ನವದೆಹಲಿ: ದೆಹಲಿ ಮೆಟ್ರೋ ಕಾಮಗಾರಿಗೆ ತೀವ್ರ ವಿರೋಧದ ನಡುವೆಯೂ ಹಣ ಬಿಡುಗಡೆ ಮಾಡಿ ಧೈರ್ಯ ಮೆರೆದಿದ್ದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಭಾನುವಾರ ಮೆಟ್ರೋದಲ್ಲಿ ಪ್ರಯಾಣಿಸಿದರು. ಕರ್ನಾಟಕ ರಾಜ್ಯಸಭಾ ಸದಸ್ಯರೂ ಆಗಿರುವ ಅವರು, ದೆಹಲಿ ಮೆಟ್ರೋ ರೈಲು ನಿಗಮದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
#WATCH | Delhi: Former PM and JD(S) national president HD Deve Gowda says, " ...today i travelled in the delhi metro to see how this facility is helping my brothers and sisters here...i want to express my sincere thanks to the administration for accompanying me..." https://t.co/LQagToL3oe pic.twitter.com/gbCAo0kf00
— ANI (@ANI) August 4, 2024
ಮೆಟ್ರೋದಲ್ಲಿ ಸಂಚರಿಸಿದ ಚಿತ್ರಗಳನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಬೇಕೆಂಬ ನನ್ನ ಆಸೆ ಈಡೇರಿದೆ. ಇದು ಹಲವು ವರ್ಷಗಳಿಂದ ಮೂಡಿದ್ದ ಬಯಕೆಯಾಗಿತ್ತು. ಅದು ಇಂದು ಈಡೇರಿದೆ. 1996 ರಲ್ಲಿ ನಾನು ಪ್ರಧಾನ ಮಂತ್ರಿಯಾಗಿದ್ದಾಗ ಸಚಿವ ಸಂಪುಟ ಮತ್ತು ರಾಜಕೀಯ ಪ್ರತಿರೋಧದ ನಡುವೆಯೂ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದೆ. ಇದರಿಂದ ದೆಹಲಿ ಮೆಟ್ರೋ ಜಾಲವೂ ಬೃಹತ್ತಾಗಿ ಬೆಳೆದುಕೊಂಡಿದೆ. ದೇವರು ನನಗೆ ಇದನ್ನು ಮಾಡಲು ಧೈರ್ಯ ನೀಡಿದ್ದಕ್ಕೆ ಸಂತೋಷವಾಗಿದೆ. ಇದು ಜನರಿಗೆ ನೆರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
It was my wish to travel by #DelhiMetro for years now. It was fulfilled today. I had given financial closure to the project in 1996 as PM amidst resistance inside my cabinet and outside. I am glad God gave me the courage to go ahead. It has helped people. @OfficialDMRC
— H D Devegowda (@H_D_Devegowda) August 4, 2024
1/2 pic.twitter.com/BMxZQ6QvzP
"ಲೋಕ್ ಕಲ್ಯಾಣ್ ಮಾರ್ಗ್ ನಿಲ್ದಾಣದಲ್ಲಿ ರೈಲು ಹತ್ತಿ ಒಂದಷ್ಟು ದೂರ ಸಾಗಿದೆ. ಪ್ರಯಾಣ ಆಹ್ಲಾದಕರ ಅನುಭವ ನೀಡಿತು. ನನ್ನ ಜೊತೆಗೆ ಡಿಎಂಆರ್‌ಸಿ ನಿರ್ದೇಶಕ ಮನೋಜ್ ಸಿಂಘಾಲ್ ಮತ್ತು ಇತರ ದೆಹಲಿ ಮೆಟ್ರೋ ಸಿಬ್ಬಂದಿ ಇದ್ದರು. ಎಲ್ಲ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು" ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ.
ದೆಹಲಿ ನಿವಾಸಿಗಳಿಗೆ ಮೆಟ್ರೋ ಜೀವನಾಡಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 24, 2002 ರಂದು ದೆಹಲಿ ಮೆಟ್ರೋದ ಮೊದಲ ಕಾರಿಡಾರ್ ಅನ್ನು ಉದ್ಘಾಟಿಸಿದ್ದರು. ವಾಜಪೇಯಿ ಅವರು ದೆಹಲಿ ಮೆಟ್ರೋದ ಮೊದಲ ಪ್ರಯಾಣಿಕರಾಗಿದ್ದರು.
I boarded the train at the Lok Kalyan Marg Station and went round a good distance. It was a pleasant experience. @OfficialDMRC Director of Infrastructure Shri Manoj Singhal and other #DelhiMetro staff were very kind to me. My sincere thanks to them and my security staff.
— H D Devegowda (@H_D_Devegowda) August 4, 2024
2/2 pic.twitter.com/CiS2xevYiU
ಮ್ಯೂಸಿಯಂಗೆ ಭೇಟಿ: ಇದಕ್ಕೂ ಮುನ್ನ ಆಗಸ್ಟ್ 3ರ ಶನಿವಾರದಂದು ಮಾಜಿ ಪ್ರಧಾನಿ ದೇವೇಗೌಡರು, ರಾಷ್ಟ್ರ ರಾಜಧಾನಿಯಲ್ಲಿರುವ ಪ್ರಧಾನ ಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು. ಇದರ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಭಾರತಕ್ಕೆ ತಮ್ಮದೇ ಆದ ಅನನ್ಯ ಕೊಡುಗೆ ನೀಡಿರುವ ಎಲ್ಲಾ ಪ್ರಧಾನಿಗಳ ಮಾಹಿತಿಯನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಕ್ರಮಗಳ ಬಗ್ಗೆ ದೇವೇಗೌಡರು ಸಂತಸ ವ್ಯಕ್ತಪಡಿಸಿದರು.
ಪ್ರಧಾನಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದ ಬಗ್ಗೆ ಮಾಜಿ ಪ್ರಧಾನಿ, ಅಲ್ಲಿ ಕಳೆದ ಕ್ಷಣಗಳ ಬಗ್ಗೆ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ವಸ್ತು ಸಂಗ್ರಹಾಲಯದ ಅಧಿಕಾರಿಗಳು ಮಾಜಿ ಪ್ರಧಾನಿಗಳನ್ನು ಬರ ಮಾಡಿಕೊಂಡು, ಅಲ್ಲಿನ ಎಲ್ಲಾ ಪ್ರಧಾನಿಗಳ ಕುರಿತಾದ ಮಾಹಿತಿಯನ್ನು ನೀಡಿದರು.
ಇದನ್ನೂ ಓದಿ: ದೆಹಲಿ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯಕ್ಕೆ ಹೆಚ್.ಡಿ.ದೇವೇಗೌಡ ಭೇಟಿ - Prime Ministers Museum