ETV Bharat / bharat

ಕೆಲಸ ಬಿಟ್ಟು ರೈಲ್ವೆ ಹಳಿ ಮೇಲೆ ಮೊಬೈಲ್​ನಲ್ಲಿ ಲುಡೋ ಗೇಮ್​ ಆಡಿದ ನಾಲ್ವರು ಮಹಿಳಾ ಸಿಬ್ಬಂದಿ! - LUDO GAME railway track - LUDO GAME RAILWAY TRACK

ನಾಲ್ವರು ಮಹಿಳಾ ಸಿಬ್ಬಂದಿ ಮಾಡುವ ಕೆಲಸ ಬಿಟ್ಟು ರೈಲ್ವೆ ಹಳಿಯ ಮೇಲೆ ಮೊಬೈಲ್​​ನಲ್ಲಿ ಲುಡೋ ಗೇಮ್​ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ. ಈ ಬಗ್ಗೆ ಟೀಕೆಯೂ ಕೇಳಿಬಂದಿದೆ.

ರೈಲ್ವೆ ಹಳಿ ಮೇಲೆ ಮೊಬೈಲ್​ನಲ್ಲಿ ಲುಡೋ ಗೇಮ್​ ಆಡಿದ ನಾಲ್ವರು ಮಹಿಳಾ ಸಿಬ್ಬಂದಿ
ರೈಲ್ವೆ ಹಳಿ ಮೇಲೆ ಮೊಬೈಲ್​ನಲ್ಲಿ ಲುಡೋ ಗೇಮ್​ ಆಡಿದ ನಾಲ್ವರು ಮಹಿಳಾ ಸಿಬ್ಬಂದಿ (ETV Bharat)
author img

By ETV Bharat Karnataka Team

Published : Sep 28, 2024, 4:11 PM IST

ಇಟಾವಾ (ಉತ್ತರಪ್ರದೇಶ) : ಇತ್ತೀಚೆಗೆ ರೈಲು ಹಳಿ ತಪ್ಪುವ ಘಟನೆಗಳು ಹೆಚ್ಚುತ್ತಿವೆ. ರೈಲ್ವೆ ಇಲಾಖೆ ಮೇಲೆ ಭಾರೀ ಟೀಕೆಗಳು ಬರುತ್ತಿವೆ. ತೀವ್ರ ಕಟ್ಟೆಚ್ಚರ ವಹಿಸಲು ಇಲಾಖೆಯು ಸೂಚಿಸಿದ್ದರೂ, ಸಿಬ್ಬಂದಿ ನಿರ್ಲಕ್ಷ್ಯತನ ಮಾತ್ರ ಮುಂದುವರಿದಿದೆ. ನಾಲ್ವರು ಟ್ರಾಕ್​ ಸಿಬ್ಬಂದಿ ಮಾಡುವ ಕೆಲಸ ಬಿಟ್ಟು ಹಳಿಯ ಮೇಲೆಯೇ ಮೊಬೈಲ್​ನಲ್ಲಿ ಲುಡೋ ಗೇಮ್​ ಆಡುತ್ತಾ ಕುಳಿತ ವಿಡಿಯೋ ಹೊರಬಿದ್ದಿದೆ.

