ETV Bharat / bharat

ಚುನಾವಣಾ ಬಾಂಡ್ ವಿವಾದದ ನಡುವೆ ಚರ್ಚೆಗೆ ಗ್ರಾಸವಾದ ಉತ್ತರಾಖಂಡ ಕಾಂಗ್ರೆಸ್ ನಾಯಕರ ಆರ್ಥಿಕ ಬಿಕ್ಕಟ್ಟು! - Lok Sabha elections 2024

ಒಂದೆಡೆ ನೂರಾರು ಕೋಟಿ ರೂಪಾಯಿ ಮೌಲ್ಯದ ದೇಣಿಗೆ ಸಂಗ್ರಹ ಸುದ್ದಿ ದೇಶದಲ್ಲೇ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಉತ್ತರಾಖಂಡ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಗೂ ಮುನ್ನ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಆರ್ಥಿಕ ಮುಗ್ಗಟ್ಟು ಇದೇ ಮೊದಲೇನು ಅಲ್ಲ, ಪಕ್ಷ ಈ ಹಿಂದೆಯೂ ಹಣದ ಕೊರತೆ ಎದುರಿಸಿತ್ತು. ಆದರೆ, ಈ ಪ್ರಮಾಣದಲ್ಲಿ ಸುದ್ದಿಯಾಗಲಿಲ್ಲ. ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಅಭ್ಯರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ಈ ಬಿಕ್ಕಟ್ಟನ್ನು ನೀಗಿಸಲು ಪಕ್ಷದ ಮುಖಂಡರು ಕಾರ್ಯಕರ್ತರ ಮೊರೆ ಹೋಗಿರುವುದು ವಿಪರ್ಯಾಸ.

ಉತ್ತರಾಖಂಡ ಕಾಂಗ್ರೆಸ್ ನಾಯಕರ ಆರ್ಥಿಕ ಬಿಕ್ಕಟ್ಟು

author img

By ETV Bharat Karnataka Team

Published : Mar 15, 2024, 7:37 PM IST

ಡೆಹ್ರಾಡೂನ್: ವಿವಿಧ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಲಾದ ಚುನಾವಣಾ ಬಾಂಡ್ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿದ್ದು, ಇದನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಆಯೋಗವು ತನ್ನ ಅಂತರ್ಜಾಲ ಪುಟದಲ್ಲಿ ಪ್ರಕಟಿಸಿದೆ. ಇದರಲ್ಲಿ ದೇಶದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ಪ್ರಮುಖ ಕಂಪನಿಗಳಿಂದ ಟ್ರಸ್ಟ್‌ ಮೂಲಕ ನೂರಾರು ಕೋಟಿ ರೂಪಾಯಿ ದೇಣಿಗೆ ಸಂದಾಯವಾಗಿದೆ ಎಂಬ ಅಂಶ ದೇಶದ ಮುಂದಿದೆ.

ಲಭ್ಯವಿರುವ ಮಾಹಿತಿ ಪ್ರಕಾರ ಕಾಂಗ್ರೆಸ್‌ ಪಡೆದ ದೇಣಿಗೆಗಿಂತ ಬಿಜೆಪಿಯೇ ಅತಿ ಹೆಚ್ಚು ದೇಣಿಗೆ ಸಂಗ್ರಹ ಮಾಡಿರುವ ರಾಜಕೀಯ ಪಕ್ಷವಾಗಿದೆ ಎಂಬ ಮಾಹಿತಿ ಕೂಡ ಬಹಿರಂಗಗೊಂಡಿದೆ. ಒಂದೆಡೆ ಹಣದ ಸಂಗ್ರಹ, ಮತ್ತೊಂದೆಡೆ ಹಣದ ಕೊರತೆ ಕಂಡು ಬರುತ್ತಿರುವುದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಹಾಗೂ ಜನಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪರಿಣಾಮ ಲೋಕಸಭೆಗೆ ಸ್ಪರ್ಧಿಸುವ ಮನಸ್ಸು ಇದ್ದರೂ ಕೂಡ ಕೆಲವರು ಸಂಪನ್ಮೂಲದ ಕೊರತೆಯಿಂದ ಹಿಂದೇಟು ಹಾಕುವ ಪರಿಸ್ಥಿತಿ ಉಲ್ಬಣಗೊಂಡಿದೆ. ಕಾಂಗ್ರೆಸ್​ ಪಕ್ಷದಲ್ಲಿ ಈ ರೀತಿಯ ವ್ಯವಸ್ಥೆ ತುಸು ಹೆಚ್ಚೇ ಇದೆ ಎಂಬುದು ಉತ್ತರಾಖಂಡ ರಾಜಕೀಯ ವಿಶ್ಲೇಷಕರ ಮಾತಾಗಿದೆ.

ಉತ್ತರಾಖಂಡದಲ್ಲಿ ಕಳೆದ ಕೆಲ ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಪಕ್ಷದೊಳಗೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿಯೇ ಕಂಡು ಬರುತ್ತಿವೆ. ಪಕ್ಷ ಸಂಘಟನೆಯ ಮಟ್ಟದಲ್ಲಿ ಹಣ ಸಂಗ್ರಹಿಸುವ ಪ್ರಯತ್ನಗಳು ನಡೆದಿದೆಯಾದರೂ ಅಷ್ಟು ಪರಿಣಾಮಕಾರಿಯಾಗಿಲ್ಲ. ಬಿಜೆಪಿ ಮುಂದೆ ಹಣಬಲದ ವಿಷಯದಲ್ಲಿ ಕಾಂಗ್ರೆಸ್ ಸ್ವಲ್ಪ ದುರ್ಬಲವಾಗಿದೆ ಅನ್ನೋದನ್ನು ಒತ್ತಿ ಹೇಳಬೇಕಿಲ್ಲ. ಕಾಂಗ್ರೆಸ್ ನಾಯಕರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್​ಗೆ ದೇಣಿಗೆ ನೀಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಒಂದೆಡೆ ಬಿಜೆಪಿ ಕಳೆದ ವರ್ಷಗಳಲ್ಲಿ ಉತ್ತರಾಖಂಡದಿಂದಲೇ 25 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸುವುದಾಗಿ ಹೇಳಿಕೊಂಡರೆ, ಮತ್ತೊಂದೆಡೆ ಉತ್ತರಾಖಂಡ ಕಾಂಗ್ರೆಸ್ ಪಕ್ಷ ಮುಖಂಡರಿಂದ ನಿಧಿ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂಬುದು ವಿಶ್ಲೇಷಕರ ಮಾತು.

