ETV Bharat / bharat

ರಾಜ್ಯಸಭೆಯ 12 ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿ - Rajya Sabha Election

author img

By PTI

Published : Aug 7, 2024, 3:59 PM IST

ವಿವಿಧ ಕಾರಣಗಳಿಗಾಗಿ ತೆರವಾಗಿರುವ ರಾಜ್ಯಸಭೆಯ 12 ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಬುಧವಾರ ದಿನಾಂಕ ಪ್ರಕಟಿಸಿದೆ.

ರಾಜ್ಯಸಭೆ ಚುನಾವಣೆ
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ (ETV Bharat)

ನವದೆಹಲಿ: ತೆರವಾಗಿರುವ ಒಂಬತ್ತು ರಾಜ್ಯಗಳ 12 ರಾಜ್ಯಸಭಾ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್​ ಮಾಡಿದೆ. ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದೆ ಎಂದು ಆಯೋಗ ಬುಧವಾರ ತಿಳಿಸಿದೆ.

ರಾಜ್ಯಸಭೆ ಸದಸ್ಯರಾಗಿದ್ದ ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್, ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ 10 ಮಂದಿ ಈಚೆಗೆ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಪಿಯೂಷ್ ಗೋಯಲ್, ಸರ್ಬಾನಂದ ಸೋನೋವಾಲ್, ಜ್ಯೋತಿರಾದಿತ್ಯ ಸಿಂಧಿಯಾ ಕೇಂದ್ರ ಸಚಿವರಾಗಿದ್ದಾರೆ. ಡಾ.ಕೆ.ಕೇಶವ್​ರಾವ್​ ಮತ್ತು ಮಮತಾ ಮೊಹಾಂತ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸದ್ಯ ಹನ್ನೆರಡು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಸಲಾಗುವುದು ಎಂದು ಆಯೋಗ ಹೇಳಿದೆ.

ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ ಆಯೋಗ
ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ ಆಯೋಗ (ANI)

ರಾಜ್ಯಸಭಾ ಚುನಾವಣೆಗೆ ಆಗಸ್ಟ್ 14ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ಆಗಸ್ಟ್ 21 ಕೊನೆಯ ದಿನ. ಸೆಪ್ಟೆಂಬರ್ 3ರಂದು ಪ್ರತಿ ರಾಜ್ಯಸಭಾ ಸ್ಥಾನಕ್ಕೆ ಪ್ರತ್ಯೇಕವಾಗಿ ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ ಎಂದಿದೆ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಕೇಂದ್ರ ಸಚಿವರೂ ಆಗಿರುವ ಪಿಯೂಷ್ ಗೋಯಲ್ (ಮಹಾರಾಷ್ಟ್ರ), ಸರ್ಬಾನಂದ ಸೋನೋವಾಲ್ (ಅಸ್ಸಾಂ), ಜ್ಯೋತಿರಾದಿತ್ಯ ಸಿಂಧಿಯಾ(ಮಧ್ಯಪ್ರದೇಶ) ಸೇರಿದಂತೆ ಕಾಮಾಖ್ಯ ಪ್ರಸಾದ್​​ ತಾಸಾ (ಅಸ್ಸಾಂ), ಮಿಶಾ ಭಾರತಿ(ಬಿಹಾರ), ವಿವೇಕ್​ ಠಾಕೂರ್ (ಬಿಹಾರ)​, ದೀಪೇಂದ್ರ ಸಿಂಗ್​ ಹೂಡಾ (ಹರಿಯಾಣ), ಉದಯನ್​ರಾಜೆ ಬೋಸ್ಲೆ (ಮಹಾರಾಷ್ಟ್ರ), ಕೆ.ಸಿ.ವೇಣುಗೋಪಾಲ್​(ರಾಜಸ್ಥಾನ), ಬಿಪ್ಲಬ್​ ಕುಮಾರ್​ ದೇಬ್ (ತ್ರಿಪುರಾ)​, ಡಾ.ಕೆ.ಕೇಶವ್​ರಾವ್ (ತೆಲಂಗಾಣ), ಮಮತಾ ಮೊಹಾಂತ (ಒಡಿಶಾ) ಅವರಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ.

ಇವರಲ್ಲಿ ಇದರಲ್ಲಿ ಪಿಯೂಷ್​ ಗೋಯಲ್​, ಬಿಪ್ಲಬ್​ ಕುಮಾರ್​ ದೇಬ್​, ಮಿಶಾ ಭಾರತಿ ಅವರ ಅವಧಿಯು 2028ರವರೆಗೆ ಇತ್ತು. ಸರ್ಬಾನಂದ ಸೋನೋವಾಲ್, ಜ್ಯೋತಿರಾದಿತ್ಯ ಸಿಂಧಿಯಾ, ವಿವೇಕ್​ ಠಾಕೂರ್​, ದೀಪೇಂದ್ರ ಸಿಂಗ್​ ಹೂಡಾ, ಉದಯನ್​ರಾಜೆ ಬೋಸ್ಲೆ, ಕೆ.ಸಿ.ವೇಣುಗೋಪಾಲ್​, ಡಾ.ಕೆ.ಕೇಶವ್​ರಾವ್, ಮಮತಾ ಮೊಹಾಂತ ಅವರ ರಾಜ್ಯಸಭೆ ಅವಧಿಯು 2026 ರವರೆಗೆ ಇತ್ತು. ಕಾಮಾಖ್ಯ ಪ್ರಸಾದ್​​ ತಾಸಾ ಅವರ ಅವಧಿ 2025ಕ್ಕೆ ಮುಗಿಯಲಿತ್ತು.

ಇದನ್ನೂ ಓದಿ: ನನ್ನ ಹೆಸರ ಮುಂದೆ ಪತಿ ಅಮಿತಾಭ್​​​ ಹೆಸರೇಕೆ? ಪಾರ್ಲಿಮೆಂಟ್​ನಲ್ಲಿ ಜಯಾ ಬಚ್ಚನ್​ ಗರಂ - Jaya Bachchan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.