ETV Bharat / bharat

ತ್ರಿವಳಿ ಕೊಲೆ ಅಪರಾಧಿಗಳಿಗೆ ಜೀವಾವಧಿ ಸಜೆ: ಇದು ಭಾರತೀಯ ನ್ಯಾಯ ಸಂಹಿತೆ​ಯಡಿ ಮೊದಲ ಶಿಕ್ಷೆ - Bharatiya Nyaya Sanhita

ತ್ರಿವಳಿ ಕೊಲೆ ಪ್ರಕರಣದಲ್ಲಿ ರೋಶನ್​ ಆಲಿಯಾಸ್​ ಸುಧಾಂಶು ಕುಮಾರ್​ ಮತ್ತು ಅಂಕಿತ್​​ ಎಂಬಿಬ್ಬರು ಅಪರಾಧಿಗಳಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌​ ಕೋರ್ಟ್‌ ದಂಡಸಮೇತ ಜೀವಾವಧಿ ಶಿಕ್ಷೆ ವಿಧಿಸಿತು.

first conviction under the Bharatiya Nyaya Sanhita
ತ್ರಿವಳಿ ಕೊಲೆ ಅಪರಾಧಿಗಳು (ETV Bharat)
author img

By ETV Bharat Karnataka Team

Published : Sep 6, 2024, 12:10 PM IST

ಚಪ್ರಾ(ಬಿಹಾರ್​): ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯಡಿ (BNS) ಇಬ್ಬರು ಕೊಲೆ ಅಪರಾಧಿಗಳಿಗೆ ಜೀವವಾಧಿ ಶಿಕ್ಷೆ ವಿಧಿಸಿ ಬಿಹಾರದ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ರೋಶನ್​ ಆಲಿಯಾಸ್​ ಸುಧಾಂಶು ಕುಮಾರ್​ ಮತ್ತು ಅಂಕಿತ್​ ಎಂಬಿಬ್ಬರಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯ 25 ಸಾವಿರ ರೂಪಾಯಿ ದಂಡಸಮೇತ ಶಿಕ್ಷೆ ವಿಧಿಸಿದೆ.

ರಸುಲ್​ಪುರ್​ ಪೊಲೀಸ್​ ಠಾಣೆಯಲ್ಲಿ ದಾಖಲಾದ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಎರಡು ಸಾಕ್ಷಿಗಳ ಹೇಳಿಕೆ ಹಾಗು ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಧೀಶ ಪುನೀತ್​ ಕುಮಾರ್​ ಗಾರ್ಗ್ ಅವರು​​ ತೀರ್ಪು ನೀಡಿದರು.

ಬಿಎನ್​ಎಸ್​ ಅಡಿ ಇದು ಮೊದಲ ಶಿಕ್ಷೆ: ಜುಲೈನಲ್ಲಿ ಜಾರಿಗೆ ಬಂದಿರುವ ಹೊಸ ಅಪರಾಧ ಕಾನೂನು ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್)​ ಅಡಿಯಲ್ಲಿ ನೀಡಲಾದ ಮೊದಲ ಶಿಕ್ಷೆ ಇದಾಗಿದೆ. ಈ ಪ್ರಕರಣದಲ್ಲಿ ಕೋರ್ಟ್‌ 48 ದಿನಗಳಲ್ಲೇ ವಿಚಾರಣೆ ಮುಗಿಸಿರುವುದು ವಿಶೇಷವಾಗಿದೆ.

ತ್ರಿವಳಿ ಕೊಲೆ ಪ್ರಕರಣ: ಜುಲೈ 17ರಂದು ಸರಣ್​ ಜಿಲ್ಲೆಯ ರಸುಲ್ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯ ಧನದಿಹ್​ ಗ್ರಾಮದ ತಾರಕೇಶ್ವರ್​ ಸಿಂಗ್​ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿ ಮೇಲೆ ಮಲಗಿದ್ದ ಕುಟುಂಬದ ಎಲ್ಲ ಸದಸ್ಯರನ್ನು ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದರು. ಘಟನೆಯಲ್ಲಿ ತಾರಕೇಶ್ವರ್​ ಸಿಂಗ್​ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದರು. ಪತ್ನಿ ಶೋಭಾ ದೇವಿ, ಮತ್ತೊಬ್ಬ ಮಗಳು ಸುಚಿಕಾ ಗಂಭೀರವಾಗಿ ಗಾಯಗೊಂಡಿದ್ದರು. ಬದುಕುಳಿದ ಸುಚಿಕಾ ಶೋಭಾ ದೇವಿ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ಪೊಲೀಸರು ಸುಧಾಂಶು ಮತ್ತು ಅಂಕಿತ್​​​ ವಿರುದ್ಧ ಪ್ರಕರಣ ದಾಖಲಿಸಿ, ಕೋರ್ಟ್​ ಮುಂದೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಸುಚಿಕಾ ಸೇರಿದಂತೆ 12 ಮಂದಿಯ ಹೇಳಿಕೆಯನ್ನು ಕೋರ್ಟ್​ನಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ: ಅತ್ತೆಯ ಮಗಳನ್ನು ರೇಪ್​​ ಮಾಡಿ ಕೊಲೆ: ತನಗೆ ಮರಣದಂಡನೆ ವಿಧಿಸಿ ಎಂದು ಕೋರ್ಟ್​ಗೆ ಕೋರಿದ ಆರೋಪಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.