ETV Bharat / bharat

ಗಡ್ಚಿರೋಲಿ ಎನ್​ಕೌಂಟರ್​: ನಾಲ್ವರು ನಕ್ಸಲರ ಹತ್ಯೆ

ಮಹಾರಾಷ್ಟ್ರದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರು ಹತರಾಗಿದ್ದಾರೆ.

ಮಹಾರಾಷ್ಟ್ರ: ಗಡ್ಚಿರೋಲಿಯಲ್ಲಿ ಪೊಲೀಸರಿಂದ ಎನ್​ಕೌಂಟರ್​: ನಾಲ್ವರ ನಕ್ಸಲೀಯರ ಸಾವು

author img

By ETV Bharat Karnataka Team

Published : Mar 19, 2024, 11:08 AM IST

ಗಡ್ಚಿರೋಲಿ: ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಇಂದು ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲೀಯರು ಹತರಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಲು ನೆರೆ ರಾಜ್ಯ ತೆಲಂಗಾಣದಿಂದ ಮಾವೋವಾದಿಗಳು ಮಹಾರಾಷ್ಟ್ರ ಪ್ರವೇಶಿಸಿರುವುದಾಗಿ ಸೋಮವಾರ ಮಧ್ಯಾಹ್ನ ಪೊಲೀಸರಿಗೆ ಮಾಹಿತಿ ಅಭಿಸಿತ್ತು. ಕೂಡಲೇ ಸಿ-60 ಕಮಾಂಡೋಗಳು ಮತ್ತು ಕೇಂದ್ರ ಮೀಸಲು ಪೊಲೀಸ್​ ಪಡೆ ಜಂಟಿ ಶೋಧ ಕಾರ್ಯ ನಡೆಸಿವೆ. ಇಂದು ಬೆಳಗ್ಗೆ ರೆಪನ್‌ಪಲ್ಲಿ ಸಮೀಪದ ಕೋಲಮಾರ್ಕ ಪರ್ವತಗಳಲ್ಲಿ ಶೋಧ ನಡೆಸುತ್ತಿದ್ದಾಗ ಪೊಲೀಸರ ಮೇಲೆ ಅಲ್ಲೇ ಅಡಗಿದ್ದ ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ದಾಳಿ ನಡೆಸಿವೆ.

ಮೃತ ಮಾವೋವಾದಿ
ಮೃತ ಮಾವೋವಾದಿ

ಈ ಗುಂಡಿನ ಕಾಳಗದಲ್ಲಿ ಪೊಲೀಸರ ಗುಂಡೇಟಿಗೆ ನಾಲ್ವರು ನಕ್ಸಲೀಯರು ಸಾವನ್ನಪ್ಪಿದ್ದಾರೆ. ಚಕಮಕಿ ನಿಂತ ಬಳಿಕ ಶೋಧ ನಡೆಸಿದ ಪೊಲೀಸರಿಗೆ ನಾಲ್ವರ ಮೃತದೇಹಗಳು ಸಿಕ್ಕಿವೆ. ಮೃತ ನಕ್ಸಲರಿಂದ ಎಕೆ 47 ಬಂದೂಕು, ಕಾರ್ಬೈನ್, ಎರಡು ನಾಡ ಪಿಸ್ತೂಲ್ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಮಾವೋವಾದಿ
ಮೃತ ಮಾವೋವಾದಿ

ಮೃತಪಟ್ಟ ನಕ್ಸಲರಾದ ದೇವಕಂ ವರ್ಗೀಸ್, ಮಂಗಿ ಇಂದ್ರವೆಳ್ಳಿ, ಕುರ್ಸಂಗ್ ರಾಜು ಮತ್ತು ಕುಡಿಮೆಟ್ಟ ವೆಂಕಟೇಶ್ ವಿವಿಧ ನಕ್ಸಲ್​ ಸಂಘಗಳಲ್ಲಿ ಕಾರ್ಯದರ್ಶಿ ಹಾಗು ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಈ ನಾಲ್ವರು ನಕ್ಸಲೀಯರ ಸುಳಿವು ನೀಡಿದವರಿಗೆ 36 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಇನ್ನೂ ಕೆಲವು ನಕ್ಸಲೀಯರು ಸ್ಥಳದಲ್ಲಿರುವ ಶಂಕೆ ವ್ಯಕ್ತವಾಗಿದ್ದು ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನೂ ಓದಿ: ಮಂಡ್ಯ: ಚೆಕ್ ಪೋಸ್ಟ್​ನಲ್ಲಿ ಪರಿಶೀಲನೆ ವೇಳೆ ಕಾರಲ್ಲಿ ಅಂದಾಜು 1 ಕೋಟಿ ಹಣ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.