ದೆಹಲಿ - ಹೌರಾ ರೈಲ್ವೆ ಮಾರ್ಗದ ನಿಲ್ದಾಣವೊಂದರ ತುಸು ದೂರದಲ್ಲಿ ಕುಳಿತ ನಾಲ್ವರು ಮಹಿಳಾ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಲುಡೋ ಗೇಮ್ ಆಡಿದ್ದಾರೆ. ನಾಲ್ವರೂ ರೈಲ್ವೇ ಹಳಿ ಸುರಕ್ಷತೆ ಕೆಲಸ ಮಾಡಲು ಬಂದಿದ್ದರು. ಆದರೆ, ಮಾಡಬೇಕಾದ ಕೆಲಸ ಬಿಟ್ಟು ಹಳಿ ಮೇಲೆಯೇ ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಇದನ್ನು ಯಾರೋ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇಟಾವಾ ರೈಲು ಜಂಕ್ಷನ್​​ನಿಂದ ತುಸು ದೂರದಲ್ಲಿ ಈ ನಾಲ್ವರು ಮಹಿಳಾ ಉದ್ಯೋಗಿಗಳು ಲುಡೋ ಗೇಮ್​ ಆಡುತ್ತಾ ಕುಳಿತಿದ್ದಾಗ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಕೆಲಸ ಬಿಟ್ಟು ಹಳಿಯ ಮೇಲೆ ಗೇಮ್​​ ಆಡುತ್ತಿದ್ದೀರಲ್ಲ ಎಂದಾಗ, ಸಿಬ್ಬಂದಿ ಉಡಾಫೆಯಿಂದಲೇ ವರ್ತಿಸಿದ್ದಾರೆ. ವಿಡಿಯೋ ಮಾಡಬೇಡ ಎಂದು ಕೂಡ ಹೇಳಿದ್ದಾರೆ. ಆದರೂ, ಅವರು ಗೇಮ್​​ ಆಡುವುದನ್ನು ಬಿಟ್ಟು ಕೆಲಸಕ್ಕೆ ಮಾತ್ರ ಮರಳಿಲ್ಲ.

ಇತ್ತೀಚೆಗೆ ರೈಲ್ವೆ ದುರಂತ, ಹಳಿತಪ್ಪುವ ಘಟನೆಗಳು ನಡೆಯುತ್ತಿದ್ದು, ಸಿಬ್ಬಂದಿ ತೀವ್ರ ಎಚ್ಚರ ವಹಿಸಬೇಕಿದೆ. ಆದರೆ, ನಾಲ್ವರು ಮಹಿಳಾ ಸಿಬ್ಬಂದಿ ಮಾತ್ರ ಹಳಿ ಮೇಲೆಯೇ ಲುಡೋ ಗೇಮ್​ ಆಡಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ರೈಲ್ವೆಯಂತಹ ಪ್ರಮುಖ ಇಲಾಖೆಗಳಲ್ಲಿನ ಇಂತಹ ನಿರ್ಲಕ್ಷ್ಯವು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ನೌಕರರ ಈ ನಿರ್ಲಕ್ಷ್ಯತನ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತರಲಿದೆ. ನೌಕರರ ಇಂತಹ ಬೇಜವಾಬ್ದಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಸಿಬ್ಬಂದಿ ಲುಡೋ ಗೇಮ್​ ಕುರಿತು ರೈಲ್ವೆ ಇಲಾಖೆ ಅಧಿಕಾರಿ ಪುರನ್ ಮಲ್ ಮೀನಾ ಅವರನ್ನು ಪ್ರಶ್ನಿಸಿದಾಗ, ಹಳಿಯ ಮೇಲೆ ಯಾವ ಸಿಬ್ಬಂದಿ ಲೂಡೋ ಆಡುತ್ತಿದ್ದರು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಕ್ರಮಕ್ಕೆ ಸೂಚಿಸಲಾಗುವುದು. ದೆಹಲಿ - ಹೌರಾ ರೈಲು ಹಳಿಯು ದೇಶದ ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾದುದು ಸಿಬ್ಬಂದಿಯ ಕರ್ತವ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎರ್ನಾಕುಲಂ -ಯಲಹಂಕ ನಡುವೆ ವಿಶೇಷ ರೈಲು ಸೇವೆ ರದ್ದು: ಬೆಳಗಾವಿ - ಧಾರವಾಡದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಪರಿಷ್ಕರಣೆ - Special Trains

ETV Bharat Logo

Copyright © 2025 Ushodaya Enterprises Pvt. Ltd., All Rights Reserved.