿಂದ ವೈದ್ಯರಿಗೆ ತೀವ್ರ ರಕ್ತ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ ಆರೋಪಿಯು ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
கிண்டி கலைஞர் நூற்றாண்டு உயர்சிறப்பு மருத்துவமனையில் பணிபுரியும் மருத்துவர் திரு. பாலாஜி அவர்களை நோயாளியின் குடும்ப உறுப்பினர் ஒருவர் கத்தியால் குத்திய சம்பவம் அதிர்ச்சியளிக்கிறது.
— M.K.Stalin (@mkstalin) November 13, 2024
இக்கொடுஞ்செயலில் ஈடுபட்ட நபர் உடனடியாகக் கைது செய்யப்பட்டுள்ளார். மருத்துவர் திரு. பாலாஜி…
ಘಟನೆಗೆ ಸಿಎಂ ಖಂಡನೆ: ಈ ದಾಳಿಯನ್ನು ಎಕ್ಸ್ ಪೋಸ್ಟ್ ಮೂಲಕ ಖಂಡಿಸಿರುವ ಸಿಎಂ ಎಂಕೆ ಸ್ಟಾಲಿನ್, ಡಾ ಬಾಲಾಜಿ ಮೇಲಿನ ದಾಳಿ ಆಘಾತಕಾರಿಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ತನಿಖೆಗೆ ಸೂಚಿಸಲಾಗಿದೆ. ಜನರಿಗೆ ಆರೋಗ್ಯ ಸೇವೆ ಒದಗಿಸಲು ವೈದ್ಯರು ಅವಿರತವಾಗಿ ಹೋರಾಡುತ್ತಿದ್ದಾರೆ. ಅವರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕಿ ಮತ್ತು ತೆಲಂಗಾಣ ಮಾಜಿ ರಾಜ್ಯಪಾಲರಾದ ಡಾ ತಮಿಳಿಸೈ ಸೌಂದರರಾಜನ್ ಕೂಡ ಘಟನೆಯನ್ನು ಖಂಡಿಸಿದ್ದಾರೆ. ವೈದ್ಯರ ಸುರಕ್ಷತೆಗೆ ತಮಿಳುನಾಡು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ದಾಳಿ ಬೆನ್ನಲ್ಲೇ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ.
ಆರೋಪಿ ತಾಯಿ ಕ್ಯಾನ್ಸರ್ಗೆ ತುತ್ತಾಗಿದ್ದು, ಅವರ ಪರಿಸ್ಥಿತಿ ಹದಗೆಟ್ಟಿತು. ಅವರನ್ನು ವೈದ್ಯರ ಸಲಹೆ ಮೇರೆಗೆ ಡಿಸ್ಚಾರ್ಜ್ ಕೂಡ ಮಾಡಲಾಗಿತ್ತು. ಈ ವಿಚಾರ ಕುರಿತು ವಿಘ್ನೇಶ್ ವೈದ್ಯರ ಜೊತೆ ಮಾತನಾಡಲು ತೆರಳಿದ್ದ. ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಪರಿಚಯದ ಹಿನ್ನೆಲೆ ಆತ ವೈದ್ಯರ ಕೋಣೆಗೆ ಹೋಗಿದ್ದ. ಈ ವೇಳೆ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆಯು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆ ಪ್ರಶ್ನೆ ಮೂಡಿಸಿದ್ದು, ಅವರ ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಡಾಕ್ಟರ್ ಅಸೋಸಿಯೇಷನ್ನಿಂದಲೂ ಖಂಡನೆ: ಸರ್ಕಾರಿ ವೈದ್ಯರ ಮೆಲೆ ಹಲ್ಲೆ ನಡೆಸಿದ ಈ ದಾಳಿಯನ್ನು ತಮಿಳುನಾಡು ಸರ್ಕಾರಿ ವೈದ್ಯರ ಅಸೋಸಿಯೇಷನ್ (ಟಿಎನ್ಜಿಡಿಎ) ತೀವ್ರವಾಗಿ ಖಂಡಿಸಿದೆ. ಘಟನೆ ಬೆನ್ನಲ್ಲೇ ಆಸ್ಪತ್ರೆಯ ತುರ್ತು ವಿಭಾಗ ಹೊರತಾಗಿ ಸರ್ಜರಿ ಮತ್ತು ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಕೇರಳ ರಾಜಕೀಯದಲ್ಲಿ ವಿವಾದ ಎಬ್ಬಿಸಿದ ಸಿಪಿಐ(ಎಂ) ನಾಯಕನ ಆತ್ಮಚರಿತ್ರೆ