ETV Bharat / bharat

ಹೆಣ್ಣುಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ: ಈ ಸಮಸ್ಯೆಗೆ ಕಾರಣ ಏನು? ಇಲ್ಲಿದೆ ಸ್ಪೆಷಲ್​ ರಿಪೋರ್ಟ್​​ - Girls Need Space to Play - GIRLS NEED SPACE TO PLAY

ಹುಡುಗಿಯರಿಗೆ ಬೇಕಾಗಿದೆ ಆಟದ ಮೈದಾನ; ಕ್ರೀಡೆಯಿಂದ ದೈಹಿಕ - ಮಾನಸಿಕ ಆರೋಗ್ಯಕ್ಕೆ ಬಲ, ಹುಡುಗಿಯರಿಗೆ ಇರುವ ಸಮಸ್ಯೆಗಳೇನು ಎಂಬ ಬಗ್ಗೆ ಈ ವರದಿಯಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

Girls Need Space to Play: Activists Call for Dedicated Playgrounds
ಆಟವಾಡುತ್ತಿರುವ ಹುಡುಗಿಯರು (ETV Bharat)
author img

By ETV Bharat Karnataka Team

Published : Sep 27, 2024, 3:58 PM IST

ಚೆನ್ನೈ: ಭಾನುವಾರ ಬಂತು ಎಂದರೆ ಮಕ್ಕಳಿಗೆ ಹಬ್ಬ. ಕಾರಣ ಅಂದು ಪಾಠ ಬಿಟ್ಟು ಆಟ ಆಡಬಹುದು ಎಂಬ ಖುಷಿ ಮಕ್ಕಳದ್ದು. ನೀವೇನಾದರೂ ಭಾನುವಾರ ಸಾರ್ವಜನಿಕ ಆಟದ ಮೈದಾನಗಳಿಗೆ ಭೇಟಿ ನೀಡಿದರೆ ಅಲ್ಲಿ ಹುಡುಗರ ದಂಡೇ ಇರುತ್ತೆ. ಕ್ರಿಕೆಟ್​ ಅಥವಾ ಫುಟ್ಬಾಲ್​, ಹೀಗೆ ತಮ್ಮಿಷ್ಟದ ಆಟ ಆಡುವತ್ತ ಮಗ್ನರಾಗಿರುತ್ತಾರೆ. ಅಲ್ಲಿ ಹುಡುಗಿರ ದಂಡು ಕಂಡು ಬರುವುದು ಅಪರೂಪ. ಫಿಟ್ನೆಸ್​ ಕುರಿತು ಜಾಗೃತಿ ಹೊರತಾಗಿಯೂ ಜಿಮ್​ ಬಿಟ್ಟು ಆಟದ ಮೈದಾನದಲ್ಲಿ ಹುಡುಗಿಯರು ಆಟವಾಡುವುದನ್ನು ನೋಡಲು ಸಾಧ್ಯವಿಲ್ಲ.

