ETV Bharat / bharat

ಜಗನ್​ ಕಟ್ಟಿಸಿದ್ದ 'ಸಿಎಂ ಕ್ಯಾಂಪ್​ ಕಚೇರಿ'ಯಲ್ಲಿ ಕನ್ನಡಿಯಿಂದ ಹಿಡಿದು ಬಾತ್ ಟಬ್‌​ವರೆಗೂ ವಿದೇಶಿ ವಸ್ತುಗಳೇ! ₹452 ಕೋಟಿ ವೆಚ್ಚ! - YS Jagan Luxurious Camp Office - YS JAGAN LUXURIOUS CAMP OFFICE

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಡಲ ತೀರದ ರುಷಿಕೊಂಡ ಪರ್ವತದಲ್ಲಿ ಜಗನ್ ​ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರ ನಿರ್ಮಿಸಿದ್ದ ಐಷಾರಾಮಿ ಬಂಗಲೆ ಎಂಥವರನ್ನೂ ಬೆರುಗುಗೊಳಿಸುವಂತಿದೆ.!

Luxurious RUSHIKONDA PALACE
ಜಗನ್​ ಕಟ್ಟಿಸಿದ್ದ 'ಸಿಎಂ ಕ್ಯಾಂಪ್​ ಕಚೇರಿ'ಯ ಐಷಾರಾಮಿ ಬಂಗಲೆ (ETV Bharat)
author img

By ETV Bharat Karnataka Team

Published : Jun 19, 2024, 4:57 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ): ವೈಆರ್​​ಎಸ್​ ಕಾಂಗ್ರೆಸ್ ಪಕ್ಷದ ಅಧ್ಯಕ್ಷ, ಮಾಜಿ ಸಿಎಂ ಜಗನ್ ​ಮೋಹನ್​ ರೆಡ್ಡಿ ತಮ್ಮ ಅಧಿಕಾರಾವಧಿಯಲ್ಲಿ ವಿಶಾಖಪಟ್ಟಣಂನ ಕಡಲ ತೀರದ ಸಮೀಪದಲ್ಲಿರುವ ರುಷಿಕೊಂಡ ಪರ್ವತದಲ್ಲಿ ನಿರ್ಮಿಸಿದ 'ಸಿಎಂ ಕ್ಯಾಂಪ್​ ಕಚೇರಿ' ಕಟ್ಟಡ ಆಂಧ್ರ ಪ್ರದೇಶದಲ್ಲೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಐಷಾರಾಮಿ ಬಂಗಲೆ ಕಟ್ಟಿಸಿದೆ. ಸ್ನಾನಗೃಹ ಸೇರಿದಂತೆ ಕಟ್ಟಡದ ಅಗತ್ಯ ವಸ್ತುಗಳನ್ನು ವಿದೇಶಗಳಿಂದ ತರಿಸಿ ಬಳಸಿರುವುದು ಬಯಲಾಗಿದೆ.

ಕಟ್ಟಡದ ಹೊರಗಿನ ದೃಶ್ಯ
ಕಟ್ಟಡದ ಹೊರಗಿನ ದೃಶ್ಯ (ETV Bharat)

ರುಷಿಕೊಂಡ ಬೆಟ್ಟದ ಮೇಲೆ ಜಗನ್​ ಸರ್ಕಾರದಲ್ಲಿ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ಅಂದಾಜು 452 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 7 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದು 'ಸಿಎಂ ಕ್ಯಾಂಪ್​ ಕಚೇರಿ' ಮತ್ತು ಎಲ್ಲವೂ ಸರ್ಕಾರಿ ಆಸ್ತಿ ಎಂದೇ ಹಿಂದಿನ ಸರ್ಕಾರ ಹೇಳಿತ್ತು. ಈ ಕಟ್ಟಡಗಳ ಪೈಕಿ 'ವಿಜಯನಗರ' ಬ್ಲಾಕ್ ಹೆಸರಲ್ಲಿ ಮೂರು ಕಟ್ಟಡಗಳನ್ನು ಸಿಎಂ ಕುಟುಂಬದ ಅಗತ್ಯಗಳಿಗಾಗಿ ಬಂಗಲೆ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಅಲಂಕಾರಿಕ ವಿದ್ಯುತ್​ ದೀಪಗಳು
ಅಲಂಕಾರಿಕ ವಿದ್ಯುತ್​ ದೀಪಗಳು (ETV Bharat)

