ಕೊಚ್ಚಿ (ಕೇರಳ): ಆನೆಯೊಂದು ಎಳೆದು ಹಾಕಿದ ತಾಳೆ ಮರದ ಗರಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿ, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಚ್ಚಿಯ ಕೋತಮಂಗಲ ಬಳಿ ಶನಿವಾರ ನಡೆದಿದೆ.
ತ್ರಿಶೂರ್ ಮೂಲದ ಆ್ಯನ್ ಮೇರಿ ಸಿ ವಿ (21) ತನ್ನ ಕಾಲೇಜು ಸಹಪಾಠಿ ಅಲ್ತಾಫ್ ಅಬೂಬಕರ್ (21) ಜೊತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ನಗರಂಪಾರಾ ಅರಣ್ಯ ಕಚೇರಿ ಬಳಿಯ ಚೆಂಬಂಕುಝಿ ಎಂಬಲ್ಲಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಆನೆಯೊಂದು ತಾಳೆ ಮರದ ಗರಿಯನ್ನು ಎಳೆದು ಹಾಕಿದ್ದು, ಅದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಇವರ ಮೇಲೆ ಬಿದ್ದಿದೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಇಬ್ಬರನ್ನು ಕೋತಮಂಗಲದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಯುವತಿ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆನೇಕಲ್: ಆಹಾರ ಅರಸಿ ನಾಡಿನತ್ತ ಕಾಡಾನೆಗಳ ಹಿಂಡು, ರೈತರ ಆತಂಕ