ಜಿಮ್​ಗಳಲ್ಲಿ ಯುವತಿಯರಿಗೆ ಅವಕಾಶ ಕಲ್ಪಿಸಿದರೂ ಅಲ್ಲಿನ ಸೌಲಭ್ಯ ಬಳಕೆಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ನಾವು ತುಂಬಾ ಮುಂದುವರೆದಿದ್ದೇವೆ ಎನ್ನುವ ಸಮಾಜ ಕೂಡ ಈ ಹಿಂದಿನ ಪೀಳಿಗೆಗೆ ಲಭ್ಯವಿದ್ದ ಆಟಗಳು ಇಂದಿನ ಬಾಲಕಿಯರಿಗೆ ಲಭ್ಯವಾಗುತ್ತಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಈ ಕುರಿತು ಈಟಿವಿ ಭಾರತದ ಜತೆಗೆ ಮಾತನಾಡಿರುವ ಮಕ್ಕಳ ಕಲ್ಯಾಣ ಕಾರ್ಯಕರ್ತರಾದ ದೆವನೆಯನ್, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಲಭ್ಯವಾಗುವ ಮೈದಾನಗಳಲ್ಲಿ ಶೇ 99.9ರಷ್ಟು ಜನರು ಹುಡುಗರೇ ತುಂಬಿದ್ದು, ಅಲ್ಲಿ ಹುಡುಗಿಯರಿಗೆ ಆಟವಾಡಲು ಸ್ಥಳವಿಲ್ಲ ಎಂದಿದ್ದಾರೆ. ಭಾರತದ ಶೇ 50ರಷ್ಟು ಮಹಿಳೆಯರು ರಕ್ತಹೀನತೆ ಮತ್ತು ಅಪೌಷ್ಟಿಕಾತೆಗೆ ಒಳಗಾಗಲು ಕಾರಣ ಸರಿಯಾಗಿ ವ್ಯಾಯಾಮ ಮಾಡದಿರುವುದು. ಮಕ್ಕಳು ಹುಟ್ಟಿದ ಸಮಯದಲ್ಲಿ ತಾಯಂದಿರುವ ಸರಿಯಾದ ಆಹಾರದ ಜೊತೆಗೆ ವ್ಯಾಯಾಮ ಮಾಡದೇ ಇರುವುದು ಪ್ರಮುಖವಾಗಿ ಹೆಣ್ಣು ಮಕ್ಕಳು ಮತ್ತು ತಾಯಂದಿರಲ್ಲಿ ಅಪೌಷ್ಟಿಕತೆ ಕಾಡಲು ಕಾರಣವಾಗಿದೆ ಅಂತಾರೆ ದೆವನೆಯನ್​.

கபடி விளையாடும் பெண் குழந்தைகள்
ಆಟವಾಡುತ್ತಿರುವ ಬಾಲಕಿಯರು- ಕೃಪೆ ಈ ಟಿವಿ ಭಾರತ

ಕ್ರೀಡೆಯಲ್ಲಿ ಯುವತಿಯರ ಪಾಲ್ಗೊಳ್ಳುವಿಕೆ ಪ್ರಮಾಣ ಕಡಿಮೆ: ಕಳೆದ 15 ವರ್ಷದಲ್ಲಿ ಹುಡುಗಿಯರು ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವಿಕೆ ಕ್ಷೀಣಿಸುತ್ತಿದೆ. ಶಾಲೆ ಅಥವಾ ಮೈದಾನದಲ್ಲಿ ಹುಡುಗರು ಭಾಗಿಯಾಗುವಂತೆ ಹುಡುಗಿಯರು ಭಾಗಿಯಾಗುತ್ತಿಲ್ಲ. ರಾಜ್ಯದಲ್ಲಿ ದೈಹಿಕ ಮಹಿಳಾ ಶಿಕ್ಷಕಿಯರ ಸಂಖ್ಯೆ ಕೂಡ ಬೆರಳು ಎಣಿಕೆಯಷ್ಟಿದೆ. ಹುಡುಗಿಯರ ದೈಹಿಕ ಚಟುವಟಿಕೆ ಪಾಲ್ಗೊಳ್ಳುದಿರುವಿಕೆಯು ಮಧ್ಯಮ ವರ್ಗದ ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ ಎನ್ನುತ್ತಿವೆ ಅಂಕಿ- ಅಂಶಗಳು.

ಹದಿವಯಸ್ಸಿನ ಸಮಸ್ಯೆ: ಹದಿವಯಸ್ಸಿನ ಹುಡುಗಿಯರ ಮೇಲೆ ಇಂದು ಸ್ಮಾರ್ಟ್​ ಫೋನ್​ಗಳು ಹೆಚ್ಚಿನ ಪ್ರಭಾವ ಬೀರುತ್ತಿವೆ. ಕಳೆದ 10 ವರ್ಷದಿಂದ ದೈಹಿಕ ಸಮಸ್ಯೆ, ಆತ್ಮಹತ್ಯೆ, ಮತ್ತು ಹದಿವಯಸ್ಸಿನ ಗರ್ಭವಸ್ಥೆಯಂತಹ ಸಮಸ್ಯೆಗೆ ಅವರು ಒಳಗಾಗಿದ್ದು, ಕ್ರೀಡೆ ಕೂಡ ಇದರೊಂದಿಗೆ ಸಂಬಂಧ ಹೊಂದಿದೆ ಎನ್ನುತ್ತಾರೆ ಮಕ್ಕಳ ಕಲ್ಯಾಣ ಕಾರ್ಯಕರ್ತರಾದ ದೆವನೆಯನ್.

