ETV Bharat / bharat

ಆನ್​ಲೈನ್​ ಬೆಟ್ಟಿಂಗ್​ನಲ್ಲಿ ₹2 ಕೋಟಿ ಕಳೆದುಕೊಂಡ ಮಗನ ಕೊಂದ ತಂದೆ - Father Killed Son

author img

By ETV Bharat Karnataka Team

Published : May 12, 2024, 2:28 PM IST

ಆನ್‌ಲೈನ್ ಬೆಟ್ಟಿಂಗ್ ಅನೇಕ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತಿದೆ. ಮೋಜಿನಂತೆ ಆರಂಭವಾದ ಈ ಆಟಗಳು ನಂತರ ಅಭ್ಯಾಸವಾಗಿ ವ್ಯಸನವಾಗಿ ಮಾರ್ಪಟ್ಟು ಕೊನೆಗೆ ಜೀವವನ್ನೇ ಕಳೆದುಕೊಳ್ಳುವ ಪ್ರಸಂಗಗಳು ಎದುರಾಗುತ್ತಿವೆ. ಇದಕ್ಕೊಂದು ಹೊಸ ನಿದರ್ಶನ ಇಲ್ಲಿದೆ.

ONLINE BETTING
ಮಗನನ್ನು ಕೊಂದ ತಂದೆ (ಸಾಂದರ್ಭಿಕ ಚಿತ್ರ (ETV Bharat))

ಮೇದಕ್​(ತೆಲಂಗಾಣ): ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸೆಲ್ ಫೋನ್ ಕಾಣಸಿಗುತ್ತಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಒಂದೆಡೆ ಸಾಮಾಜಿಕ ಜಾಲತಾಣಗಳು, ಮತ್ತೊಂದೆಡೆ ಆನ್‌ಲೈನ್ ಗೇಮ್‌ಗಳಲ್ಲಿ ತೊಡಗಿ ಮಧ್ಯರಾತ್ರಿ ಕಳೆದರೂ ಮಕ್ಕಳು ನಿದ್ದೆ ಮಾಡದೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಆನ್‌ಲೈನ್ ಗೇಮ್‌ಗಳಿಗಾಗಿ ಕೆಲವರು ಕೋಟಿ-ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಎಲ್ಲೋ ಹೋಗುತ್ತಿದ್ದ ಈ ಬೆಟ್ಟಿಂಗ್ ದಂಧೆ ಇದೀಗ ಯೂಟ್ಯೂಬ್ ಚಾನೆಲ್, ವೆಬ್‌ಸೈಟ್​ಗಳ ಮೂಲಕ ಮಾತ್ರವಲ್ಲದೆ ಮೊಬೈಲ್ ಆ್ಯಪ್​ಗಳ ರೂಪದಲ್ಲೂ ಅಮಾಯಕರ ಜೇಬು ಲೂಟಿ ಮಾಡುತ್ತಿವೆ.

ಆನ್‌ಲೈನ್ ಬೆಟ್ಟಿಂಗ್‌ನಿಂದ ಪ್ರಾಣಹಾನಿ: ಜೂಜಿನ ಚಟಕ್ಕೆ ಬಿದ್ದಿರುವ ಜನರು ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಸಂತ್ರಸ್ತ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ನೊಂದ ಕೆಲವರು ಆತ್ಮಹತ್ಯೆಗೆ ಶರಣಾಗಿ ಅರ್ಧದಲ್ಲೇ ತಮ್ಮ ಜೀವನವನ್ನು ಅಂತ್ಯಗೊಳಿಸುತ್ತಿದ್ದಾರೆ. ಇನ್ನು ಕೆಲವು ಘಟನೆಗಳಲ್ಲಿ ಬೆಟ್ಟಿಂಗ್ ಚಟಕ್ಕೆ ಬಿದ್ದ ಮಕ್ಕಳಿಗೆ ಪಾಲಕರು ಛೀಮಾರಿ ಹಾಕುತ್ತಿದ್ದಾರೆ. ಈ ಕ್ರಮದಲ್ಲಿ ಎಷ್ಟು ಹೇಳಿದರೂ ಕೇಳದ ಕಾರಣ ಕ್ಷಣ ಮಾತ್ರದಲ್ಲಿ ಪ್ರಾಣ ತೆಗೆಯುವ ಘಟನೆಗಳೂ ನಡೆಯುತ್ತಿವೆ.

ಇತ್ತೀಚೆಗೆ ಬೆಟ್ಟಿಂಗ್ ಚಟಕ್ಕೆ ಬಿದ್ದ ಮಗನಿಗೆ ತಂದೆ ಥಳಿಸಿದ್ದಾರೆ. ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಿನ್ನಶಂಕರಂಪೇಟೆ ತಾಲೂಕಿನ ಭಗೀರಥಪಲ್ಲಿ ಮೂಲದ ಮುಖೇಶ್ ಕುಮಾರ್ ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಮೋಜಿಗಾಗಿ ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಸುಮಾರು 2 ಕೋಟಿ ರೂ.ವರೆಗೂ ಹಣ ಕಳೆದುಕೊಂಡಿದ್ದಾರೆ.

ಇದನ್ನು ಕಂಡ ತಂದೆ ಸತ್ಯನಾರಾಯಣ, ಮುಖೇಶ್ ಕುಮಾರ್ ಅವರನ್ನು ಆನ್​ಲೈನ್​ ಗೇಮ್​ ಆಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಮಾತು ಕೇಳಿರಲಿಲ್ಲ. ಈ ಪ್ರಕ್ರಿಯೆಯಿಂದ ಬೇಸತ್ತ ಸತ್ಯನಾರಾಯಣ ಶನಿವಾರ ಮಧ್ಯರಾತ್ರಿ ಕಬ್ಬಿಣದ ರಾಡ್​ನಿಂದ ತಲೆಗೆ ಹೊಡೆದಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಮುಖೇಶ್ ಕುಮಾರ್ ಸಾವನ್ನಪ್ಪಿದ್ದಾರೆ. ಮೃತರು ಚೇಗುಂಟಾ ತಾಲೂಕಿನ ಮಲ್ಯಾಲದಲ್ಲಿ ರೈಲ್ವೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಂದೆ-ಮಗನ ನಡುವಿನ ಜಗಳಕ್ಕೆ ಆನ್‌ಲೈನ್ ಬೆಟ್ಟಿಂಗ್ ಕಾರಣವಾಗಿದ್ದು, ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ, ಬೆಟ್ಟಿಂಗ್‌ನಿಂದಾಗಿ ಮುಖೇಶ್ ಕುಮಾರ್ ಅವರ ಮೇಡ್ಚಲ್‌ನಲ್ಲಿರುವ ಮನೆಗಳು ಮತ್ತು ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಗ್ಯಾಂಗ್ ಅರೆಸ್ಟ್ - Kalaburagi Torture Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.