ETV Bharat / bharat

Fact Check: ಜಡಿ ಮಳೆಯಿಂದ ಮರೀನಾ ಬೀಚ್ ರಸ್ತೆ ಮುಳುಗಿತ್ತಾ? ವೈರಲ್ ದೃಶ್ಯದ ಅಸಲಿ ಕಹಾನಿ ಇದು - FACT CHECK

ಜೋರು ಮಳೆಯಿಂದ ತಮಿಳುನಾಡಿನ ಚೆನ್ನೈನ ಮರೀನಾ ಬೀಚ್ ರಸ್ತೆ ಜಲಾವೃತವಾಗಿದೆ ಎಂದು ತೋರಿಸುವ ವೀಡಿಯೊ ಸುಳ್ಳು ಎಂಬುದು ಫ್ಯಾಕ್ಟ್ ಚೆಕ್​ ಮೂಲಕ ಗೊತ್ತಾಗಿದೆ.

X ಪೋಸ್ಟ್ ನ ಸ್ಕ್ರೀನ್ ಶಾಟ್ (ನ್ಯೂಸ್ ಮೀಟರ್)
ವೈರಲ್ ವಿಡಿಯೋದ ಸ್ಕ್ರೀನ್‌ ಶಾಟ್ (X ಪೋಸ್ಟ್ ನ ಸ್ಕ್ರೀನ್ ಶಾಟ್ (ನ್ಯೂಸ್ ಮೀಟರ್))
author img

By ETV Bharat Karnataka Team

Published : Dec 5, 2024, 7:37 PM IST

ಇದು ಸುಳ್ಳು: ಡಿಸೆಂಬರ್​ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚೆನ್ನೈನ ಮರೀನಾ ಬೀಚ್ ಪ್ರವಾಹಕ್ಕೆ ಸಿಲುಕಿದೆ ಎಂದು ಹೇಳಲಾದ ವೀಡಿಯೊ ವೈರಲ್ ಆಗಿದೆ. ಆದರೆ ಇದು ಸುಳ್ಳು.

ಸತ್ಯ ಏನು?: ಈ ವೀಡಿಯೊ ಕನಿಷ್ಠ ಸೆಪ್ಟೆಂಬರ್​ನಿಂದಲೂ ಆನ್​ಲೈನ್​ನಲ್ಲಿ ಇದೆ. ಇದು ಜೆಡ್ಡಾದ ವೀಡಿಯೊ ಎಂದು ಇದನ್ನು ಶೇರ್ ಮಾಡಿದವರು ಹೇಳಿಕೊಂಡಿದ್ದಾರೆ.

ಫೆಂಗಲ್ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದಾಗಿ ಡಿಸೆಂಬರ್ 1, 2024ರಂದು ಚೆನ್ನೈ ಜಲಾವೃತವಾಗಿತ್ತು. ಹಲವಾರು ರಸ್ತೆಗಳು ಮತ್ತು ಸುರಂಗಮಾರ್ಗಗಳು ಮುಳುಗಿದ್ದು, ಸಂಚಾರಕ್ಕೆ ಸಾಕಷ್ಟು ಅಡ್ಡಿ ಉಂಟಾಗಿತ್ತು. ನೆರೆಪೀಡಿತ ಸ್ಥಳಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದ ಚೆನ್ನೈನ ಮರೀನಾ ಬೀಚ್​ನ ವೀಡಿಯೊ ಎಂದು ಹೇಳಲಾದ ವೀಡಿಯೊವೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

X ಪೋಸ್ಟ್ ನ ಸ್ಕ್ರೀನ್ ಶಾಟ್ (ನ್ಯೂಸ್ ಮೀಟರ್)
ವೈರಲ್ ವಿಡಿಯೋದ ಅಸಲಿಯತ್ತು (X ಪೋಸ್ಟ್ ನ ಸ್ಕ್ರೀನ್ ಶಾಟ್ (ನ್ಯೂಸ್ ಮೀಟರ್))

ಎಕ್ಸ್‌ನಲ್ಲಿ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, "ಮರೀನಾ ಬೀಚ್ ರೋಡ್ ಚೆನ್ನೈ" ಎಂದು ಇದಕ್ಕೆ ಕ್ಯಾಪ್ಷನ್ ಬರೆದಿದ್ದಾರೆ. "ಮರೀನಾ ಬೀಚ್, ಚೆನ್ನೈ-ತಮಿಳುನಾಡು" (ಆರ್ಕೈವ್) ಎಂಬ ಪಠ್ಯದೊಂದಿಗೆ ವೀಡಿಯೊವನ್ನು ಹಾಕಲಾಗಿದೆ. ಇದೇ ರೀತಿಯಾಗಿ ಹೇಳಿಕೊಂಡು ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಕೂಡ ಶೇರ್ ಮಾಡಲಾಗಿದೆ.

