ETV Bharat / bharat

ಭಾರತ ರತ್ನ ಘೋಷಣೆ ಬಗ್ಗೆ ತಕರಾರು ಬೇಡ, ರಾಮ ಮಂದಿರ ದೇಶದ ಸಂಕೇತವಾಗಲಿ: ದೇವೇಗೌಡ - ಸಂಸತ್​ ಅಧಿವೇಶನ

ರಾಮಮಂದಿರವು ದೇಶದ ಸಂಕೇತವಾಗಲಿ. ದೇಶದ ಐವರು ಮಹಾನ್​ ನಾಯಕರಿಗೆ ಘೋಷಿಸಿರುವ ಭಾರತ ರತ್ನ ಗೌರವದ ಬಗ್ಗೆ ವಿಪಕ್ಷಗಳು ತಕರಾರು ಮಾಡುವುದು ಬೇಡ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಮನವಿ ಮಾಡಿದ್ದಾರೆ.

ದೇವೇಗೌಡ
ದೇವೇಗೌಡ
author img

By PTI

Published : Feb 10, 2024, 3:24 PM IST

ನವದೆಹಲಿ: ಮಾಜಿ ಉಪಪ್ರಧಾನಿ ಎಲ್​.ಕೆ. ಅಡ್ವಾಣಿ, ಹಸಿರು ಕ್ರಾಂತಿಯ ಹರಿಕಾರ ಎಂಎಸ್​​ ಸ್ವಾಮಿನಾಥನ್​ ಸೇರಿದಂತೆ ಐವರು ಗಣ್ಯರಿಗೆ ಕೇಂದ್ರ ಸರ್ಕಾರ ನೀಡಿರುವ ಭಾರತ ರತ್ನ ಪ್ರಶಸ್ತಿಯ ಬಗ್ಗೆ ವಿಪಕ್ಷಗಳು ತಕರಾರು ವ್ಯಕ್ತಪಡಿಸಬಾರದು ಎಂದು ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಅವರು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ರಾಜ್ಯಸಭೆಯಲ್ಲಿ ಸ್ವಾಗತಿಸಿದ ಅವರು, ಭಾರತ ರತ್ನ ಪ್ರಶಸ್ತಿ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದುವುದು ಬೇಡ. ಮಹಾನ್ ನಾಯಕರಿಗೆ ದೇಶದ ಅತ್ಯುಚ್ಛ ಗೌರವ ನೀಡಲಾಗಿದೆ. ಇದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಸಂಸತ್​​ ಬಜೆಟ್ ಅಧಿವೇಶನದ ಕೊನೆಯ ಅಧಿವೇಶನದಲ್ಲಿ ಹೇಳಿದರು.

ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್​, ಚೌಧರಿ ಚರಣ್ ಸಿಂಗ್, ಪಿವಿ ನರಸಿಂಹರಾವ್ ಮತ್ತು ಎಂಎಸ್ ಸ್ವಾಮಿನಾಥನ್ ಅವರಿಗೆ ಮರಣೋತ್ತರ ಸೇರಿ ಎಲ್​ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗಿದೆ. ಈ ಐವರು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧಕರನ್ನು ಗುರುತಿಸಿರುವ ಸರ್ಕಾರ ಕ್ರಮ ಸರಿಯಾಗಿದೆ ಎಂದು ಮಾಜಿ ಪ್ರಧಾನಿಗಳು ಅಭಿಪ್ರಾಯಪಟ್ಟರು.

ಸದ್ಗುಣ ರಾಮ ದೇಶದ ಅಡಿಪಾಯ: ರಾಮಮಂದಿರ ನಿರ್ಮಾಣದ ಕುರಿತು ಮೇಲ್ಮನೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ದೇವೇಗೌಡರು, ರಾಷ್ಟ್ರವನ್ನು ಒಂದುಗೂಡಿಸಲು ಮತ್ತು ರಾಷ್ಟ್ರಕ್ಕೆ ಭದ್ರ ಅಡಿಪಾಯ ಹಾಕಲು ಶ್ರೀರಾಮ ದೈವಿಕ ಆಶೀರ್ವಾದ ಬೇಕಿದೆ. ನಾನೂ ಜನವರಿ 22 ರಂದು ನಡೆದ ಬಾಲರಾಮನ ಪ್ರಾಣ ಪ್ರರಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಹೇಳಿದರು.

ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಅಯೋಧ್ಯೆಯಲ್ಲಿನ ಶ್ರೀ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿದ್ದೆವು. ಇದು ಕೋಟ್ಯಂತರ ಭಾರತೀಯರಿಗೆ ಭಕ್ತಿ, ದೈವತ್ವದ ಕ್ಷಣವಾಗಿದೆ. ಅಯೋಧ್ಯೆ ರಾಮನು ನಮ್ಮ ಹೃದಯ ಮತ್ತು ಮನಸ್ಸಿನಲ್ಲಿ ಇದ್ದಾನೆ. ರಾಮಚಂದ್ರ ಪ್ರಭು ಸದಾಚಾರದ ಪ್ರತೀಕ, ಪ್ರೀತಿ ಮತ್ತು ದಯೆಯ ಸಂಕೇತ, ಧರ್ಮ ಮತ್ತು ರಾಜಧರ್ಮವನ್ನು ಅನುಸರಿಸಿದ ವ್ಯಕ್ತಿ. ಸದ್ಗುಣಗಳ ಸಾಕಾರಮೂರ್ತಿಯು ದೇಶವೊಂದೇ ಅಲ್ಲದೇ, ವಿಶ್ವದ ಆರಾಧಕ ಎಂದು ಬಣ್ಣಿಸಿದರು.

ಶ್ರೀರಾಮನಲ್ಲಿ ಅಡಕವಾಗಿರುವ ಈ ಮೌಲ್ಯಗಳೇ ಮಹಾತ್ಮ ಗಾಂಧಿ ಅವರನ್ನು ಸೆಳೆದವು. ಶ್ರೀರಾಮನನ್ನು ರಾಷ್ಟ್ರದ ಶ್ರೇಷ್ಠ ಸದ್ಗುಣಗಳ ಸಂಕೇತವನ್ನಾಗಿ ಮಾಡಿದವರು ಮಹಾತ್ಮ ಗಾಂಧಿ. ಶ್ರೀರಾಮನ ದೈವಿಕ ಆಶೀರ್ವಾದವೇ ರಾಷ್ಟ್ರ ಒಗ್ಗೂಡುವುದಕ್ಕೆ ಅಡಿಪಾಯ ಎಂದರು.

ರಾಮಮಂದಿರ ದೇಶದ ಸಂಕೇತವಾಗಲಿ: ಅಯೋಧ್ಯೆಯಲ್ಲಿರುವ ಭವ್ಯ ಶ್ರೀರಾಮ ಮಂದಿರವು ನಮ್ಮ ರಾಷ್ಟ್ರ ಮತ್ತು ಪ್ರಪಂಚದ ಸಂಕೇತವಾಗಲಿ ಎಂದು ಗೌಡರು ಅಭಿಪ್ರಾಯಪಟ್ಟರು. ರಾಮಲಲ್ಲಾ ಪ್ರಾಣಪ್ರತಿಷ್ಠಾ ದಿನಕ್ಕೂ 11 ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣವಾದ ಉಪವಾಸ ವ್ರತ ಮಾಡಿದ್ದು, ಅಭಿನಂದನಾರ್ಹ. ಮೋದಿ ಅವರು, ಇದನ್ನು ನಿರ್ವಹಿಸುವಾಗ ಸಮರ್ಪಿತ ಮತ್ತು ಪ್ರಾಮಾಣಿಕರಾಗಿದ್ದರು ಎಂಬುದು ಸಂತೋಷದ ವಿಚಾರ ಎಂದರು.

ಪ್ರಸಕ್ತ ನಡೆಯುತ್ತಿರುವ ಲೋಕಸಭೆ ಅಧಿವೇಶನವು ಸಾರ್ವತ್ರಿಕ ಚುನಾವಣೆಗೂ ಮುನ್ನ ಕೊನೆಯದ್ದಾಗಿದೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಬಜೆಟ್ ಅಧಿವೇಶನವನ್ನು ಆರಂಭದಲ್ಲಿ ಫೆಬ್ರವರಿ 9 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಒಂದು ದಿನ ವಿಸ್ತರಿಸಿ ರಾಮಮಂದಿರ ನಿರ್ಮಾಣ ಚರ್ಚೆ ನಡೆಸಲಾಯಿತು.

ಇದನ್ನೂ ಓದಿ: ನರಸಿಂಹ ರಾವ್, ಚರಣ್ ಸಿಂಗ್, ಸ್ವಾಮಿನಾಥನ್​ಗೆ ಭಾರತ ರತ್ನ: ಸ್ವಾಗತಿಸಿದ ಖರ್ಗೆ, ಸೋನಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.