ETV Bharat / bharat

''ನಾವು ಕಷ್ಟಪಟ್ಟು ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ'' : ಜೆಇಇ ಟಾಪರ್ ವೇದ್ ಲಹೋಟಿ - JEE ADVANCED TOPPER

author img

By ETV Bharat Karnataka Team

Published : Jun 9, 2024, 11:03 PM IST

ಜೆಇಇ (ಅಡ್ವಾನ್ಸ್ಡ್) ಟಾಪರ್ ವೇದ್ ಲಹೋಟಿ ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ತಂಗುವ ಮೂಲಕ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಕೋಟಾದಲ್ಲಿ ಏಕಾಂಗಿಯಾಗಿ ಓದಿ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ಅವರು ತಿಳಿಸಿದ್ದಾರೆ.

Ved Lahoti
ಜೆಇಇ ಟಾಪರ್ ವೇದ್ ಲಹೋಟಿ (ETV Bharat)

ಕೋಟಾ (ರಾಜಸ್ಥಾನ): ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿರುವ ವೇದ್ ಲಹೋಟಿ ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿಯೇ ಇದ್ದು ಪರೀಕ್ಷೆಗೆ ತಯಾರಿ ನಡೆಸಿದ್ದರು. ಅವರು ಮಧ್ಯಪ್ರದೇಶದ ಇಂದೋರ್‌ನಿಂದ ಬಂದವರಾಗಿದ್ದರೂ, ''ದೇಶಾದ್ಯಂತ ಪ್ರತಿಭಾವಂತ ಮಕ್ಕಳು ಇಲ್ಲಿಗೆ ಬರುತ್ತಾರೆ ಮತ್ತು ಆರೋಗ್ಯಕರ ಸ್ಪರ್ಧೆಯ ವಾತಾವರಣವಿದೆ" ಎಂಬ ಕಾರಣಕ್ಕೆ ಅವರು ಕೋಟಾವನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರು.

ವೇದ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಅಂದರೆ ; 360ಕ್ಕೆ 355 ಅಂಕ (98.61 ಶೇ) ಪಡೆದಿದ್ದಾರೆ. ಈ ಹಿಂದೆ ವೇದ್ 10 ನೇ ತರಗತಿಯ ಫಲಿತಾಂಶಗಳಲ್ಲಿ 98.6 % ಮತ್ತು 12ನೇ ತರಗತಿಯಲ್ಲಿ 97.6 % ಪಡೆದುಕೊಂಡಿದ್ದಾರೆ. ಜೆಇಇ-ಮೇನ್ಸ್ 2024 ರಲ್ಲಿ ಅವರು 300ಕ್ಕೆ 295 ಅಂಕಗಳನ್ನು ಪಡೆದಿದ್ದಾರೆ ಮತ್ತು ಅಖಿಲ ಭಾರತದಲ್ಲಿ 119ನೇ ರ‍್ಯಾಂಕ್ ಪಡೆದಿದ್ದಾರೆ.

ವೇದ್ ಬಾಲ್ಯದಿಂದಲೂ ಭಾವೋದ್ರಿಕ್ತ : ವೇದ್ ಎಲ್ಲದಕ್ಕೂ ತಾರ್ಕಿಕ ಉತ್ತರಗಳನ್ನು ನೀಡುತ್ತಿದ್ದರು. ಬಾಲ್ಯದಲ್ಲಿ ಶಾಲೆಯಲ್ಲಿ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದರೆ ಅಜ್ಜನ ಜೊತೆ ಶಾಲೆಗೆ ಹೋಗಿ ತನಗೆ ಅಂಕ ಏಕೆ ಕಡಿಮೆ ಎಂದು ಶಿಕ್ಷಕರನ್ನು ಕೇಳುತ್ತಿದ್ದರು. ಅವರ ಉತ್ಸಾಹ ಇನ್ನೂ ಹಾಗೇ ಉಳಿದಿದೆ. ಕುಟುಂಬದಲ್ಲಿ ಅಜ್ಜ (ಅಮ್ಮನ ತಂದೆ) ಆರ್. ಸಿ. ಸೋಮಾನಿ ನಿವೃತ್ತ ಇಂಜಿನಿಯರ್. ತಾಯಿ ಜಯ ಲಹೋಟಿ ಗೃಹಿಣಿ ಮತ್ತು ತಂದೆ ಯೋಗೇಶ್ ಲಾಹೋಟಿ ರಿಲಯನ್ಸ್ ಜಿಯೋದಲ್ಲಿ ನಿರ್ಮಾಣ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ವೇದ್ ಕೋಟಾವನ್ನು ಏಕೆ ಆಯ್ಕೆ ಮಾಡಿದ್ದರು : ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ವೇದ್, ಫಲಿತಾಂಶದಿಂದ ನನಗೆ ಸಂತೋಷವಾಗಿದೆ. ನಾನು ಪರೀಕ್ಷೆಗೆ ತುಂಬಾ ಕಷ್ಟಪಟ್ಟಿದ್ದೆ. ಇದರೊಂದಿಗೆ, ನಮ್ಮ ಶಿಕ್ಷಕರು ಮತ್ತು ಕುಟುಂಬದಿಂದ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದರು.

