ಮೇಡಾರಂ (ತೆಲಂಗಾಣ): ಮೇಡಾರಂ ಸಮ್ಮಕ್ಕ- ಸರಳಮ್ಮ ಜಾತ್ರೆಗೆ ಎತ್ತಿನ ಬಂಡಿಗಳ ಮೂಲಕ ಪ್ರಯಾಣಿಸುವ ಪುರಾತನ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಭಕ್ತರು ತಮ್ಮ ಪೂರ್ವಜರ ಪದ್ಧತಿಗಳನ್ನು ಇವತ್ತಿಗೂ ಗೌರವಿಸುತ್ತಾ ಮುನ್ನಡೆಯುತ್ತಿದ್ದಾರೆ. ವೆಂಕಟಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಎತ್ತಿನ ಬಂಡಿಗಳಲ್ಲಿ ಯಾತ್ರಾರ್ಥಿಗಳು ತಮ್ಮ ವಸ್ತುಗಳನ್ನು ಸಮೇತ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಎತ್ತಗಳಿಗೆ ಕೊರಳಿಗೆ ಕಟ್ಟಿರುವ ಗಂಟೆಗಳ ಶಬ್ಧ, ಬಂಡಿಯ ಚಕ್ರಗಳ ಲಯಬದ್ಧವಾದ ನಾದವು ಯಾತ್ರೆಯ ವಿಶೇಷತೆ ಎಂಬಂತೆ ಕಾಣಿಸುತ್ತದೆ.
ಹಿಂದಿನ ಆಚರಣೆಗಳನ್ನು ನೆನಪುಗಳು ಆರಾಧಕರಲ್ಲಿ ಧನ್ಯತಾ ಭಾವನೆಯನ್ನು ಮೂಡಿಸುತ್ತವೆ. ಭಕ್ತರು ಎತ್ತಿನ ಬಂಡಿ ಯಾತ್ರೆಯ ಮೂಲಕ ಜಾತ್ರೆಗೆ ಮತ್ತಷ್ಟು ಮೆರುಗು ತರುತ್ತಾರೆ. ಜಾತ್ರೆ ಚಟುವಟಿಕೆಯ ಕೇಂದ್ರವಾಗಿದೆ. ಜಾತ್ರೆಗೆ ರಾಜ್ಯದಿಂದ ಮಾತ್ರವಲ್ಲದೇ ಛತ್ತೀಸ್‌ಗಢದಂತಹ ದೂರದ ಭಾಗಗಳಿಂದಲೂ ಭಕ್ತರು ಬರುತ್ತಾರೆ. ಈ ಸಂದರ್ಭದಲ್ಲಿ ಉತ್ಸವದೊಂದಿಗೆ ಉತ್ಸಾಹವನ್ನು ಇಮ್ಮಡಿಗೊಳ್ಳುತ್ತದೆ.
ಯಾತ್ರೆಯಲ್ಲಿ ನಗು, ಸಂಗೀತ, ಭಕ್ತಿ: ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸುವ ಭಕ್ತರು ಜಾತ್ರೆಯ ಆವರಣಕ್ಕೆ ಬಂದು ಸಂತೋಷದಾಯಕ ಸೌಹಾರ್ದತೆ ಮತ್ತು ಉತ್ಸಾಹಭರಿತ ವಾತಾವರಣಕ್ಕೆ ಸಾಕ್ಷಿಯಾಗುತ್ತಾರೆ. ಎತ್ತಿನ ಗಾಡಿಗಳಲ್ಲಿ ಪ್ರಯಾಣಿಸುವ ಅನುಭವವು ಕೇವಲ ಸಾರಿಗೆ ಸಾಧನವಾಗಿರದೇ ತೀರ್ಥಯಾತ್ರೆಯ ಧನ್ಯತೆಯನ್ನು ತಂದುಕೊಡುತ್ತದೆ. ಯಾತ್ರೆಯಲ್ಲಿ ನಗು, ಸಂಗೀತ ಮತ್ತು ಭಕ್ತಿಯಿಂದ ತುಂಬಿ ಹೋಗಿರುತ್ತದೆ.
