ತಿರುವನಂತಪುರಂ (ಕೇರಳ) : ಈಟಿವಿ ಭಾರತ್ ಕೇರಳಕ್ಕೆ ಕೇರಳ ಶಾಸಕಾಂಗ ಅಂತಾರಾಷ್ಟ್ರೀಯ ಪುಸ್ತಕೋತ್ಸವದ 2ನೇ ಆವೃತ್ತಿಯ ಅತ್ಯುತ್ತಮ ವರದಿಗಾರಿಕೆ ಪ್ರಶಸ್ತಿ ಲಭಿಸಿದೆ. ಆನ್‌ಲೈನ್ ವಿಭಾಗದಲ್ಲಿ ಈಟಿವಿ ಭಾರತ್ ಅತ್ಯುತ್ತಮ ವರದಿಗಾಗಿ ಪ್ರಶಸ್ತಿ ಪಡೆದುಕೊಂಡಿದೆ. ಪ್ರಶಸ್ತಿಯು ರೂ. 10,000 ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.
15ನೇ ವಿಧಾನಸಭೆಯ 10ನೇ ಅಧಿವೇಶನವನ್ನು ಘೋಷಿಸಲು ವಿಧಾನಸಭೆ ಮಾಧ್ಯಮ ಕೊಠಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸ್ಪೀಕರ್ ಎ ಎನ್ ಶಂಸೀರ್ ಅತ್ಯುತ್ತಮ ವರದಿಗಾಗಿ ಪ್ರಶಸ್ತಿಯನ್ನು ಪ್ರಕಟಿಸಿದ್ದಾರೆ. ಪ್ರಶಸ್ತಿ ವಿತರಣೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ ಎಂಬುದು ತಿಳಿದುಬಂದಿದೆ.
ಕೇರಳ ಶಾಸಕಾಂಗ ಪುಸ್ತಕೋತ್ಸವದ ಎರಡನೇ ಆವೃತ್ತಿಯನ್ನು 01 ರಿಂದ 07 ನವೆಂಬರ್ 2023 ರವರೆಗೆ ಶಾಸಕಾಂಗ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪುಸ್ತಕೋತ್ಸವದಲ್ಲಿ ಅತ್ಯುತ್ತಮ ಪ್ರಸಾರಕ್ಕಾಗಿ ಮುದ್ರಣ, ದೃಶ್ಯ, ಶ್ರವಣ ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಕೇರಳ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆರ್ ಎಸ್ ಬಾಬು ಅಧ್ಯಕ್ಷರಾಗಿ ಮತ್ತು ಮಾಜಿ ಶಾಸಕಾಂಗ ಕಾರ್ಯದರ್ಶಿ ಎ. ಎನ್ ಬಶೀರ್ ಅವರನ್ನು ಸಂಚಾಲಕರನ್ನಾಗಿ ಒಳಗೊಂಡ ತೀರ್ಪುಗಾರರ ಸಮಿತಿಯು ಮಾಧ್ಯಮ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.
ಇದನ್ನೂ ಓದಿ: ಕೇರಳ ಪ್ರೊಫೆಸರ್ ಕೈ ಕಡಿದ ಪ್ರಕರಣ: 13 ವರ್ಷಗಳ ಬಳಿಕ ಮೊದಲ ಆರೋಪಿ ಬಂಧನ