ಕಾಂಗ್ರೆಸ್ ಅಭ್ಯರ್ಥಿಯ ಮಾತು: ಈಟಿವಿ ಭಾರತ ಜೊತೆ ಮಾತನಾಡಿದ ಗರ್ವಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಗೋಡಿಯಾಲ್, ತಮ್ಮ ಸಮಸ್ಯೆಯನ್ನು ಪಕ್ಷದ ಹೈಕಮಾಂಡ್ ಮುಂದೆ ಇಟ್ಟಿದ್ದೇವೆ. ಚುನಾವಣೆಗೆ ಸ್ಪರ್ಧಿಸದಿರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿರುವೆ. ಆದರೆ, ಕಾರ್ಯಕರ್ತರು ಸಂಪನ್ಮೂಲಗಳನ್ನು ಸಂಗ್ರಹಿಸುವ ಭರವಸೆ ನೀಡಿದ್ದರಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಚುನಾವಣಾ ಸಮಯದಲ್ಲಿ ಬಿಜೆಪಿಯು ಹಣ ಬಲ ಬಳಸುತ್ತಿದೆ ಎಂದು ಸಹ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.

ಬಿಜೆಪಿ ತನ್ನ ಸಂಘಟನೆಯ ಬಲದ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತದೆ. ಪಕ್ಷ ಚುನಾವಣೆಗೆ ಬೇಕಾದ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಪಕ್ಷದ ಕಾರ್ಯಕರ್ತರೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಹೀಗಲ್ಲ, ಇದಕ್ಕೆ ವಿರುದ್ಧವಾಗಿದೆ. ಕಾಂಗ್ರೆಸ್‌ನೊಳಗೆ ಸಂಘಟನೆ ಮತ್ತು ಕಾರ್ಯಕರ್ತರು ಎಂಬುದೇ ಇಲ್ಲ. ಹಾಗಾಗಿ ವಿನಾ ಕಾರಣ ಹೇಳಿಕೆ ನೀಡುತ್ತದೆ ಎಂದು ಬಿಜೆಪಿಯ ಕೆಲವು ನಾಯಕರು ಕೈ ಪಕ್ಷದ ಆರೋಪವನ್ನು ಅಲ್ಲಗಳೆದಿದ್ದಾರೆ.

ಅಭ್ಯರ್ಥಿಗಳ ಖರ್ಚಿಗೆ ಮಿತಿ: ಭಾರತೀಯ ಚುನಾವಣಾ ಆಯೋಗವು ಪ್ರತಿ ಲೋಕಸಭಾ ಅಭ್ಯರ್ಥಿಗೆ ವೆಚ್ಚದ ಮಿತಿಯನ್ನು ನಿಗದಿಪಡಿಸಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗೆ 95 ಲಕ್ಷ ರೂಪಾಯಿಗಳ ಚುನಾವಣಾ ವೆಚ್ಚದ ಮಿತಿ ಹೇರಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 2004ಕ್ಕೆ ಹೋಲಿಸಿದರೆ ಚುನಾವಣಾ ವೆಚ್ಚದ ಮಿತಿ 30 ಲಕ್ಷ ರೂಪಾಯಿಯಿಂದ ಇದೀಗ (2024ಕ್ಕೆ) 95 ಲಕ್ಷಕ್ಕೆ ಏರಿಕೆಯಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2019ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಸುಮಾರು 6,600 ಕೋಟಿ ರೂ. ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರ ಹೇಳಿಕೆ: ಹಣದ ವಿಷಯದಲ್ಲಿ ಬಿಜೆಪಿಯೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಕಾರ್ಯಕರ್ತರ ದೇಣಿಗೆಯಿಂದ ಬಂದ ಹಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕೆ​ ಇಳಿಯುತ್ತಿದ್ದಾರೆ. ಬಿಜೆಪಿಗೆ ಸಂಪನ್ಮೂಲಗಳ ಕೊರತೆಯಿಲ್ಲ. ಹಾಗಾಗಿ ಹಣದ ವಿಷಯದಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಸಾಧ್ಯವಿಲ್ಲ. ಚುನಾವಣಾ ಬಾಂಡ್‌ಗಳ ವಿವರಗಳು ಹೊರಬಂದ ನಂತರ ಇದು ಸಾರ್ವಜನಿಕವಾಗಿದೆ. ಬಡ ರೈತರು ಮತ್ತು ಕಾರ್ಮಿಕರ ಆರ್ಥಿಕ ಬಲದಿಂದ ಮಾತ್ರ ಪಕ್ಷವು ಗೆಲುವು ಸಾಧಿಸಲು ಸಾಧ್ಯ ಎಂದಿದ್ದಾರೆ.

ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಲಾಟರಿ ಕಿಂಗ್​ ಮಾರ್ಟಿನ್​ ಯಾರು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.