ETV Bharat / bharat

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಆರೋಪ: ಕಾಂಗ್ರೆಸ್​​ಗೆ ಇಸಿ ನೀಡಿದ ಸ್ಪಷ್ಟನೆ ಹೀಗಿದೆ - ELECTION COMMISSION

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದ ಕಾಂಗ್ರೆಸ್​​ಗೆ ಕೇಂದ್ರ ಚುನಾವಣಾ ಆಯೋಗ ಸಾಕ್ಷಿ ಸಮೇತ ಸ್ಪಷ್ಟನೆ ನೀಡಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಆರೋಪ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಆರೋಪ (ETV Bharat)
author img

By ANI

Published : 15 hours ago

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಅಂಕಿ ಅಂಶ ಮತ್ತು ಮತದಾರರ ಸೇರ್ಪಡೆಯಲ್ಲಿ ಗೋಲ್​​ಮಾಲ್​ ನಡೆದಿದೆ ಎಂಬ ಕಾಂಗ್ರೆಸ್​ನ ಆರೋಪಕ್ಕೆ ಕೇಂದ್ರ ಚುನಾವಣಾ ಆಯೋಗ ಸವಿಸ್ತಾರವಾದ ಸ್ಪಷ್ಟನೆಯನ್ನು ಇಂದು ನೀಡಿದೆ.

ಶೇಕಡಾವಾರು ಮತದಾನ ಮತ್ತು ಅದನ್ನು ಆಯೋಗದ ವೆಬ್​ಸೈಟ್​​ನಲ್ಲಿ ಅಪ್​ಲೋಡ್​ ಮಾಡುವ ವಿಧಾನದ ಬಗ್ಗೆಯೂ ಅದು ಮಾಹಿತಿ ನೀಡಿದೆ. ಕಾಂಗ್ರೆಸ್​ ಮಾಡುತ್ತಿರುವ ಆರೋಪಗಳು ಮತದಾರರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಎಲ್ಲ ದೂರುಗಳನ್ನು ಅಲ್ಲಗಳೆದಿದೆ.

ಡೇಟಾ ಅಪ್​ಡೇಟ್​​ ವಿಳಂಬಕ್ಕೆ ಕಾರಣವಿದು: ಕಾಂಗ್ರೆಸ್​​ಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ಮತದಾನ ಮುಗಿದ ಬಳಿಕ ಅದರ ಶೇಕಡಾವಾರು ಪ್ರಮಾಣವನ್ನು ಸಂಜೆ 5 ರಿಂದ ರಾತ್ರಿ 11:45ರ ವರೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. ಮತದಾನ ಕೇಂದ್ರದಲ್ಲಿ ಆಯಾ ಪಕ್ಷಗಳ ಏಜೆಂಟರು ಕೂಡ ಮತದಾರರ ಲೆಕ್ಕ ಹಾಕಿರುತ್ತಾರೆ. ಅವರಿಂದಲೂ ಮಾಹಿತಿ ಪಡೆದುಕೊಂಡು ಅಂತಿಮವಾಗಿ ಕ್ರೋಢೀಕರಿಸಿ ಶೇಕಡಾ ಪ್ರಮಾಣ ಪ್ರಕಟಿಸಲಾಗುತ್ತದೆ ಎಂದು ದೃಢಪಡಿಸಿದೆ.

ಮತದಾನದ ಮುಕ್ತಾಯದ ಸಮಯದಲ್ಲಿ ಅಭ್ಯರ್ಥಿಗಳ ಅಧಿಕೃತ ಏಜೆಂಟರ ಬಳಿ ಮತದಾರರ ಮತದಾನ ವಿವರಗಳನ್ನು ನೀಡುವ ಶಾಸನಬದ್ಧ ನಮೂನೆ 17ಸಿ ಇರುವುದರಿಂದ ಚಲಾವಣೆಯಾದ ಮತದಾನದ ಪ್ರಮಾಣವನ್ನು ಬದಲಾಯಿಸುವುದು ಅಸಾಧ್ಯ ಎಂದು ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ.

ಮತದಾರರ ಸೇರ್ಪಡೆಗೆ ಸ್ಪಷ್ಟನೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮೊದಲು ಮತಪಟ್ಟಿಯಲ್ಲಿ ಮತದಾರರ ಸೇರ್ಪಡೆಯಲ್ಲೂ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್​ ಆರೋಪಿಸಿತ್ತು. ಇದಕ್ಕೂ ಉತ್ತರ ನೀಡಿರುವ ಚುನಾವಣಾ ಆಯೋಗವು, ಮತದಾರರ ಸೇರ್ಪಡೆ ಅಥವಾ ಅಳಿಸಿ ಹಾಕುವುದು ಅಷ್ಟು ಸುಲಭವಲ್ಲ ಎಂದಿದೆ.

ಜುಲೈನಿಂದ ನವೆಂಬರ್ ನಡುವೆ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 50 ಸಾವಿರ ಮತದಾರರ ಸೇರ್ಪಡೆಯಾಗಿದೆ. ಇದರಲ್ಲಿ 47 ಕ್ಷೇತ್ರಗಳಲ್ಲಿ ಮಹಾಯುತಿ ಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂಬ ದೂರು ಅವಾಸ್ತವಿಕವಾಗಿದೆ ಮತ್ತು ತಪ್ಪು ಮಾಹಿತಿಯಾಗಿದೆ ಎಂದು ಚುನಾವಣಾ ಆಯೋಗ ಉತ್ತರಿಸಿದೆ.

ಈ ಅವಧಿಯಲ್ಲಿ ಕೇವಲ 6 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 50 ಸಾವಿರ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಿದ್ದಾಗ, 47 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲ್ಲುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಟ್ಟಿಗೆ ಮತದಾರರ ಸೇರ್ಪಡೆ ವೇಳೆ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕಾಗುತ್ತದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಛತ್ತೀಸ್​ಗಢ ಸರ್ಕಾರದಿಂದ ನಟಿ ಸನ್ನಿ ಲಿಯೋನ್​​ಗೆ ಮಾಸಿಕ ಪಿಂಚಣಿ ಸಂದಾಯ: ಅರೆ, ಹೌದೇ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.