ಗಮನಸೆಳೆಯುವ ಭಕ್ತರ ಏಕತೆ ಭಾವ: ಆಧುನಿಕ ಸಾರಿಗೆಯ ಆಗಮನದ ಹೊರತಾಗಿಯೂ, ಎತ್ತಿನ ಬಂಡಿ ಯಾತ್ರೆಯ ಮೂಲಕ ಮೇಡಾರಂ ಸಮ್ಮಕ್ಕ-ಸರಳಮ್ಮ ಜಾತ್ರೆಯಲ್ಲಿ ಭಾಗವಹಿಸುವ ಸಂಪ್ರದಾಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಬರಲಾಗುತ್ತದೆ. ಭಕ್ತರು ಪವಿತ್ರ ಸ್ಥಳಕ್ಕೆ ಕಚ್ಚಾ ಮಾರ್ಗಗಳನ್ನು ಹಾದು ಹೋಗುವಾಗ, ಅವರು ತಮ್ಮೊಂದಿಗೆ ಹಿಂದಿನ ತಲೆಮಾರುಗಳ ನೆನಪುಗಳನ್ನು ಮೆಲಕು ಹಾಕುತ್ತಾರೆ. ಭಕ್ತರು ಎತ್ತಿನ ಬಂಡಿಗಳಲ್ಲಿ ಮೇಡಾರಂ ಸಮ್ಮಕ್ಕ- ಸರಳಮ್ಮ ಜಾತ್ರೆಯಲ್ಲಿ ಸೇರುತ್ತಿದ್ದಂತೆ, ಅವರು ಸಂಪ್ರದಾಯ ಮತ್ತು ಆಧ್ಯಾತ್ಮಿಕತೆಯ ಶ್ರೀಮಂತ ವಸ್ತ್ರವನ್ನು ಸ್ವೀಕರಿಸುತ್ತಾರೆ. ಎತ್ತುಗಳ ಗದ್ದಲ ಮತ್ತು ಬಂಡಿಗಳ ಕಲರವದ ನಡುವೆಯೇ ಭಕ್ತರ ಏಕತೆ ಭಾವ ಗಮನ ಸೆಳೆಯುತ್ತದೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್: ಬುಡಕಟ್ಟು ಜನಾಂಗದವರ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಮೇಡಾರಂ ಸಮ್ಮಕ್ಕ-ಸರಳಮ್ಮ ಜಾತ್ರೆ ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು. ಇದು ಶಾಶ್ವತವಾಗಿ ಉಳಿಯುವ ನಮ್ಮ ಸಾಂಸ್ಕೃತಿಕ ಪರಂಪರೆಯ ಆಚರಣೆಯಾಗಿದೆ. ಈ ಜಾತ್ರೆಯು ಭಕ್ತಿ, ಸಂಪ್ರದಾಯ ಮತ್ತು ಸಮುದಾಯದ ಮನೋಭಾವದ ಉತ್ತಮ ಸಂಯೋಜನೆಯಾಗಿದೆ. ಸಮ್ಮಕ್ಕ-ಸರಳಮ್ಮನವರಿಗೆ ನಮಸ್ಕರಿಸೋಣ ಮತ್ತು ಅವರು ತೋರಿದ ಏಕತೆ ಮತ್ತು ಶೌರ್ಯವನ್ನು ಸ್ಮರಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಎಂಎಸ್‌ಪಿ, ಹೊಲಗದ್ದೆ ಸಮಸ್ಯೆ, ಎಫ್‌ಐಆರ್ ಸೇರಿ ರೈತರೊಂದಿಗೆ 5ನೇ ಸುತ್ತಿನ ಸಭೆಗೆ ಕೇಂದ್ರ ಸಿದ್ಧ