ನ್ಯೂಸ್‌ ಮೀಟರ್‌ ಫ್ಯಾಕ್ಟ್ ಚೆಕ್: ನ್ಯೂಸ್ ಮೀಟರ್ ಈ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ. ಈ ವೀಡಿಯೊ ಕನಿಷ್ಠ ಸೆಪ್ಟೆಂಬರ್ ತಿಂಗಳಿನಿಂದಲೂ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿದೆ. ವೀಡಿಯೊದ ಕೀ ಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ವೀಡಿಯೊ ಕ್ಲಿಪ್ ಸೆಪ್ಟೆಂಬರ್ 3ರಂದು ಸ್ಟ್ರಿಂಗರ್ ಹಬ್ ಮೈಕ್ರೋಸಾಫ್ಟ್ ನೆಟ್‌ವರ್ಕ್ (ಎಂಎಸ್ಎನ್) ಪೋರ್ಟಲ್​ನಲ್ಲಿ ಪ್ರಕಟವಾಗಿರುವುದು ಕಂಡುಬಂದಿದೆ. ಭಾರಿ ಮಳೆಯಿಂದಾಗಿ ಜೆಡ್ಡಾದ ಬೀದಿಗಳಲ್ಲಿ ಪ್ರವಾಹ ಉಂಟಾಗಿರುವ ದೃಶ್ಯ ವೀಡಿಯೊದಲ್ಲಿದೆ ಎಂದು ಈ ಪೋರ್ಟಲ್​ನಲ್ಲಿ ಹೇಳಲಾಗಿದೆ.

ಟರ್ಕಿಯ ಮಾಧ್ಯಮ ಸಂಸ್ಥೆ ಕೇ ಟಿವಿ ಮತ್ತು ಆನ್ಲೈನ್ ಸುದ್ದಿ ವೀಡಿಯೊ ಪ್ಲಾಟ್‌ಫಾರ್ಮ್ ನ್ಯೂಸ್ ಫ್ಲೇರ್ ಸೆಪ್ಟೆಂಬರ್ 3ರಂದು ಈ ವೀಡಿಯೊವನ್ನು ಪ್ರಕಟಿಸಿವೆ ಎಂಬುದು ಫ್ಯಾಕ್ಟ್​ ಚೆಕ್​ನಲ್ಲಿ ಕಂಡು ಬಂದಿದೆ. ಜಡಿ ಮಳೆಯ ಕಾರಣದಿಂದ ಜೆಡ್ಡಾದ ಬೀದಿಗಳು ಜಲಾವೃತವಾಗಿರುವ ವೀಡಿಯೊ ಎಂದು ಎರಡೂ ಪೋರ್ಟಲ್​ಗಳು ವರದಿ ಮಾಡಿವೆ. ಇದಲ್ಲದೆ, ಸೌದಿ ಅರೇಬಿಯಾ ಮೂಲದ ಯೂಟ್ಯೂಬ್ ಚಾನೆಲ್ ಸೆಪ್ಟೆಂಬರ್ 3 ರಂದು ಇದೇ ವೀಡಿಯೊವನ್ನು ಹಂಚಿಕೊಂಡಿದ್ದು, ಸೆಪ್ಟೆಂಬರ್ 2 ರಂದು ಭಾರಿ ಮಳೆಯಿಂದಾಗಿ ಜೆಡ್ಡಾ ಬೀದಿಗಳು ಜಲಾವೃತವಾಗಿದ್ದನ್ನು ದೃಢಪಡಿಸಿದೆ.

ದಿ ವೆದರ್ ಮಾನಿಟರ್ ಎಂಬ ಎಕ್ಸ್ ಖಾತೆಯಲ್ಲಿ ಕೂಡ ಇದನ್ನು ಜೆಡ್ಡಾದ ವೀಡಿಯೊ ಎಂದು ಪೋಸ್ಟ್ ಮಾಡಲಾಗಿದೆ. ಅಲ್ಲದೆ, ಸೆಪ್ಟೆಂಬರ್ 2ರಂದು ಜೆಡ್ಡಾದಲ್ಲಿ ಭಾರಿ ಮಳೆಯಾಗಿದೆ ಎಂಬುದನ್ನು ಸೌದಿ ಪ್ರೆಸ್ ಏಜೆನ್ಸಿಯ ವೆಬ್ ಸೈಟ್ ಕೂಡ ದೃಢಪಡಿಸಿದೆ.

ವೀಡಿಯೊದ ಸ್ಥಳವನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಇದು ಸ್ಪಷ್ಟವಾಗಿ ಹಳೆಯ ಕ್ಲಿಪ್ ಮತ್ತು ಚೆನ್ನೈನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಗೊತ್ತಾಗುತ್ತದೆ.

(ಓದುಗರ ಗಮನಕ್ಕೆ: ಈ ಸುದ್ದಿಯನ್ನು ಮೊದಲು ನ್ಯೂಸ್ ಮೀಟರ್ ಪ್ರಕಟಿಸಿದೆ ಮತ್ತು ಶಕ್ತಿ ಕಲೆಕ್ಟಿವ್‌ನ ಭಾಗವಾಗಿ ಈಟಿವಿ ಭಾರತ್ ಮರುಪ್ರಕಟಿಸಿದೆ.)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.