ಮಹಿಳೆಯರು ಕ್ರೀಡಾ ಮೈದಾನ: ಲ್ಯಾನ್ಸೆಟ್​ನಲ್ಲಿ ಪ್ರಕಟವಾದ ವರದಿಯಂತೆ ಶೇ 57ರಷ್ಟು ಮಹಿಳೆಯರು ದೈಹಿಕವಾಗಿ ಸಕ್ರಿಯವಾಗಿಲ್ಲ. ಪೋಷಕರು ಕೂಡ ಮಕ್ಕಳೊಂದಿಗೆ ಸಮಯ ಕಳೆಯಬೇಕು. ದಿನವೊಂದಕ್ಕೆ ಕನಿಷ್ಠ 2 ಗಂಟೆ ಆಟದಲ್ಲಿ ಪಾಲ್ಗೊಳ್ಳುವುದು ಅಷ್ಟೇ ಮುಖ್ಯ. ಈ ರೀತಿ ಹುಡುಗಿಯರಿಗೆ ಎಲ್ಲೆಡೆ ಮುಕ್ತವಾಗಿ ಮತ್ತು ಸುರಕ್ಷಿತ ಆಟದ ವಾತಾವರಣವನ್ನು ತಮಿಳುನಾಡು ಸರ್ಕಾರ ಸೃಷ್ಟಿಸಿದೆ ಎಂದ ದೆವನೆಯನ್​​, ಮಹಿಳೆಯರಿಗಾಗಿ ಜಿಮ್​ ಸೃಷ್ಟಿ ಉಪಕ್ರಮಕ್ಕೆ ಚೆನ್ನೈ ಕಾರ್ಪೊರೇಷನ್​ ಶ್ಲಾಘಿಸಿದ್ದಾರೆ.

கோ-கோ விளையாடும் பெண் குழந்தைகள்
ಖೋ- ಖೋ ಆಟದಲ್ಲಿ ಬಾಲಕಿಯರು - ( ಈ ಟಿವಿ ಭಾರತ)

ಆಟದ ಮೈದಾನಕ್ಕೆ ಬೇಡಿಕೆ: ನಮ್ಮ ವರದಿಗಾರರ ತಂಡ ಈ ಸಂಬಂಧ ಹುಡುಗಿಯರ ಅಭಿಪ್ರಾಯ ಪಡೆಯುಲು ಚೆನ್ನೈನ ಹತ್ತಿರದ ಸೆಮ್ಮಂಚೆರಿಗೆ ಭೇಟಿ ನೀಡಿತ್ತು, ಈ ವೇಳೆ ಮಾತನಾಡಿದ ಇಲ್ಲಿನ ಬಾಲಕಿಯರು, ನಮಗೆ ಇಲ್ಲಿ ಆಟವಾಡಲು ಸಾಕಷ್ಟ ಸ್ಥಳವಿಲ್ಲ, ಒಳಾಂಗಣದಲ್ಲಿಯೇ ಕಬಡ್ಡಿ, ಖೋ-ಖೋ, ಚಿಲಂಬಂ ಆಡುತ್ತಿದ್ದೇವೆ. ಸ್ಥಳದ ಕೊರತೆಯಿಂದ ಸಾಕಷ್ಟು ಜನ ಜಂಗುಳಿಯಾಗುತ್ತದೆ, ನಾವು ಸಾಮಾನ್ಯ ಆಟದ ಮೈದಾನಕ್ಕೆ ಹೋಗಿ ಆಟವಾಡೋಣ ಎಂದರೆ ಅಲ್ಲಿ, ಪುರುಷರು ನಮಗೆ ಅವಕಾಶ ನೀಡುವುದಿಲ್ಲ. ಈ ಕಾರಣದಿಂದ ನಮಗೆ ಪ್ರತ್ಯೇಕವಾದ ಆಟದ ಜಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸಾಕಷ್ಟು ಆಟದ ಮೈದಾನವಿದ್ದರೂ, ಅಲ್ಲಿ ಕೆಲವು ಬಾರಿ ಕೆಲವರು ನಮ್ಮನ್ನು ಕೆಟ್ಟದಾಗಿ ನೋಡುತ್ತಾರೆ. ಅದು ಕಿರಿಕಿರಿ ಮೂಡಿಸುತ್ತದೆ. ಮನೆಯಲ್ಲೂ ಕೂಡ ಈ ವೇಳೆ ಆಟವಾಡಲು ಬಿಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಮಗೆ ಪ್ರತ್ಯೇಕವಾದ ಮೈದಾನ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಮಕ್ಕಳು.