430 ಚದರಡಿಯಲ್ಲಿ ಸ್ನಾನಗೃಹ!: ಆದರೆ, ಇದೀಗ ಜಗನ್​ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಕಟ್ಟಡಗಳಲ್ಲಿ ಪ್ರತಿಯೊಂದು ವಸ್ತುಗಳೂ ಕೂಡ ಬೆರಗುಗೊಳಿಸುವ ವಿನ್ಯಾಸ, ಪೀಠೋಪಕರಣಗಳು ಹೊಂದಿರುವುದು ಬೆಳಕಿಗೆ ಬಂದಿದೆ. ಐಷಾರಾಮಿಯಾದ 12 ಮಲಗುವ ಕೋಣೆಗಳು, ಸ್ನಾನಗೃಹಗಳು ಇದ್ದು, ಪ್ರತಿ ಸ್ನಾನಗೃಹದ ವಿಸ್ತೀರ್ಣ 430 ಚದರ ಅಡಿ ಇದೆ ಎಂದು ಅಂದಾಜಿಸಲಾಗಿದೆ.

ಐಷಾರಾಮಿ ಮಿಟಿಂಗ್ ಹಾಲ್​
ಐಷಾರಾಮಿ ಮಿಟಿಂಗ್ ಹಾಲ್​ (ETV Bharat)

ಇತ್ತೀಚೆಗೆ ಟಿಡಿಪಿ ಶಾಸಕ ಘಂಟ ಶ್ರೀನಿವಾಸ್ ರಾವ್, ರುಷಿಕೊಂಡದ ಬಂಗಲೆಗೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ''ಜಗನ್​ ಸರ್ಕಾರವು ಜನತೆಯ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದೆ. ಕೇವಲ ಒಳಾಂಗಣದ ಅಲಂಕಾರಗಳು ಮತ್ತು ಪೀಠೋಪಕರಣಗಳಿಗೆ 33 ಕೋಟಿ ರೂಪಾಯಿ ವ್ಯಯಿಸಲಾಗಿದೆ'' ಎಂದು ದೂರಿದ್ದಾರೆ. ಅಲ್ಲದೇ, ''ರಸ್ತೆಗಳು, ಕಾಲುವೆ ಮತ್ತು ಉದ್ಯಾನವನಗಳು ಸೇರಿದಂತೆ ಕಟ್ಟಡಗಳ ಸುತ್ತಲಿನ ಸೌಂದರ್ಯೀಕರಣಕ್ಕೆ ಅಂದಾಜು 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ'' ಎಂದೂ ರಾವ್ ಆರೋಪಿಸಿದ್ದಾರೆ.

ಬಂಗಲೆಯ  ಒಳಾಂಗಣ
ಬಂಗಲೆಯ ಒಳಾಂಗಣ (ETV Bharat)

ಕನ್ನಡಿಯಿಂದ ಬಾತ್ ಟಬ್, ಕಮೋಡ್​ವರೆಗೂ ವಿದೇಶಿ ವಸ್ತುಗಳೇ!: ಸಿಎಂ ಕುಟುಂಬಕ್ಕಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಹಾಸಿಗೆಯಿಂದ ಹಿಡಿದು ಕನ್ನಡಿ, ಬಾತ್​ ಟಬ್, ಶೌಚಾಲಯದ ಕಮೋಡ್‌ಗಳು, ಕಿಟಕಿಗೆ ಬಳಸುವ ಕರ್ಟನ್ ಸೇರಿ ಎಲ್ಲವನ್ನೂ ವಿದೇಶದಿಂದಲೇ ತರಲಾಗಿದೆ. ಶೌಚಾಲಯಗಳಲ್ಲಿ ಬಳಸುವ ವಾಲ್ ಶೀಟ್​ಗಳೂ ಸಹ ವಿದೇಶದ್ದು ಎಂದು ತಿಳಿದು ಬಂದಿದೆ.

ಬಂಗಲೆಯ ಪೀಠೋಪಕರಣ
ಬಂಗಲೆಯ ಪೀಠೋಪಕರಣ (ETV Bharat)

