ಅದಿಲಾಬಾದ್ (ತೆಲಂಗಾಣ): ಆದಿಲಾಬಾದ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ವಿಷಯ ಕಲಿಸುವ ಯುವ ಶಿಕ್ಷಕರಿಂದ ಉತ್ತೇಜನಗೊಂಡ ಐದನೇ ತರಗತಿ ವಿದ್ಯಾರ್ಥಿಗಳು ಇಂಗ್ಲಿಷ್ ಕಥೆಗಳ ಸಂಪುಟ ಬರೆದಿದ್ದಾರೆ. ಫೆ.11ರಂದು ಹೈದರಾಬಾದ್‌ನ ಎನ್‌ಟಿಆರ್ ಗಾರ್ಡನ್‌ನಲ್ಲಿ ನಡೆಯಲಿರುವ ಪುಸ್ತಕ ಮೇಳದಲ್ಲಿ ಇದನ್ನು ರಿಲೀಸ್ ಮಾಡಲು ಮಕ್ಕಳ ಸಾಹಿತ್ಯ ಲೇಖಕರಾದ ಡಾ.ವಿ.ಆರ್.ಶರ್ಮಾ ಮತ್ತು ಡಾ.ಗಿರಿಪೆಲ್ಲಿ ಅಶೋಕ್ ಅವರಿಗೆ ಅನುಮತಿ ದೊರೆತಿದೆ.
'ಆಪಲ್‌ಗುಡ ಮಕ್ಕಳ ಕಥೆಗಳು': ಆದಿಲಾಬಾದ್ ಗ್ರಾಮಾಂತರ ಮಂಡಲ ಯಾಪಲಗುಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕ ಬುಕ್ಕ ಗಂಗಯ್ಯ ಅವರ ಈ ಪ್ರಯತ್ನವು ಹಲವರಿಗೆ ಸ್ಪೂರ್ತಿಯಾಗಿದೆ. ವಿದ್ಯಾರ್ಥಿಗಳಲ್ಲಿ ಓದುವ ಕೌಶಲ ಬೆಳೆಸುವ ಆಲೋಚನೆ ಹಾಗೂ ದೈನಂದಿನ ಪಠ್ಯಕ್ರಮದ ಬೋಧನೆಯ ಜೊತೆಗೆ ಮಕ್ಕಳಿಗೆ ಕಥೆಗಳನ್ನು ಹೇಳಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಕಥೆಗಳನ್ನು ಬರೆಯುವ ಆಸಕ್ತಿ ಮೂಡಿದೆ.
ಈ ರೀತಿಯ ಚುಟುವಟಿಕೆಗಳಿಂದ ಐದನೇ ತರಗತಿಯ 18 ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಕಥೆಗಳನ್ನು ಬರೆದಿದ್ದಾರೆ. ಮೊದಲಿಗೆ ಗಂಗಯ್ಯ ಅವುಗಳಲ್ಲಿ ಕೆಲವು ತಪ್ಪುಗಳು ಮತ್ತು ವ್ಯಾಕರಣ ದೋಷಗಳನ್ನು ಗಮನಿಸಿ ಅವುಗಳನ್ನು ಸರಿಪಡಿಸಿದ್ದಾರೆ. ಮತ್ತೆ ತಮ್ಮ ಬರಹಗಳ ಮೇಲೆ ವಿದ್ಯಾರ್ಥಿಗಳಿಗೆ ಹೋಮ್ವರ್ಕ್ ನೀಡಿದ್ದಾರೆ. ಬಳಿಕ ಶಿಕ್ಷಕರು ವಿದ್ಯಾರ್ಥಿಗಳ ಎಲ್ಲಾ ಬರಹಗಳನ್ನು ಕ್ರೋಢೀಕರಿಸಿ 'ಆಪಲ್‌ಗುಡ ಮಕ್ಕಳ ಕಥೆಗಳು' ಎಂಬ ಪುಸ್ತಕ ಹೊರತಂದಿದ್ದಾರೆ.
ಕಥೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶನ- ಶಿಕ್ಷಕ ಬುಕ್ಕ ಗಂಗಯ್ಯ: ''ವಿದ್ಯಾರ್ಥಿಗಳ ಆಸಕ್ತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ತುರಟಿ ಗಂಗಣ್ಣ ಅವರ ಪ್ರೋತ್ಸಾಹದಿಂದ ಪುಸ್ತಕ ತಂದಿರುವುದು ಸಂತಸ ತಂದಿದೆ'' ಎಂದು ಶಿಕ್ಷಕ ಬುಕ್ಕ ಗಂಗಯ್ಯ ತಿಳಿಸಿದರು. ''ಪುಸ್ತಕದಲ್ಲಿ ಮಕ್ಕಳು ಬರೆದ ಎಲ್ಲಾ ಕಥೆಗಳು ಇಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವಂತಿವೆ. ಕಥೆಗಳಲ್ಲಿ ಪಾತ್ರಗಳಿಗೆ ಆಧುನಿಕ ಹೆಸರುಗಳೊಂದಿಗೆ ಜೀವ ನೀಡಲಾಗಿದೆ. ಕಥೆಗಳ ಸಂಭಾಷಣೆಗಳನ್ನು ಸರಳ ಪದಗಳೊಂದಿಗೆ ಬರೆಯಲಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಕೃತಿ, ಜನರ ಜೀವನ ವಿಧಾನ, ಸ್ನೇಹದ ಮಹತ್ವ, ಶ್ರೀಮಂತ ಮತ್ತು ಬಡವರ ನಡುವಿನ ತಾರತಮ್ಯ ಮತ್ತು ಪರೋಪಕಾರದಂತಹ ವಿಷಯಗಳನ್ನು ತಿಳಿಸಲಾಗಿದೆ'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸ್ವಾಮಿನಾಥನ್, ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚರಣ್ ಸಿಂಗ್ಗೆ ಭಾರತ ರತ್ನದ ಗರಿ