ಜೆಇಇ ಮೇನ್ಸ್‌ನಲ್ಲಿ ತುಂಬಾ ಸ್ಪರ್ಧೆ ಇದೆ ಎಂದ ಅವರು, ಪರೀಕ್ಷೆಯಲ್ಲಿ ನನಗೂ ಒಂದು ಪ್ರಶ್ನೆ ತಪ್ಪಾಗಿತ್ತು. ಅದೇ ಕಾರಣಕ್ಕೆ ನನಗೆ ರ‍್ಯಾಂಕ್ ಇಳಿಮುಖವಾದರೂ ನಂತರ ತುಂಬಾ ಕಷ್ಟಪಟ್ಟು ಕೊನೆಗೆ ಒಳ್ಳೆ ರ‍್ಯಾಂಕ್ ಗಳಿಸಿದೆ. ದೇಶಾದ್ಯಂತ ಪ್ರತಿಭಾವಂತ ಮಕ್ಕಳು ಇಲ್ಲಿಗೆ ಬರುತ್ತಾರೆ ಮತ್ತು ಆರೋಗ್ಯಕರ ಸ್ಪರ್ಧೆಯ ವಾತಾವರಣವಿದೆ ಎಂಬ ಕಾರಣಕ್ಕಾಗಿ ನಾನು ಕೋಟಾವನ್ನು ಆಯ್ಕೆ ಮಾಡಿಕೊಂಡೆ. ಇದು ನಾವು ಮುಂದುವರಿಯಲು ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.

ಐಐಟಿ ಬಾಂಬೆಯಿಂದ ಸಿಎಸ್‌ನಲ್ಲಿ ಬಿ ಟೆಕ್ ಮತ್ತು ನಂತರ ಎಐ ಕುರಿತು ಸಂಶೋಧನೆ : ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರವೇಶ ಪಡೆಯುವುದು ಸದ್ಯದ ಗುರಿ ಎಂದ ಅವರು, ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಉಳಿಯಲು ಬಯಸಿದ್ದೇನೆ. ದೇಶಕ್ಕೆ ವಿಶೇಷವಾದದ್ದನ್ನು ಮಾಡಬೇಕೆಂಬ ಹಂಬಲದಿಂದ ಸಂಶೋಧನೆಯತ್ತ ಮುಖ ಮಾಡಿರುವುದಾಗಿ ತಿಳಿಸಿದರು. ಭಾರತದಲ್ಲಿಯೇ ಇದ್ದು ಕೆಲಸ ಮಾಡಲು ಬಯಸುತ್ತೇನೆ. ಕಂಪ್ಯೂಟರ್ ಸೈನ್ಸ್ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನಾ ಅವಕಾಶಗಳಿವೆ. ಕೃತಕ ಬುದ್ಧಿಮತ್ತೆ ಜನಪ್ರಿಯವಾಗಿದೆ ಮತ್ತು ನಾನು ಕಷ್ಟಪಟ್ಟು ಕೆಲಸ ಮಾಡಲು ಮತ್ತು ಅದರ ಬಗ್ಗೆ ಸಂಶೋಧನೆ ಮಾಡಲು ಬಯಸುತ್ತೇನೆ ಎಂದಿದ್ದಾರೆ.

ಮಗನ ಯಶಸ್ಸಿನ ಬಗ್ಗೆ ವೇದ್ ತಂದೆ ಮಾತು : ವೇದ್ ಅವರ ತಂದೆ ಯೋಗೀಶ್ ಲಾಹೋಟಿ ಮಾತನಾಡಿ, ವೇದ್ ಹೆಸರನ್ನು ತಮ್ಮ ಮಗ ಸಾರ್ಥಕಗೊಳಿಸಿದ್ದಾನೆ. ಅವರ ಸಾಧನೆ ದಾಖಲೆಯಾಗಿ ಮಾರ್ಪಟ್ಟಿದೆ. ದೇಶಕ್ಕೆ ಕೀರ್ತಿ ತಂದಿದ್ದಾರೆ. ವೇದ್ ತನ್ನ ಬ್ಯಾಚ್‌ನಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸಿದ್ದಾರೆ. ಅವರ ಬಳಿ ಓದುತ್ತಿದ್ದ ವಿದ್ಯಾರ್ಥಿಗಳ ಮಟ್ಟವೂ ವೇದ್ ಅವರಂತೆಯೇ ಇತ್ತು. ಇಂತಹ ಸನ್ನಿವೇಶದಲ್ಲಿ ಪರೀಕ್ಷೆಯಲ್ಲಿ ಒಂದೊಂದು ಅಂಕಕ್ಕೂ ಸ್ನೇಹಿತರ ನಡುವೆ ಪೈಪೋಟಿ ಏರ್ಪಟ್ಟಿತ್ತು. ತರಗತಿಯಲ್ಲಿ ಸಂದೇಹಗಳ ಬಗ್ಗೆ ಉತ್ತಮ ಚರ್ಚೆಗಳು ನಡೆಯುತ್ತಿದ್ದವು ಎಂದಿದ್ದಾರೆ.

ಇದನ್ನೂ ಓದಿ : ನೀಟ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್; ಸಾಧನೆ ಬಗ್ಗೆ ವಿದ್ಯಾರ್ಥಿ ಕಲ್ಯಾಣ್​ ಹೇಳಿದ್ದೇನು? - NEET Topper

ETV Bharat Logo

Copyright © 2024 Ushodaya Enterprises Pvt. Ltd., All Rights Reserved.