ಸಿಎಂ ಮಲಗುವ ಕೊಠಡಿಗಳಲ್ಲಿ ನೆಲಹಾಸಿಗಾಗಿ ಯುರೋಪ್​ನ ವಿಶೇಷ ಗ್ರಾನೈಟ್ ಬಳಸಲಾಗಿದೆ. ಅದರ ಮೇಲೆ ಅಮೃತಶಿಲೆಯಿಂದ ವಿಶೇಷ ವಿನ್ಯಾಸವನ್ನು ಕೆತ್ತಲಾಗಿದೆ. ಬೆಡ್​, ಕುರ್ಚಿ, ಮೇಜುಗಳನ್ನೂ ವಿದೇಶದಿಂದ ತರಿಸಲಾಗಿದೆ. ಈ ಕೋಣೆಗೆ ಬಯೋಮೆಟ್ರಿಕ್ ವ್ಯವಸ್ಥೆಯೂ ಇದೆ. ಜೊತೆ ಈ ಕೊಠಡಿಯು ಐಷಾರಾಮಿ ಸ್ಪಾ ಮತ್ತು ಶೌಚಾಲಯಗಳನ್ನು ಹೊಂದಿದೆ. ಶೌಚಗೃಹದಲ್ಲಿರುವ ಕಮೋಡ್ ಜಪಾನ್​ನದ್ದು. ಇದರ ಮೌಲ್ಯ 15 ಲಕ್ಷ ರೂ. ಹಾಗೂ ಸಿಎಂ ಕೊಠಡಿ ಹೊರತುಪಡಿಸಿ ಇತರ ಕಟ್ಟಡಗಳಲ್ಲಿ ಅಳವಡಿಸಿರುವ ಪ್ರತಿ ಕಮೋಡ್ ಬೆಲೆ 88 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಸಿಎಂ ಬೆಡ್​ರೂಮ್
ಸಿಎಂ ಬೆಡ್​ರೂಮ್ (ETV Bharat)

ಐದು ದೇಶಗಳ ಗ್ರಾನೈಟ್: ಇಷ್ಟೇ ಅಲ್ಲ, ಈ ಕಟ್ಟಡಗಳಿಗೆ ಬಳಸಲಾದ ಗ್ರಾನೈಟ್ ಮತ್ತು ಮಾರ್ಬಲ್‌ಗಳನ್ನು ವಿಯೆಟ್ನಾಂ, ಸ್ಪೇನ್, ಇಟಲಿ, ನಾರ್ವೆ ಮತ್ತು ಬ್ರೆಜಿಲ್‌ ಸೇರಿ ಐದು ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಬೆಡ್‌ರೂಮ್‌ಗಳು ಮತ್ತು ಮೀಟಿಂಗ್ ಹಾಲ್‌ಗಳು ಪ್ರಕಾಶಮಾನವಾಗಿ ಹೊಳೆಯುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಬಳಸಲಾದ ಅಲಂಕಾರಿಕ ವಿದ್ಯುತ್​ ದೀಪಗಳ ಬೆಲೆ ತಲಾ 2.5 ಲಕ್ಷ ರೂ. ಇರಬಹುದು ಎಂದು ಹೇಳಲಾಗಿದೆ.

ರುಷಿಕೊಂಡ ಬಂಗಲೆಯಲ್ಲಿನ  ಬಾತ್​ ಟಬ್
ರುಷಿಕೊಂಡ ಬಂಗಲೆಯಲ್ಲಿನ ಬಾತ್​ ಟಬ್ (ETV Bharat)

ಹೊರಂಗಣದಲ್ಲಿ ವಿದೇಶದಿಂದ ತಂದ ಸಾವಿರಾರು ಗಿಡಗಳ ಬಳಸಿ ತೋಟಗಾರಿಕೆ ಮಾಡಲಾಗಿದೆ. ಮನೆಯ ಹೊರಗಿನ ಗೋಡೆಗಳ ಸುತ್ತಮುತ್ತಲೂ ಅಲಂಕಾರಿಕ ವಿದ್ಯುದ್ದೀಪಗಳನ್ನು ಬಳಸಲಾಗಿದೆ. ದೆಹಲಿಯಿಂದ ತರಿಸಲಾಗಿರುವ ಈ ಪ್ರತಿ ಬಲ್ಬ್ ಬೆಲೆ ಅಂದಾಜು 60 ಸಾವಿರ ರೂ. ಇರಬಹುದು. ಇವುಗಳ ಹೊರತಾಗಿ ಸಿಂಗಾರ, ಅಲಂಕಾರಿಕ ದೀಪಗಳ ಜೊತೆಗೆ ಮನೆಯೊಳಗೆ ಸುಮಾರು 4 ಸಾವಿರ ದೀಪಗಳನ್ನು ಬಳಸಲಾಗಿದೆ. ಹತ್ತಾರು ಫ್ಯಾನ್​ಗಳನ್ನೂ ವಿದೇಶಗಳಿಂದ ತರಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿನ ಮಾಜಿ ಸಿಎಂ ಜಗನ್​​ ನಿವಾಸದ ಶೆಡ್​ ನೆಲಸಮ: ಆಂಧ್ರದಲ್ಲೂ ಕ್ರಮಕ್ಕೆ ಜನರ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.