ETV Bharat / bharat

ಎಎಪಿ ಸಂಸದನ ವಿರುದ್ಧ 100 ಕೋಟಿ ಮಾನಹಾನಿ ಪ್ರಕರಣ ದಾಖಲಿಸಿದ ಗೋವಾ ಸಿಎಂ ಸಾವಂತ್​ ಪತ್ನಿ - GOA CM WIFE FILED DEFAMATION SUIT

ಸುಲಕ್ಷಣಾ ಸಾವಂತ್​​ ಗೋವಾದ ಬಿಚೋಲಿಮ್‌ನಲ್ಲಿರುವ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗೀಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Goa CM Wife Sulakshana Sawant filed a Rs 100 crore defamation suit against AAP MP Sanjay Singh
ಗೋವಾ ಸಿಎಂ ಸಾವಂತ್​ ಮತ್ತವರ ಪತ್ನಿ (ಐಎಎನ್​ಎಸ್​)
author img

By IANS

Published : Dec 18, 2024, 10:18 AM IST

ನವದೆಹಲಿ: ಉದ್ಯೋಗಕ್ಕಾಗಿ ನಗದು ಪ್ರಕರಣದಲ್ಲಿ ಯಾವುದೇ ಆಧಾರವಿಲ್ಲದೇ, ತಮ್ಮ ಹೆಸರನ್ನು ಉಲ್ಲೇಖಿಸಿದ ಕಾರಣಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸವಾಂತ್​ ಪತ್ನಿ ಸುಲಕ್ಷಣಾ ಸವಾಂತ್​ ಎಎಪಿ ಸಂಸದ ಸಂಜಯ್​ ಸಿಂಗ್​ ವಿರುದ್ಧ 100 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಗೋವಾದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಎಎಪಿ ನಾಯಕ ಸಂಜಯ್​ ಸಿಂಗ್ ಮಾತನಾಡುವಾಗ​, ರಾಜ್ಯದಲ್ಲಿ ನಡೆದ ಉದ್ಯೋಗಕ್ಕಾಗಿ ನಗದು ಪ್ರಕರಣದ ಭ್ರಷ್ಟಚಾರದಲ್ಲಿ ಸುಲಕ್ಷಣಾ ಸಾವಂತ್​ ಕೂಡ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಸುಲಕ್ಷಣಾ ಸಾವಂತ್​​ ಗೋವಾದ ಬಿಚೋಲಿಮ್‌ನಲ್ಲಿರುವ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗೀಯ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಂಜಯ್​ ಸಿಂಗ್​ ಅವರ ಹೇಳಿಕೆ ರಾಷ್ಟ್ರ ಮತ್ತು ಪ್ರಾದೇಶಿಕ ಸುದ್ದಿ ಸಂಸ್ಥೆ ಸೇರಿದಂತೆ ಯೂಟ್ಯೂಬ್​ನಂತಹ ಸಾಮಾಜಿಕ ಜಾಲತಾಣದಲ್ಲಿ ಹಲವು ಬಾರಿ ಪ್ರಸಾರವಾಗಿದ್ದು, ಗಮನಾರ್ಹ ವೀಕ್ಷಣೆ ಕಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯಾವುದೇ ಸಾಕ್ಷಿ ಆಧಾರವಿಲ್ಲದೇ ಸುಳ್ಳು ಆರೋಪ ಮಾಡುವ ಮೂಲಕ ಸುಲಕ್ಷಣಾ ಸಾವಂತ್ ಅವರ ಸಮಗ್ರತೆ ಮತ್ತು ಸಾರ್ವಜನಿಕ ಪ್ರತಿಷ್ಟೆಗೆ ಹಾನಿ ಮಾಡಲಾಗಿದೆ. ಸಿಂಗ್​ ಅವರ ಹೇಳಿಕೆಗಳು ಹಲವು ಬಾರಿ ಪ್ರಸಾರಗೊಂಡಿದ್ದವು ಎಂದು ಕೂಡ ದೂರಿನಲ್ಲಿ ತಿಳಿಸಿಲಾಗಿದೆ.

ವಿಡಿಯೋ, ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ: ಈ ರೀತಿ ಸುಳ್ಳು ಆರೋಪ ಮಾಡಿರುವ ಹಿನ್ನೆಲೆ ಮಾನನಷ್ಟ ಪ್ರಕರಣ ದಾಖಲಿಸಿರುವ ಸುಲಕ್ಷಣಾ ಸಾವಂತ್​ 100 ಕೋಟಿ ರೂ. ಪರಿಹಾರ ಕೋರಿದ್ದು, ಸಂಜಯ್​ ಸಿಂಗ್​ ಮತ್ತು ಅವರ ಸ್ನೇಹಿತರ ಅವರ ವಿರುದ್ಧ ನೀಡಿರುವ ಹೇಳಿಕೆ ಮತ್ತು ವಿಡಿಯೋ ಹಾಗೂ ಲೇಖನಗಳು ಎಲ್ಲಿಯೂ ಪ್ರಸಾರವಾಗದಂತೆ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆ ಉದ್ದೇಶ ಎಂದರೆ ಸಿಂಗ್​​ ಹಾಗೂ ಅವರ ಸಹಚರರಿಂದ ಮತ್ತಷ್ಟು ಮಾನಹಾನಿಕರ ಹೇಳಿಕೆ ತಡೆಯುವುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಸಾರ್ವಜನಿಕವಾಗಿ ಸಿಂಗ್​ ಕ್ಷಮಾಪಣೆ ಕೋರಬೇಕು ಎಂದು ಸಾವಂತ್​ ಒತ್ತಾಯಿಸಿದ್ದಾರೆ. ಹಾಗೇ ಮೊಕದ್ದಮೆ ವೆಚ್ಚ ಮತ್ತು ಸೂಕ್ತ ಪರಿಹಾರವನ್ನು ನೀಡುವಂತೆ ನ್ಯಾಯಾಲಯದ ಮುಂದೆ ಕೋರಿದ್ದಾರೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಕುಟುಂಬ ಉದ್ಯೋಗ ಹಗರಣದಲ್ಲಿ ಭಾಗಿಯಾಗಿದೆ ಎಂದು ಆಗಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಈ ಉದ್ಯೋಗ ಲಂಚ ಹಗರಣ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿತ್ತು. (ಐಎಎನ್​ಎಸ್​)

ಇದನ್ನೂ ಓದಿ: ನಿವೃತ್ತ ಪೊಲೀಸ್ ಮನೆಯಲ್ಲಿ ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ 6 ಮಂದಿ ದಾರುಣ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.