ಚೆನ್ನೈನ ವೈಎಂಸಿಎ ದೈಹಿಕ ಶಿಕ್ಷಣ ಕಾಲೇಜಿನ ಪ್ರಿನ್ಸಿಪಾಲ್​ ಜಾನ್ಸನ್​ ಪ್ರೇಮ್​ ಕುಮಾರ್ ಮಾತನಾಡಿ, ಹುಡುಗಿಯರಿಗೆ ಕ್ರೀಡೆ ಎಂಬುದು ಪ್ರಮುಖವಾಗಿದೆ. ಆಟ ಆಡುವುದರಿಂದ ಹುಡುಗಿಯರು ದೈಹಿಕ ಮತ್ತು ಮಾನಸಿಕ ಶಕ್ತಿ ಹೊಂದುತ್ತಾರೆ. ದೇಹಕ್ಕೆ ಉತ್ತಮ ವ್ಯಾಯಾಮ ಮತ್ತು ಸವಾಲಿಗೆ ಒಳಗಾದಗಲೇ ಮಾನಸಿಕ ಶಕ್ತಿಯು ಅಭಿವೃದ್ಧಿಯಾಗುವುದು. ಲ್ಯಾನ್ಸೆಟ್​ ವರದಿಯಂತೆ, ಶೇ 57ರಷ್ಟು ಯುವತಿಯರು ಮನೆಯಲ್ಲಿದ್ದು ಅವರು 23 ಮತ್ತು 25 ವರ್ಷಕ್ಕೆಲ್ಲ ಮದುವೆಯಾಗುತ್ತಾರೆ.

பந்து விளையாடும் பெண் குழந்தைகள்
ಚೆಂಡಿನ ಆಟದಲ್ಲಿ ಬಾಲಕಿಯರು - ಈ ಟಿವಿ ಭಾರತ

ನಗರ ಪ್ರದೇಶದಲ್ಲಿರುವ ಜನರು ಬಹುತೇಕ ಸಮಯ ಮನೆಯೊಳಗೆ ಇದ್ದು, ಅವರು ಹೊರಗಿನ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುವುದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಂತಹ ಮಕ್ಕಳಿಗೆ ಕ್ರೀಡೆಯಲ್ಲಿ ಭಾಗಿಯಾಗುವಂತೆ ಪ್ರೋತ್ಸಾಯಿಸಬೇಕಿದೆ

ಹುಡುಗ ಮತ್ತು ಹುಡುಗಿ ಎಂಬ ಲಿಂಗಬೇಧವಿಲ್ಲದೇ ಪೋಷಕರು ಕೂಡ ಮಕ್ಕಳಿಗೆ ವ್ಯಾಯಾಮಕ್ಕೆ ಒಳಪಡಿಸಬೇಕಿದೆ. ಭವಿಷ್ಯದಲ್ಲಿ ಜೀವನಶೈಲಿ ರೋಗಗಳು ಹೆಚ್ಚಲಿದ್ದು, ಅಂತಹ ಪರಿಸರದಿಂದ ಮಕ್ಕಳನ್ನು ರಕ್ಷಿಸಲು ಇರುವ ಏಕೈಕ ಪರಿಹಾರ ಎಂದರೆ ಕ್ರೀಡೆ ಎಂಬುದನ್ನು ಪೋಷಕರು ಮರೆಯಬಾರದು.

ಇದನ್ನೂ ಓದಿ: ಕೇರಳದಲ್ಲಿ ಎಟಿಎಂ ದರೋಡೆ; ತಮಿಳುನಾಡಿನಲ್ಲಿ ಸಿನಿಮೀಯ ರೀತಿಯಲ್ಲಿ ಟ್ರಕ್​ ಚೇಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.